‘ಪೋಲಿಸರಿಂದ’ ಮೂರು ಜನ ‘ಪೋಲೀಸರ’ ಬಂಧನ! ; ಅಸಲಿ ವಿಷಯ ಇಲ್ಲಿದೆ.ಬೆಂಗಳೂರು: ಪೊಲೀಸರ ಸೋಗಿನಲ್ಲಿ ಚಿನ್ನದ ಅಂಗಡಿ ಮೇಲೆ ದಾಳಿ ಮಾಡಿದ್ದ ಆರೋಪ ಪ್ರಕರಣ ಸಂಬಂಧ ಮೂವರು ನಕಲಿ ಪೊಲೀಸರನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಗರ್ತಪೇಟೆಯಲ್ಲಿರುವ ಚಿನ್ನಾಭರಣ ಪಾಲಿಶ್ ಮಾಡುವ ಜ್ಯುವೆಲ್ಲರಿ ಶಾಪ್‍ಗೆ ನ.11ರ ಮಧ್ಯರಾತ್ರಿ ಆರೋಪಿಗಳು ಪೊಲೀಸ್ ವೇಷದಲ್ಲಿ ಜೀಪ್‍ನಲ್ಲಿ ತೆರಳಿದ್ದು, ದೀಪಾವಳಿ ಹಬ್ಬಕ್ಕೆ ನಕಲಿ ಚಿನ್ನ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿರುವುದರಿಂದ ದಾಳಿ ಮಾಡುತ್ತಿರುವುದಾಗಿ ಹೇಳಿದ್ದರು. ತದನಂತರ, ಕೋಲ್ಕತ್ತಾದಲ್ಲಿದ್ದ ಮಾಲಕ ಕಾರ್ತಿಕ್‍ಗೆ ಕರೆ ಮಾಡಿ ನಿಮ್ಮ ಅಂಗಡಿ ಮೇಲೆ ದಾಳಿ ಮಾಡಿದ್ದೇವೆ. ಪೊಲೀಸ್ ಠಾಣೆಗೆ ಬನ್ನಿ ಎಂದು ಕರೆ ಮಾಡಿ ಅಂಗಡಿಯಲ್ಲಿದ್ದ 200ರಿಂದ 300 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದಾದ ನಂತರ ಪೊಲೀಸರು ಕರೆದಿದ್ದಾರೆ ಎಂದು ನೇರವಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಜ್ಯುವೆಲ್ಲರಿ ಮಾಲಕ ಹೋಗಿ ವಿಚಾರಿಸಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್ ದೂರು ದಾಖಲಿಸಿದ್ದಾರೆ. ದರೋಡೆಗೆ ನಕಲಿ ಪೊಲೀಸರು ತಂದಿದ್ದ ಜೀಪ್ ನಂಬರ್ ಅನ್ನು ಜುವೆಲ್ಲರಿ ಮಳಿಗೆಯ ಸಿಬ್ಬಂದಿ ಹೇಳಿದ್ದು, ಇದರ ಜಾಡು ಹಿಡಿದು ಹೊರಟ ಪೊಲೀಸರ ಕೈಗೆ ನಾಲ್ವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರೆಲ್ಲರೂ ನಾಗಮಂಗಲ ಮೂಲದವರು. ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರ ಸೋಗಿನಲ್ಲಿ ಬಂದ ವಂಚಕರು ಅಂಗಡಿಯಲ್ಲಿ ಚಿನ್ನಾಭಾರಣ ದೋಚಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/