ರಾಷ್ಟ್ರ ರಾಜಧಾನಿ ಸ್ಥಳಾಂತರ?! ; ಕೇಂದ್ರದಿಂದ ಏನಿದು ಹೊಸ ಚಿಂತನೆ?!ನವದೆಹಲಿ: ಹಲವಾರು ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಮಹತ್ವದ ಬದಲಾವಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಈಗ ರಾಷ್ಟ್ರ ರಾಜಧಾನಿಯನ್ನೇ ಸ್ಥಳಾಂತರಿಸುವ ಚಿಂತನೆಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ದೆಹಲಿಗಿರುವ ರಾಜಧಾನಿ ಸ್ಥಾನಮಾನವನ್ನು ಬದಲಾವಣೆ ಮಾಡಿ ಉತ್ತರಪ್ರದೇಶದ ಪ್ರಮುಖ ನಗರಗಳಿಗೆ ಸ್ಥಳಾಂತರಿಸಲು ಮುಂದಾಗಿದೆ. ಉತ್ತರಪ್ರದೇಶದ ವಿಶಾಲವಾದ ನಗರವೊಂದಕ್ಕೆ ಸ್ಥಳಾಂತರಿಸುವ ಚಿಂತನೆ ನಡೆದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯ ಬೆಳವಣಿಗೆ ದಿನೇ ದಿನೇ ಹೆಚ್ಚಾಗುತ್ತಿದ್ದು , ಇದು ಧಾರಣ ಸಾಮಥ್ರ್ಯವನ್ನು ಮೀರಿ ಒತ್ತಡಕ್ಕೆ ಒಳಗಾಗುತ್ತಿದೆ. ಜತೆಗೆ ದೆಹಲಿಯ ವಾಯು ಮಾಲಿನ್ಯ ಅಪಾರಯಕಾರಿ ಮಟ್ಟವನ್ನು ಮೀರಿದೆ.

ದೆಹಲಿಯ ವಾಯು ಮಾಲಿನ್ಯವನ್ನು ಗ್ಯಾಸ್ ಚೇಂಬರ್‍ಗೆ ಹೋಲಿಸಿರುವ ಸುಪ್ರೀಂಕೋರ್ಟ್ ಒಂದು ಬಾರಿಗೆ ಇಡೀ ನಗರವನ್ನು ಸ್ಫೋಟಿಸಿ ನಾಶ ಮಾಡಿಬಿಡಿ. ಮತ್ತೆ ಹೊಸದಾಗಿ ನಿರ್ಮಾಣ ಮಾಡಿಬಿಡಿ ಎಂಬ ಆಕ್ರೋಶದ ಸಲಹೆಯನ್ನು ನೀಡುವಷ್ಟರ ಮಟ್ಟಿಗೆ ದೆಹಲಿಯ ವಾತಾವರಣ ಹದಗೆಟ್ಟಿದೆ. 1901ರಲ್ಲಿ 4 ಲಕ್ಷ ಮಾತ್ರ ಇದ್ದ ದೆಹಲಿಯ ಜನಸಂಖ್ಯೆ ಈಗ 1.8 ಕೋಟಿಗೆ ದಾಟಿದೆ. ಸರಿ ಸುಮಾರು 4500 ಪಟ್ಟು ಜನಸಂಖ್ಯೆ ಏರಿಕೆಯಾಗಿದೆ. 2028ರ ವೇಳೆಗೆ ದೆಹಲಿಯ ಜನಸಂಖ್ಯೆ 3.7 ಕೋಟಿ ಏರಿಕೆಯಾಗುವ ಅಂದಾಜಿದೆ. ಅತ್ಯಂತ ಸಣ್ಣ ನಗರವಾಗಿರುವ ದೆಹಲಿಯಲ್ಲಿ ಮಿತಿ ಮೀರಿದ ಜನಸಂಖ್ಯೆ ಅಪಾಯಕಾರಿ ಮಟ್ಟಕ್ಕೆ ಏರಿದ ವಾಯುಮಾಲಿನ್ಯ, ಜತೆಗೆ ಆಗಾಗ್ಗೆ ಕಂಡು ಬರುತ್ತಿರುವ ಉಗ್ರ ಪ್ರತಿಭಟನೆಗಳಿಂದ ದೆಹಲಿಯ ವಾತಾವರಣ ಅಸಹನೀಯವಾಗಿದೆ.

ಹೀಗಾಗಿ ರಾಷ್ಟ್ರ ರಾಜಧಾನಿಯನ್ನು ಉತ್ತರ ಪ್ರದೇಶ ಅಥವಾ ಬೇರೆ ರಾಜ್ಯಗಳಿಗೆ ಸ್ಥಳಾಂತರಿಸುವುದು ಸೂಕ್ತ ಎಂದು ಮೋದಿ ಸರ್ಕಾರ ಚಿಂತನೆ ನಡೆಸಿದೆ. ರಾಷ್ಟ್ರ ರಾಜಧಾನಿಯನ್ನು ಹಲವಾರು ದೇಶಗಳು ಕಾಲ ಕಾಲಕ್ಕೆ ಬದಲಾವಣೆ ಮಾಡಿವೆ. ಬ್ರೆಜಿಲ್, ನೈಜೀರಿಯಾ, ಈಜಿಪ್ಟ್, ಜಕಾರ್ತ ಸೇರಿದಂತೆ ಹಲವಾರು ದೇಶಗಳು ನಗರೀಕರಣ ತೀವ್ರಗೊಂಡು ರಾಜಧಾನಿ ಮೇಲಿನ ಒತ್ತಡ ಹೆಚ್ಚಾಗುತ್ತಿದ್ದಂತೆ ಸ್ಥಳಾಂತರ ಮಾಡಿರುವ ಉದಾಹರಣೆ ಇದೆ. ಸದ್ಯದ ಮಾಹಿತಿಯ ಪ್ರಕಾರ ಮೋದಿಯವರ ಸರ್ಕಾರ ರಾಷ್ಟ್ರ ರಾಜಧಾನಿಯನ್ನು ಸ್ಥಳಾಂತರಿಸುವುದರಿಂದ ಎದುರಾಗಬಹುದಾದ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕಾಚಾರ ಹಾಕುತ್ತಿದೆ. ದೆಹಲಿಯಲ್ಲಿ ಈಗಾಗಲೇ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು , ಪ್ರಮುಖ ಕಚೇರಿಗಳು, ಅತ್ಯುನ್ನತವಾದ ಕೈಗಾರಿಕೆಗಳು ನೆಲೆಯೂರಿವೆ. ಇವುಗಳ ಪೈಕಿ ಕೇಂದ್ರ ಸರ್ಕಾರದ ಆಡಳಿತ ಕಚೇರಿಗಳು ಸೇರಿದಂತೆ ಪ್ರಮುಖ ವ್ಯವಸ್ಥೆಗಳನ್ನು ಹೊಸ ಜಾಗಕ್ಕೆ ಸ್ಥಳಾಂತರಿಸಬೇಕಿದೆ. ಈ ಎಲ್ಲಾ ಸಾಧಕ-ಬಾಧಕಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಮೋದಿಯವರ ಸರ್ಕಾರ ಶೀಘ್ರವೇ ಅಧಿಕೃತವಾಗಿ ಪ್ರಕಟಣೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ :  ಲಡಾಖ್‌ ಗಡಿ ಬಳಿ ಮತ್ತೆ ಚೀನಾ ತಂಟೆ

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/