ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯಲೋಕಕ್ಕೆ ಮೋದಿ ಹೇಳಿದ್ದೇನು.?ನವದೆಹಲಿ: ಕೊರೊನಾ ಸೋಂಕಿನ ವಿರುದ್ಧ ಸಮರ ಸಾರಲು ಭಾರತದಲ್ಲೇ ಲಸಿಕೆಗಳನ್ನು ಸಂಶೋಧಿಸಿದ ದೇಶದ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಯ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ , ಕೇವಲ ಒಂದೇ ವರ್ಷದ ಅಲ್ಪಾವಧಿಯಲ್ಲಿ ಭಾರತದ್ದೇ ಲಸಿಕೆಗಳನ್ನು ಸಂಶೋಧಿಸುವ ಮೂಲಕ ಇಡೀ ದೇಶದ ಕೀರ್ತಿ ಗೌರವ ಹೆಚ್ಚಿಸಿದ್ದೀರಿ ಎಂದು ವಿಜ್ಞಾನಿಗಳನ್ನು ಕೊಂಡಾಡಿದ್ದಾರೆ.

ಪ್ರಧಾನಿಯ ಮುಖ್ಯ ಮನದಾಳದ ಮಾತುಗಳು
•ವೈದ್ಯ ಸಿಬ್ಬಂದಿ ಸೇವೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ
•ಆತ್ಮನಿರ್ಭರ ಭಾರತ ಅಭಿಯಾನ ಸಂಕಲ್ಪ ನಿಲ್ಲದು

ಇದನ್ನೂ ಓದಿ :  ಲಡಾಖ್‌ ಗಡಿ ಬಳಿ ಮತ್ತೆ ಚೀನಾ ತಂಟೆ

ಕೊರೊನಾ ಸಂಕಷ್ಟದ ವೇಳೆ ದೇಶಕ್ಕೆ ಸೇವೆ ಸಲ್ಲಿಸಿದ ವೈದ್ಯರು, ವೈದ್ಯಕೀಯ ಸಿಬ್ಬಂದಿ, ವಿಜ್ಞಾನಿಗಳು ಮತ್ತು ಕೊರೊನಾ ಕಾರ್ಯಕರ್ತರ ಸೇವೆಯೇ ಮುಖ್ಯ ಕಾರಣ ಎಂದು ಅವರು ಕೃತಜ್ಞತೆ ಸಲ್ಲಿಸಿದರು. ಅಸಂಖ್ಯಾತ ಜೀವಗಳನ್ನು ಉಳಿಸಿದ ನಿಮ್ಮನ್ನು ದೇಶಎಂದಿಗೂ ಮರೆಯುವುದಿಲ್ಲ ಎಂದ ಮೋದಿಜಿ, ದೇಶವನ್ನು ಸಶಕ್ತಗೊಳಿಸುವ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಕೊರೋನಾ ಕಾರಣದಿಂದ ತೊಡಕಾಗಿರಬಹುದು. ಆದರೆ ನಮ್ಮ ಸಂಕಲ್ಪ ನಿಲ್ಲದು ಎಂದು ಪ್ರಧಾನಿ ಮೋದಿ ನುಡಿದರು.