ಅಥಣಿಯಲ್ಲಿ ರಮೇಶ್ ಜಾರಕಿಹೊಳಿ,ಬೇರೆ ಕಾರ್ಯಕ್ಕೆ ಬಂದಿದ್ದೇನೆ,ಭೇಟಿಗೆ ವಿಶೇಷ ಅರ್ಥ ಬೇಡಬೆಳಗಾವಿ:- ನಿನ್ನೇಯಷ್ಟೇ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ರಮೇಶ್ ಜಾರಕಿಹೊಳಿ ಇವತ್ತು ದಿಢೀರನೇ ಅಥಣಿಯಲ್ಲಿ ಪ್ರತ್ಯಕ್ಷರಾಗಿ ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಿನ್ನೆಯ ಹೇಳಿಕೆಗಳಿಗೆ ಈಗಲೂ ಬದ್ಧನಾಗಿದ್ದೇನೆ ಪಕ್ಷದ ಹಿರಿಯರು ಮಾತಿನಂತೆ ಹೆಚ್ಚಾಗಿ ಮಾಧ್ಯಮಗಳ ಮುಂದೆ ಬಾರದಂತೆ ಕಟ್ಟಪ್ಪಣೆ ನೀಡಿ ಖಾರವಾಗಿಯೇ ಹೇಳಿದ್ದಾರೆ ಅದರಂತೆ ಹಿರಿಯರ ಮಾತಿಗೆ ಮನ್ನಣೆ ನೀಡಬೇಕಾಗಿದೆ ಎಂದು ಹೇಳಿದರು.

ಅಥಣಿಯ ಭೇಟಿಯ ಕುರಿತು ಮಾತನಾಡಿ ರಮೇಶ್ ಜಾರಕಿಹೊಳಿ ಈ ಭೇಟಿಗೆ ಮಹತ್ವ ನೀಡುವ ಅವಶ್ಯಕತೆ ಇಲ್ಲ ಪಕ್ಷದ ಮುಖಂಡರು ಹಾಗೂ ವಿವಿಧ ಮುಖಂಡರುಗಳ ಕುಟುಂಬಗಳಿಗೆ ಸಾಂತ್ವನ ಹೇಳಲು ಬಂದಿದ್ದೇನೆಯೇ ಹೊರತು ಮತ್ತ್ಯಾವ ರಾಜಕೀಯ ಉದ್ದೇಶಗಳಿಗಾಗಿ ಬಂದಿಲ್ಲ ಎಂದು ಹೇಳುವ ಮೂಲಕ ಅಥಣಿ ಭೇಟಿಯ ಕುರಿತು ಸ್ಪಷ್ಟನೆ ನೀಡಿದ ಅವರು ಎಂಟು-ಹತ್ತು ದಿನಗಳಕಾಲ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಲ್ಲ.

ನಂತರ ಮುಂದಿನ ರಾಜಕೀಯ ತೀರ್ಮಾನ ಮಾಡುತ್ತೇನೆ ಎಂದು ಹೇಳುವ ಮೂಲಕ ಒಳಗೊಳಗೆಯೇ ದೊಡ್ಡ ಪ್ರಮಾಣದ ರಾಜಕೀಯ ದಾಳ ಉರುಳಿಸಲು ಸಿದ್ದತೆ ನಡೆಸಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಅಥಣಿಯಲ್ಲಿ ಶಾಸಕ ಮಹೇಶ್ ಕುಮಟಳ್ಳಿಯವರೊಂದಿಗೆ ಕೆಲ ಕಾಲ ಚರ್ಚೆ ನಡೆಸಿದ ರಮೇಶ್ ಜಾರಕಿಹೊಳಿ ನಂತರ ಇಬ್ಬರು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲು ಒಂದೇ ಕಾಲಿನಲ್ಲಿ ಪ್ರಯಾಣಿಸಿದರು.