ಇಂದು,ಮುಂದೂ ಯುಡಿಯೂರಪ್ಪನವರೇ ನಮ್ಮ ನಾಯಕರು: ಆರ್.ಅಶೋಕ್ಬೆಂಗಳೂರು: ಕೋವಿಡ್ ಸಂಕಷ್ಟದ ಸಮಯದಲ್ಲೂ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದರೂ ಕೆಲ ನಕರಾತ್ಮಕ ಬೆಳವಣಿಗೆಗಳಿಂದ ಮನಸ್ಸಿಗೆ ತುಂಬಾ ನೋವಾಗಿ ಯಡಿಯೂರಪ್ಪ ರಾಜೀನಾಮೆ ಪ್ರಸ್ತಾಪಿಸಿರಬಹುದು ಎಂದು ಅಶೋಕ್ ಹೇಳಿಕೊಂಡಿದ್ದಾರೆ.

ಹಲವಾರು ನಾಯಕರು ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಯುಡಿಯೂರಪ್ಪನವರ ಜೊತೆ ನಾವಿದ್ದೇವೆ.ನಮ್ಮ ಇಂದಿನ ನಾಯಕ, ಮುಂದಿನ ನಾಯಕ ಯುಡಿಯೂರಪ್ಪನವರೇ, ಹಾಗೂ ಇದೇ ನಮ್ಮ ರಾಜಾಹುಲಿ ಮುಂದಿನ ಎರಡು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನಾಯಕರು ಸುದ್ದಿಗಾರರೊಂದಿಗೆ ತಮ್ಮ-ತಮ್ಮ ಹೇಳಿಕೆಗಳನ್ನು ವ್ಯಕ್ತಪಡಿಸಿ ಯುಡಿಯೂರಪ್ಪನವರಿಗೆ ಬೆಂಬಲ ಸೂಚಿಸಿದರು.

ಈ ವಿಚಾರದ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ ಈ ನಕಾರಾತ್ಮಕ ಭಾವನೆಗಳು ಹಾಗೂ ಬೆಳೆವಣಿಗೆ ಪಕ್ಷಕ್ಕೆ ಒಳ್ಳೆಯದಲ್ಲ ಹಾಗೂ ಬಿಎಸ್ವೈ ಅವರ ಮನಸ್ಸಿಗೆ ತುಂಬಾ ನೋವು ಉಂಟಾದಂತಿದೆ. ಮುಖ್ಯಮಂತ್ರಿಗಳ ಮನಸ್ಸಿಗೆ ನೋವುಂಟು ಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕರ್ನಾಟಕದ ಹಳ್ಳಿ ಹಳ್ಳಿ ಸುತ್ತಿ ಪಕ್ಷವನ್ನು ಸದೃಢವಾಗಿ ಕಟ್ಟಿದ್ದಾರೆ. ಅವರ ಜತೆ ನಾನು 40 ವರ್ಷ ಕೆಲಸ ಮಾಡಿದ್ದೇನೆ. ಅವರ ಭಾವನೆಯನ್ನೂ ಚೆನ್ನಾಗಿ ಅರಿತಿದ್ದೇನೆ, ಅವರ ನಾಯಕತ್ವ ನಮಗೆ ಇಂದೂ ಬೇಕು, ಮುಂದೆಯೂ ಬೇಕು. ಹಾಗೂ ಪಕ್ಷಕ್ಕೂ ಅವರ ನಾಯಕತ್ವದ ಅವಶ್ಯಕತೆ ಇದೆ.ನಾಯಕತ್ವ ಬದಲಾವಣೆಯಂತಹ ಹೇಳಿಕೆಗಳಿಂದ ಜನರ ಭಾವನೆಗೆ ಘಾಸಿ ಮಾಡಿ ಸರ್ಕಾರದಲ್ಲಿ ಏನೋ ಆಗಿದೆ ಎನ್ನುವಂತಹ ತಪ್ಪು ದಾರಿಗೆ ಎಳೆಯುತ್ತಿರುವವರಿಗೆ ಫುಲ್ ಸ್ಟಾಪ್ ಹಾಕಬೇಕಿದೆ ಎಂದರು.

ಇದನ್ನೂ ಓದಿ :  ಘರ್ಜಿಸಿದ ಯಡಿಯೂರಪ್ಪ