ಹಿಂದೂ ಯುವತಿಯೊಂದಿಗೆ ದೇವಸ್ಥಾನದಲ್ಲಿ ಮುಸ್ಲಿಂ ಯುವಕನ ಕಿಸ್ಸಿಂಗ್ ; ವೀಡಿಯೋ ನೋಡಿ, ವಿವಾದಕ್ಕೆ ಕಾರಣವಾದ Netflixನೆಟ್‌ಫ್ಲಿಕ್ಸ್‌ (Netflix) ನಲ್ಲಿ ಎ ಸೂಟಬಲ್ ಬಾಯ್ (A Suitable Boy) ಎಂಬ ಹೊಸ ವೆಬ್ ಸೀರೀಸ್ ಬಿಡುಗಡೆಯಾಗಿದೆ. ವಿಕ್ರಮ್ ಸೇಠ್ ಬರೆದ ಕಾದಂಬರಿಯನ್ನು ಆಧರಿಸಿ ಮೀರಾ ನಾಯರ್ ಈ ಸೀರೀಸ್‌ನ್ನ ನಿರ್ದೇಶಿಸಿದ್ದಾರೆ. ಈ ಚಿತ್ರದ ಕಥೆಯ 1951 ರ ಇಸ್ವಿಯದ್ದಾಗಿದ್ದು ಇದರಲ್ಲಿ ಹಿಂದೂ ಯುವತಿಯ ತಾಯಿ ತನ್ನ ಮಗಳಿಗಾಗಿ ಯೋಗ್ಯ ಹುಡುಗನನ್ನು ಹುಡುಕುತ್ತಿರುತ್ತಾಳೆ. ಈ ಹುಡುಕಾಟದ ಸಮಯದಲ್ಲಿ, ಈ ಸೀರೀಸ್ ನಲ್ಲಿ, ಭಾರತದ ವಿಭಜನೆಯಿಂದ ಉಂಟಾದ ದುರಂತದಿಂದಾದ ಧಾರ್ಮಿಕ ಸಂಘರ್ಷ, ಮಂದಿರಮಸೀದಿ, ಆ ಕಾಲದ ರಾಜಕೀಯ ಗೊಂದಲಗಳ ಅನೇಕ ಸೀನ್ ಗಳಿವೆ. ದೇವಾಲಯದ ಆವರಣದಲ್ಲಿ ಅ’ಶ್ಲೀಲ ದೃಶ್ಯಗಳನ್ನು ಚಿತ್ರೀಕರಿಸಲಾಗಿರುವ ಮತ್ತು ಲ’ವ್ ಜಿ’ಹಾದ್ ಅನ್ನು ಉತ್ತೇಜಿಸಲಾಗಿದೆ ಎಂದು ವೆಬ್ ಸೀರೀಸ್‌‌ನ ಮೇಲೆ ಆರೋಪಿಸಲಾಗಿದೆ. ಈ ಬಗ್ಗೆ ಎಫ್‌’ಐಆರ್ ಕೂಡ ದಾಖಲಿಸಲಾಗಿದೆ. ಗೌರವ್ ತಿವಾರಿ ಎಂಬುವವರು ಈ ಎಫ್‌ಐಆರ್ ದಾಖಲಿಸಿದ್ದಾರೆ. ಅವರು ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಅವರು ಟ್ವೀಟ್ ಮಾಡಿ, “A Suitable Boy ಕಾರ್ಯಕ್ರಮದಲ್ಲಿ Netflix India ಒಂದೇ ಎಪಿಸೋಡ್ ನಲ್ಲಿ ಮೂರು ಬಾರಿ ಮಂದಿರದ ಪ್ರಾಂಗಣದಲ್ಲಿ ಮುಸ್ಲಿಂ ಯುವಕ ಹಿಂದೂ ಯುವತಿಯ ನಡುವೆ ಕಿಸ್ಸಿಂಗ್ ಸೀನ್ ತೋರಿಸಿದೆ. ಇದೇ ದೃಶ್ಯವನ್ನ ಮಂದಿರದ ಪ್ರಾಂಗಣದಲ್ಲೇ ಚಿತ್ರೀಕರಿಸುವ ಅವಶ್ಯಕತೆಯೇನಿತ್ತು? ನಾನು ರೀವಾದಲ್ಲಿ ಈ ಬಗ್ಗೆ F’IR ದಾಖಲಿಸಿದ್ದೇನೆ” ಎಂದು ಬರೆದಿದ್ದಾರೆ.

ಅವರು ಮತ್ತೊಂದು ಟ್ವೀಟ್ ನಲ್ಲಿ “ರಾಣಿ ಅಹಲ್ಯಾಬಾಯಿ ಹೋಳ್ಕರ್ ಮಹೇಶ್ವರ್ ಘಾಟ್‌ನ್ನ ಶಿವಭಕ್ತರಿಗೆ ಸಮರ್ಪಿಸಿದ್ದಾರೆ. ಪಾಶಾಣ ಯುಗದ ಸಾವಿರಾರು ಶಿವಲಿಂಗಗಳು ಇದರ ಗುರುತಾಗಿವೆ‌.‌ ಆದರೆ ನೆಟ್‌ಫ್ಲಿಕ್ಸ್ ಈ ಪವಿತ್ರ ಜಾಗವನ್ನ ಲವ್ ಜಿಹಾ’ದ್ ಉತ್ತೇಜಿಸಲು ಹಾಗು ಹಿಂದೂ ಭಾವನೆಗಳಿಗೆ ಧಕ್ಕೆ ತರಲು ಬಳಸಿದೆ. ನಾನು ನನ್ನ ಫೋನ್ ನಿಂದ ಇವತ್ತು ನೆಟ್‌ಫ್ಲಿಕ್ಸ್ ನ್ನ uninstall ಮಾಡುತ್ತಿದ್ದೇನೆ, ನೀವು?” ಎಂದು ಬರೆದಿದ್ದಾರೆ. ಗೌರವ್ ತಿವಾರಿ ಯವರು ಈ ಪ್ರಕರಣದ F’IR ಬಗ್ಗೆ ಮಾಹಿತಿ ನೀಡುತ್ತ ವಿಕ್ರಮ್ ಸೇಠ್ ಬರೆದ ಕಾದಂಬರಿಯನ್ನು ಆಧರಿಸಿದ ವೆಬ್ ಸೀರೀಸ್ ‘ಎ ಸೂಟಬಲ್ ಬಾಯ್’ ಹಲವಾರು ದಿನಗಳಿಂದ ನೆಟ್‌ಫ್ಲಿಕ್ಸ್‌ನಲ್ಲಿ ಚಾಲನೆಯಲ್ಲಿದೆ. ಅದರ ಎರಡನೆಯ ಸೀರೀಸ್ ನಲ್ಲಿ ಎಂತಹ ಸ್ಥಳಗಳಲ್ಲಿ ಚುಂ’ಬನ ದೃಶ್ಯಗಳನ್ನು ಚಿತ್ರಿಸಲಾಗಿದೆಯೆಂದರೆ ಅದನ್ನ ಸಹಿಸಲೂ ಸಾಧ್ಯವಿಲ್ಲ. ಈ ದೃಶ್ಯವನ್ನು ದೇವಾಲಯದ ಶಿವಲಿಂಗದ ಮುಂದೆ ಭಜನೆ ನಡೆಯುತ್ತಿರುವಾಗ ಚಿತ್ರಿಸಲಾಗಿದೆ. ಅದನ್ನು ತಕ್ಷಣ ತೆಗೆದುಹಾಕಬೇಕೆಂದು ನಾವು ಒತ್ತಾಯಿಸಿದ್ದೇವೆ ಎಂದಿದ್ದಾರೆ. ನೆಟ್‌ಫ್ಲಿಕ್ಸ್ ವಿಪಿ ಕಂಟೆಂಟ್ ಮೋನಿಕಾ ಶೆರ್ಗಿಲ್ ಮತ್ತು ನಿರ್ದೇಶಕಿ, ಪಬ್ಲಿಕ್ ಪಾಲಿಸೀಸ್ ಅಂಬಿಕಾ ಖುರಾನಾ ವಿರುದ್ಧ ಎಫ್‌’ಐಆರ್ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ :  ಈಶ್ವರಪ್ಪ ಮತ್ತೆ ಸಿಡಿಮಿಡಿ

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/