5 ಬಾರಿ ಶಾಸಕರಾಗಿದ್ದ ಈ ವ್ಯಕ್ತಿ ಈಗ ಮಾಡುತ್ತಿರುವುದನ್ನು ನೋಡಿದ ಖಂಡಿತ ಹೆಮ್ಮೆ ಹೆಮ್ಮೆ ಪಡ್ತೀರಿ!ಭಾರತ ದೇಶದಲ್ಲಿ ಒಬ್ಬ ವ್ಯಕ್ತಿ ಎಂಎಲ್ಎ ಆಗುವುದೆಂದರೆ ಅದು ಅಷ್ಟು ಸುಲಭದ ಕೆಲಸವಲ್ಲ. ಕೋಟಿಗಟ್ಟಲೆ ಹಣ ಬೇಕಾಗುತ್ತದೆ. ಒಂದು ಬಾರಿ ಎಂಎಲ್ಎ ಆದರೆ ಸಾಕು ತನ್ನ ಮಕ್ಕಳು, ಮೊಮ್ಮಕ್ಕಳು ಬದುಕುವಷ್ಟು ಹಣ ಮಾಡುತ್ತಾರೆ ರಾಜಕಾರಣಿಗಳು. ಅಷ್ಟೆ ಅಲ್ಲ ತನ್ನ ನಂತರ ತನ್ನ ಮನೆಯವರೇ ಎಂಎಲ್ಎ ಆಗಬೇಕೆಂದು ಎಂದು ಬಯಸುತ್ತಾರೆ. ಆದರೆ ಇಂದು ನಾವು ಹೇಳಲು ಹೊರಟಿರುವಂತಹ ವ್ಯಕ್ತಿ ಐದು ಬಾರಿ ಎಂಎಲ್ಎ ಆದರೂ ಸಹ ಹೇಗೆ ಬದುಕು ನಡೆಸುತ್ತಿದ್ದಾರೆ ಗೊತ್ತಾ?

ಇವರ ಹೆಸರು ಮುಮ್ಮಡಿ ನರಸಯ್ಯ. ತೆಲಂಗಾಣ ರಾಜ್ಯದ ಕಮಮ್ ಜಿಲ್ಲೆಯ, ಎಲ್ಲೆಂದು ಕ್ಷೇತ್ರದಲ್ಲಿ ಐದು ಬಾರಿ ಎಂಎಲ್ಎ ಆಗಿದ್ದು ಸೇವೆ ಸಲ್ಲಿಸಿರುವವರು. ತಾನು ಎಂಎಲ್ಎ ಆಗಿದ್ದಾಗ ಕೋಟಿಗಟ್ಟಲೆ ಹಣ ಸಂಪಾದಿಸುವ ಅವಕಾಶವಿದ್ದರೂ ಸಹ ನರಸಯ್ಯ ನನಗೆ ಹಣ ಬೇಡ ಜನರ ಪ್ರೀತಿ ಬೇಕು ಎಂದು 25 ವರ್ಷ ಎಂಎಲ್ಎ ಆಗಿದ್ದರೂ ಒಂದೇ ಒಂದು ರೂಪಾಯಿಯನ್ನು ಸಹ ಕೆಟ್ಟ ಹಾದಿಯಲ್ಲಿ ಸಂಪಾದಿಸಿದವರಲ್ಲ. ಅದೇ ಹಳೆ ಮನೆ, ಅದೇ ಹಳೇ ಸೈಕಲ್. ಎಲ್ಲಿಗಾದರು ಹೋಗಬೇಕೆಂದರೆ ಬಸ್ ಸ್ಟ್ಯಾಂಡ್ ನಲ್ಲಿ ನಿಂತು ಬಸ್ ಹತ್ತುತ್ತಾರೆ.

ಒಂದು ದಿನ ಸೈಕಲ್ ತಳ್ಳಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬಂದ ಬೈಕ್ ಸವಾರ ಅವರ ಬಗ್ಗೆ ತಿಳಿಯದೇ, ಹೇ… ಮುದುಕ ಪಕ್ಕಕ್ಕೆ ಸರಿ ಎಂದು ಹೇಳಿದ. ಆದರೂ ಸಹ ಒಂದು ಚೂರು ಕೋಪ ಮಾಡಿಕೊಳ್ಳದೆ ವಿನಮ್ರಪೂರ್ವಕವಾಗಿ ಆಯ್ತು , ಹೋಗು ತಮ್ಮಎಂದು ಹೇಳಿದರು ಈ ನರಸಯ್ಯ.

ಹೀಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುತ್ತಿದ್ದಾರೆ ಈ ಅಪರೂಪದ ವ್ಯಕ್ತಿ. ಇವರ ರೀತಿಯಲ್ಲಿಯೇ ಎಲ್ಲಾ ಎಂಎಲ್ಎಗಳು ಹಾಗೂ ರಾಜಕೀಯ ವ್ಯಕ್ತಿಗಳು ಇದ್ದಿದ್ದರೆ ಎಷ್ಟು ಚಂದ ಅಲ್ಲವೇ! ಇಂತವರ ಬಗ್ಗೆ ನಾವು ಮಾತನಾಡುತ್ತೇವೆಯೇ ಹೊರತು ಆದರ್ಶವ್ಯಕ್ತಿಯಾಗಿ ತೆಗೆದುಕೊಳ್ಳುವುದಿಲ್ಲ. ಆದರ್ಶವಾಗಿ ತೆಗೆದುಕೊಂಡಿದ್ದರೆ ಇಂದು ನಮ್ಮ ದೇಶ ಹೀಗೆ ಇರುತ್ತಿರಲಿಲ್ಲ.