ಬೆಂಗಳೂರು: ವಿವೇಕ ಇಲ್ಲದೆ ಬಿಜೆಪಿ ಸರ್ಕಾರ ಲವ್ ಜಿಹಾದ್ ನಿಷೇಧ ಕಾಯ್ದೆ ತರಲು ಮುಂದಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯು ಖಂಡನೀಯವಾಗಿದ್ದು, ತಕ್ಷಣ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಒತ್ತಾಯಿಸಿದ್ದಾರೆ. ಕಾಯ್ದೆ ಜಾರಿಯು ಅಸಂವಿಧಾನಿಕವಾಗಿದ್ದು, ಎಂದು ಸಿದ್ದರಾಮಯ್ಯ ಹೇಳಿಕೆಯನ್ನು ರವಿಕುಮಾರ್ ಟೀಕಿಸಿದ್ದಾರೆ. ಲವ್ ಜಿಹಾದ್ ಹೆಸರಲ್ಲಿ ನಡೆಯುತ್ತಿರುವ ಹಿಂದೂ ಯುವತಿಯರ, ಮಹಿಳೆಯರ ಮೇಲಿನ ಅನಾಚಾರ, ಮತಾಂತರ, ಅನ್ಯಾಯದ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸುವ ಕುರಿತು ಮಸೂದೆ ಬಗ್ಗೆ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ಖಂಡನೀಯ. ಅವರು ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇದು ಇವರ ಜಂಗಲ್ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಹರಿಹಾಯ್ದಿದ್ದಾರೆ. ಸಂಘಟನಾತ್ಮಕವಾಗಿ ಒಂದು ಗುಂಪು ಕಟ್ಟಿಕೊಂಡು, ವಿದೇಶಗಳಿಂದ ಎನ್ಜಿಒಗಳ ಮೂಲಕರ ಹಣ ಪಡೆದು ಹಿಂದು ಯುವತಿಯನ್ನಷ್ಟೇ ಗುರಿ ಮಾಡಿ ಅವರ ದಾರಿ ತಪ್ಪಿಸಲಾಗುತ್ತದೆ.
ಮತಾಂತರ ಮಾಡುವುದು ಸಂವಿಧಾನ ಬಾಹಿರ. ಸಂವಿಧಾನಕ್ಕೆ ವಿರುದ್ಧವಾದುದ್ದನ್ನು ತಡೆಯಲು ಹೊರಟರೇ ಸಿದ್ದರಾಮಯ್ಯ ಅವರಿಗೇಕೆ ಚಿಂತೆ?. ಈ ದೇಶಕ್ಕೆ ಮೊಘಲರ ಆಳ್ವಿಕೆ, ಟಿಪ್ಪು ಸುಲ್ತಾನ್ರ ಕೊಡುಗೆ ಏನೆಂದು ಇಡೀ ಸಮಾಜಕ್ಕೆ ಗೊತ್ತಿದೆ. ಈ ದೇಶದ ಪರಂಪರೆ, ಸಂಸ್ಕೃತಿಯನ್ನು ಹಾಳು ಮಾಡಲಾಗಿದೆ. ಪವಿತ್ರ ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡಿದ್ದರು. ಇಂತಹವರ ಚರಿತ್ರೆ ನಮ್ಮ ಸಮಾಜಕ್ಕೆ ಬೇಕಾಗಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. ತ್ರಿವಳಿ ತಲಾಖ್ ವಿರೋಧಿಸುವಲ್ಲಿ ಕಾಂಗ್ರೆಸ್ಗೆ ಮುಸ್ಲಿಂ ವೋಟ್ ಬ್ಯಾಂಕ್ ಕಾಣಿಸಿತು. ಕಾಶ್ಮೀರ 370ನೇ ವಿಧಿ ತೆರವುಗೊಳಿಸಿದಾಗ, ಸಿಎಎ ಜಾರಿಗೆ ಮುಂದಾದಾಗ, ರಾಮಮಂದಿರ ನಿರ್ಮಾಣಕ್ಕೆ ಮುಂದಾದಾಗ, ಗೋಹತ್ಯೆ ನಿಷೇಧಿಸಿ, ಅಕ್ರಮ ಗೋ ಸಾಗಣೆ ತಡಯಬೇಕು ಎಂದು ಹೇಳಿದಾಗ ಕಾಂಗ್ರೆಸ್ಗೆ ಮುಸ್ಲಿಂ ವೋಟ್ ಬ್ಯಾಂಕ್ ಕಾಣಿಸುತ್ತದೆ. ಲವ್ ಜಿಹಾದ್ ನಿಷೇಧಿಸಿ ಎಂದಾಗಲೂ ಅದೇ ಕಾಣಿಸುತ್ತಿದೆ. ಕಾಂಗ್ರೆಸ್ಗೆ ಹಿಂದುಗಳ ಮತ ಬೇಡ. ಮುಸ್ಲಿಂ ಮತಗಳಷ್ಟೇ ಅವರ ಗುರಿ. ಈ ವಿಷಯವನ್ನು ಹಿಂದುಗಳು ಅರ್ಥ ಮಾಡಿಕೊಳ್ಳಬೇಕು.
ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/