ಮುಂದಿನ ಮುಖ್ಯಮಂತ್ರಿ ಎಂದಾಗ ಕಡಕ್ ಟಾಂಗ್ ಕೊಟ್ಟ ಕಂದಾಯ ಸಚಿವಪಂಕ್ಚರ್‌ ಆದ ಬಸ್ಸಿನ ಸೀಟಿಗೆ ಟವಲ್ ಹಾಕಿದ್ದಾರೆ ಸಿಎಂ ಬದಲಿಸಲು ಹೊರಟವರ ಸ್ಥಿತಿ ಕೆಲ ನಾಯಕರಿಗೆ ಬಂದೊಗಿದೆ. ನಾನೇ ಮುಂದಿನ ಮುಖ್ಯಮಂತ್ರಿ , ನಾಳೆಯೇ ನಾಯಕತ್ವದಲ್ಲಿ ಬದಲಾವಣೆ ಎಂದು ಕೊಂಡವರೆಲ್ಲ ಪಂಕ್ಟರ್ ಆಗಿರುವ ಬಸ್ಸಿನ ಸೀಟಿಗೆ ಟವೆಲ್ ಹಾಕಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

ಬುಧವಾರ ನಗರದಲ್ಲಿ ಮಾತನಾಡಿದ ಅವರು , ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ನಾಯಕರು. ಪಕ್ಷದ ರಾಷ್ಟ್ರೀಯ ಘಟಕ ಕೂಡ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ. ಆದರೂ ಕೆಲವರು ಸುಮ್ಮನೆ ಇರದೆ ಪಂಕ್ಟರ್ ಆಗಿರುವ ಬಸ್ಸಿನ ಸೀಟಿಗೆ ಟವಲ್ ಹಾಕಿದ್ದಾರೆ. ಅದರಿಂದ ಪ್ರಯೋಜನವಿಲ್ಲ. ಪೆಟ್ರೋಲ್ ಇಲ್ಲದ, ಮುಂದೆ ಹೋಗದಂಥ ಬಸ್ ಹತ್ತಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು. ನೀವು ಕೂಡ ಮುಂದಿನ ಮುಖ್ಯಮಂತ್ರಿ ರೇಸ್‌ನಲ್ಲಿ ಇದ್ದೀರಂತೆ ಎಂಬ ಪ್ರಶ್ನೆಗೆ ಪ್ರತಿ ಕ್ರಿಯಿಸಿದ ಅವರು, ನನಗೆ ಯಾವುದೇ ರೇಸ್ ಕುದುರೆಯಂತೆ ಓಡಲು ಇಷ್ಟವಿಲ್ಲ.

ಇದನ್ನೂ ಓದಿ :  ಈಶ್ವರಪ್ಪ ಮತ್ತೆ ಸಿಡಿಮಿಡಿ

ಈಗ ಯಾವುದೇ ಬದಲಾವಣೆ ಇಲ್ಲದೆ ಸಿಎಂ ಮುಂದುವರೆಯುತ್ತಾರೆ. ಭವಿಷ್ಯ ಹೇಳುವುದಕ್ಕೆ ನಾನು ಜ್ಯೋತಿಷಿ ಅಲ್ಲ, ಯಾರಾರ ಹಣೆ ಬರಹ ಏನಿರುತ್ತದೆಯೋ ಅದೇ ಆಗುತ್ತದೆ. ಹಣೆ ಬರಹ ತಪ್ಪಿಸಲು ಆಗುವುದಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.