30 ವರ್ಷದ ಹಿಂದೆ ಬೀದಿಗಳಲ್ಲಿ ಪಕ್ಷದ ಬ್ಯಾನರ್ ಕಟ್ಟುತ್ತಿದ್ದೆ, ಜನತೆಗೆ ಭಾವನಾತ್ಮಕವಾಗಿ ಪತ್ರ ಬರೆದ ಸಿಟಿ ರವಿ!ಇತ್ತೀಚಿಗಷ್ಟೇ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ನೇಮಕಗೊಂಡಿರುವ ಸಿಟಿ ರವಿ ಅವರು ಚಿಕ್ಕಮಗಳೂರಿನ ಜನತಗೊಂದು ಭಾವನಾತ್ಮಕ ಪತ್ರ ಬರೆದಿದ್ದಾರೆ. ಪತ್ರದಲ್ಲಿ “ಬಂಧುಗಳೇ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಾಗರವಳ್ಳಿಯ ಸಾಮಾನ್ಯ ರೈತ ಕುಟುಂಬದ ಮಗನೊಬ್ಬ ಇವತ್ತು ದೇಶದ ರಾಜಧಾನಿ ನವದೆಹಲಿಯಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಂತಿದ್ದಾನೆ. ಕರ್ನಾಟಕದ ಹಳ್ಳಿಯಿಂದ ಆರಂಭವಾದ ರಾಜಕೀಯ ಯಾತ್ರೆ ದಿಲ್ಲಿಯವರೆಗೂ ಬಂದು ನಿಂತಿದೆ.

1988ರಲ್ಲಿ ಆಟೋ ಚಂದ್ರಣ್ಣನವರು ನನಗೆ ಬಿಜೆಪಿ ಸದಸ್ಯನಾಗಲು ಆಹ್ವಾನಿಸಿ ಬಿಜೆಪಿಯ ಸದಸ್ಯನನ್ನಾಗಿ ಮಾಡಿದರು. ಅಲ್ಲಿಂದ ಇಂದು ನಾನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿಯಾಗಿ ನೇಮಕವಾಗುವವರೆಗೆ ನನ್ನನ್ನು ಬೆಳೆಸಿದವರು ಇಂತಹುದೇ ಅನೇಕ ಚಂದ್ರಣ್ಣರು. ಪ್ರಚಾರ ಮುಗಿಸಿ ಹಸಿದು ಬಾಗಿಲ ಬಳಿ ಬಂದು ನಿಂತಾಗ ಅಕ್ಕರೆಯಿಂದ ಕೈ ತುತ್ತು ಕೊಟ್ಟರು, ಖಾಲಿ ಜೇಬಿನಲ್ಲಿ ಹೋರಾಟಗಳನ್ನು ಪ್ರಾರಂಭಿಸಿದಾಗ ಖರ್ಚಿಗೆ ಹಣ ಕೊಟ್ಟರು, ನನ್ನ ತಪ್ಪುಗಳನ್ನು ತಿದ್ದಿ ಕಿವಿ ಹಿಂಡಿದರು, ರಾಜಕೀಯದ ಸರಿ ತಪ್ಪುಗಳನ್ನು ಹೇಳಿಕೊಟ್ಟರು. ಹೀಗೆ 33 ವರ್ಷಗಳ ಹಿಂದೆ ಚಿಕ್ಕಮಗಳೂರಿನ ಬೀದಿಗಳಲ್ಲಿ ಪಕ್ಷದ ಬ್ಯಾನರ್ ಕಟ್ಟುವ ಮೂಲಕ ಆರಂಭವಾದ ನನ್ನ ರಾಜಕೀಯ ಜೀವನ ಇವತ್ತು ಇಲ್ಲಿಯವರೆಗೂ ಬಂದು ನಿಂತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ನನ್ನೂರ ಜನತೆ. ಹೆತ್ತೂಡಲ ಮಗನಂತೆ ನನ್ನನ್ನು ಪೋಷಿಸಿ ಈ ಮಟ್ಟಕ್ಕೆ ಬೆಳೆಸಿ ನಿಲ್ಲಿಸಿದ್ದೀರಿ. ನಿಮ್ಮ ಪ್ರೀತಿ, ಅಭಿಮಾನದ ಋಣ ದೊಡ್ಡದು.

ಇದನ್ನೂ ಓದಿ :  ಆರು ತಿಂಗಳಲ್ಲಿ ಸರ್ಕಾರ ಬಿದ್ದು ಹೋಗುತ್ತೆ ಭವಿಷ್ಯ‌ ನುಡಿದ ಕೈ ಶಾಸಕ

ಇವತ್ತು ದೆಹಲಿಯಲ್ಲಿ ಹೊಸ ರಾಜಕೀಯ ಯಾನವೊಂದು ಆರಂಭವಾಗುತ್ತಿರುವ ಸಮಯದಲ್ಲಿ ಹಳೆಯ ನೆನಪಿನ ಹಾಯಿದೋಣಿಗಳು ನನ್ನ‌ ಭಾವ ಕಡಲಿನಲಿ ತೇಲಿ ಹೋಗುತ್ತಿವೆ. ಹೃದಯ ತುಂಬಿ ಬಂದಿದೆ. ನಿಮಗೆ ನಾನು ಸದಾ ಆಭಾರಿ. ನಿಮ್ಮ ಪ್ರೀತಿಯ ಋಣ ನನ್ನ ಮೇಲಿದೆ. ಜೀವವಿರುವ ತನಕ ನಿಮ್ಮೆಲ್ಲರ ಮನೆ ಮಗನಂತೆ ಸೇವೆ ಮಾಡುವ ಭಾಗ್ಯ ನನ್ನದಾಗಿರಲಿ.” ಎಂದು ಹೇಳಿದ್ದಾರೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/