ಪಯಣ ನಿಲ್ಲಿಸಿದ ಮಿಲ್ಖಾ ಸಿಂಗ್! ಆಗಿದ್ದಾದರೂ ಏನು?ಮಿಲ್ಖಾ ಸಿಂಗ್, “ದಿ ಫ್ಲೈಯಿಂಗ್ ಸಿಖ್”, ಕೊನೆಯುಸಿರೆಳೆದಿದ್ದಾರೆ. ತಮ್ಮ 91 ನೇ ವಯಸ್ಸಿನಲ್ಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ಕೋವಿಡ್ ಸೋಂಕಿನಿಂದ ಭಾದಿತರಾಗಿ ಭಾರತೀಯ ಪ್ರಸಿದ್ಧ ಓಟಗಾರ ಮಿಲ್ಖಾ ಸಿಂಗ್ ಶುಕ್ರವಾರ ನಿಧನರಾದರು. 91ರ ಹರೆಯದವರಾದ ಮಿಲ್ಖಾ ಸಿಂಗ್ ಮೇ 19 ರಂದು COVID- ಸೋಂಕು ದೃಢಪಟ್ಟಿದ್ಜು ಆದರೆ ರೋಗಲಕ್ಷಣ ಇಲ್ಲದಿರುವುದರಿಂದ, ನಂತರ ಅವರ ಚಂಡೀಗಢ ನಿವಾಸದಲ್ಲಿ ಪ್ರತ್ಯೇಕ ಕೋಣೆಯಲ್ಲಿದ್ದರು. ಆದಾದ ಕೆಲವು ದಿನಗಳ ನಂತರ ಮೇ 24 ರಂದು ಮಿಲ್ಖಾ ಸಿಂಗ್ ರನ್ನು “COVID ನ್ಯುಮೋನಿಯಾ” ಕಾರಣ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಯಿತು. ನಂತರ ಅವರನ್ನು ಜೂನ್ 3 ರಂದು ಚಂಡೀಗಢನ PGIMERನಲ್ಲಿ ಸ್ಥಳಾಂತರಿಸಲಾಯಿತು.

ಮಿಲ್ಖಾ ಸಿಂಗ್ ಕೊನೆಯುಸಿರೆಳೆಯು ಸುಮಾರು ನಾಲ್ಕು ದಿನಗಳ ಹಿಂದೆ ಮಿಲ್ಖಾ ಸಿಂಗ್ ಅವರ ಧರ್ಮಪತ್ನಿ ಕೂಡ ಇಹಲೋಕ ತ್ಯಜಿಸಿದ್ದರು.

ಕೋವಿಡ್ ಸೋಂಕಿನಿಂದ ಹೊಬಂದಿದ್ದ ಅವರನ್ನು ಕೋವಿಡ್ ಆಸ್ಪತ್ರೆಯಿಂದ ವೈದ್ಯಕೀಯ ಐಸಿಯುಗೆ ಸ್ಥಳಾಂತರಿಸಲಾಯಿತು. ಆದರೆ ವೈದ್ಯಕೀಯ ತಂಡದ ಸತತ ಪ್ರಯತ್ನಗಳ ಹೊರತಾಗಿಯೂ, ಮಿಲ್ಖಾ ಸಿಂಗ್ ಜಿ ಅವರ ಗಂಭೀರ ಸ್ಥಿತಿಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಧೈರ್ಯಶಾಲಿ ಹೋರಾಟದ ನಂತರ 2021 ರ ಜೂನ್ 18 ರಂದು ರಾತ್ರಿ 11.30 ಕ್ಕೆ ಅವರ ಸ್ವರ್ಗೀಯ ವಾಸಸ್ಥಾನಕ್ಕೆ ತೆರಳಿದರು.

ಮಿಲ್ಖಾ ಸಿಂಗ್ ಜಿ ಅವರು ರಾತ್ರಿ 11.30ಕ್ಕೆ ನಿಧನರಾದರು ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ ಎಂದು ಅವರ ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ.