ಪ್ರಧಾನಿ ನರೇಂದ್ರ ಮೋದಿಯವರ ಉದ್ದ ಕೇಶದ ಸೀಕ್ರೆಟ್ ಬಿಚ್ಚಿಟ್ಟ ಪೇಜಾವರ ಶ್ರೀಗಳು!ಬಾಗಲಕೋಟೆ: ಪ್ರಧಾನಿ ಮೋದಿ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ್ದಾರೆ‌. ಜೊತೆಗೆ, ಅವರು ರಾಮಮಂದಿರದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥಶ್ರೀ ನಗರದಲ್ಲಿ ಇಂದು ಹೇಳಿದರು. ಸಹಜವಾಗಿ ಇಂತಹ ಕಾರ್ಯದ ವೇಳೆ ಕೇಶವನ್ನು ತೆಗೆಯಲ್ಲ. ನೈತಿಕ ನೆಲೆಯಲ್ಲಿ ಮಂದಿರ ಆಗುವ ತನಕ ಕೇಶವನ್ನು ತೆಗೆಯಲ್ಲ. ಇದನ್ನು ಪ್ರಧಾನಿ ನರೇಂದ್ರ ಮೋದಿ ಪಾಲಿಸುತ್ತಿರಬಹುದು. ಅವರು ಆಧ್ಯಾತ್ಮಿಕವಾಗಿದ್ದರೆ ತಪ್ಪೇನಿಲ್ಲವಲ್ಲ ಎಂದ ಶ್ರೀಗಳು ಪ್ರಧಾನಿ ಮೋದಿ ಅವರ ಕೇಶದ ಕುರಿತು ನಡೆಯುತ್ತಿರುವ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರಾಮ ಮಂದಿರದ ನಿರ್ಮಾಣ ಸುಮಾರು ಮೂರುವರೆ ವರ್ಷಗಳು ತೆಗೆದುಕೊಳ್ಳಲಿದೆ.

ಜೊತೆಗೆ, ಇದಕ್ಕೆ ಅಂದಾಜು 1,500 ಕೋಟಿ ರೂ. ವೆಚ್ಚವಾಗಲಿದೆ ಎಂದು ರಾಮ ಮಂದಿರ ಟ್ರಸ್ಟ್ ಸದಸ್ಯರಾದ ಉಡುಪಿ ಪೇಜಾವರ ಶ್ರೀಗಳು ಹೇಳಿದರು. 1,500 ಕೋಟಿಯಲ್ಲಿ ಸುಮಾರು 500 ಕೋಟಿ ರೂ. ಮಂದಿರ ನಿರ್ಮಾಣಕ್ಕೆ ಆಗಲಿದ್ದು ಉಳಿದ 1,000 ಕೋಟಿ ರೂ. ಸುತ್ತಮುತ್ತಲಿನ ಪರಿಸರದ ಅಭಿವೃದ್ಧಿ, ಯಾತ್ರಾ ನಿವಾಸ ಹಾಗೂ ಮಾರ್ಗಗಳ ನಿರ್ಮಾಣಕ್ಕೆ ಬಳಕೆಯಾಗುವುದು ಎಂದು ಸ್ವಾಮೀಜಿ ಹೇಳಿದರು. ಪ್ರಾರಂಭದಲ್ಲಿ ಭೂಮಿ ಪರೀಕ್ಷೆ ಸವಾಲು ಆಗಿ ಹೋಯಿತು. ಅಲ್ಲಿ ಕಲ್ಲಿನ ಶಿಲಾಮಂದಿರ ನಿರ್ಮಾಣಕ್ಕೆ ಭೂಮಿ ಸಾಮರ್ಥ್ಯ ಹೊಂದಿರುಬೇಕು. ಅಲ್ಲಿ ಅಂದಾಜು 200 ಅಡಿ ವರೆಗೂ ಮರಳು ಮತ್ತು ಧೂಳು ಮಿಶ್ರತ ಮಣ್ಣಿದೆ. ಹೀಗಾಗಿ, ಮಂದಿರವನ್ನು ಹೇಗೆ ನಿರ್ಮಾಣ ಮಾಡಬೇಕು ಅಂತಾ ಪಂಚಾಂಗ ಎತ್ತಿಕೊಂಡು ಅದರ ಪರಿಶೀಲನೆ ನಡೆಸಬೇಕು ಎಂದು ಉಡುಪಿ ಪೇಜಾವರ ಮಠದ ಪೂಜ್ಯ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/