ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಬಿಜೆಪಿಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!ಇನ್ಫೋಸಿಸ್ ಪ್ರತಿಷ್ಠಾನ ದ ಅಧ್ಯಕ್ಷೆಯಾಗಿರುವ ಸುಧಾಮೂರ್ತಿಯವರ ನಿವೃತ್ತಿಯನ್ನು ಮುಂದಿನ ಒಂದು ವರ್ಷಗಳವರೆಗೆ ಮುಂದೂಡಲಾಗಿದೆ . ಅವರ ಅವಧಿ ಈ ವರ್ಷವೇ ಮುಗಿಯಬೇಕಿತ್ತು. ಕಾರಣಾಂತರಗಳಿಂದ ಇದನ್ನು ಒಂದು ವರ್ಷದವರೆಗೆ ಮುಂದೂಡಲಾಗಿದೆ.
ನಿವೃತ್ತಿ ಜೀವನದ ನಂತರ ಇವರಿಗೆ ರಾಜಕೀಯ ಪಕ್ಷಗಳಿಂದ ರಾಜ್ಯಸಭೆಗೆ ಆಯ್ಕೆಯಾಗಲು ಆಫರ್ ಗಳು ಬಂದಿದ್ದವು ಎಂಬ ಸುದ್ದಿಗಳು ಹರಿದಾಡಿದ್ದವು, ಹಾಗಾಗಿ ಸುಧಾಮೂರ್ತಿ ರಾಜಕೀಯಕ್ಕೆ ಬರುತ್ತಾರಾ? ಬಂದರೆ ಅವರು ಬಿಜೆಪಿಗೆ ಬರುತ್ತಾರಾ… ಇಲ್ಲಾ ರಾಹುಲ್ ಗಾಂಧಿಯ ನಾಯಕತ್ವಕ್ಕೆ ಮನಸೋತು ಕಾಂಗ್ರೆಸ್ ಗೆ ಹೋಗ್ತಾರಾ? ಎಂ‌ಬ ಅಭಿಮಾನಿಗಳ ಗೊಂದಲಕ್ಕೆ ಈಗ ಸುಧಾಮೂರ್ತಿ ಯವರೇ ಉತ್ತರವನ್ನು ನೀಡಿದ್ದು, ತಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಗುರುತಿಸಿಕೊಳ್ಳುವುದಿಲ್ಲ. ಹಾಗೆ ಗುರುತಿಸಿಕೊಂಡರೆ ತಟಸ್ಥವಾಗಿರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾನು ತಟಸ್ಥವಾಗಿದ್ದುಕೊಂಡು ಈ ಮೊದಲು ಮಾಡುತ್ತಿದ್ದ ಸಮಾಜ ಸೇವೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ಸುಧಾಮೂರ್ತಿಯವರು ತಿಳಿಸಿದ್ದಾರೆ. ಪಕ್ಷವೊಂದಕ್ಕೆ ಸೀಮಿತವಾದರೆ ಸನ್ನಿವೇಶಗಳು ಬದಲಾಗುತ್ತವೆ ಆದ್ದರಿಂದ ತಟಸ್ಥವಾಗಿದ್ದುಕೊಂಡು ಮುಂದಿನ ದಿನಗಳಲ್ಲಿ ತಮ್ಮ ಕುಟುಂಬದ ಸಾಮಾಜಿಕ ಸಂಸ್ಥೆಯಾದ ಮೂರ್ತಿ ಪ್ರತಿಷ್ಠಾನ ದಲ್ಲಿ ಈ ಮೊದಲಿನಂತೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತೇನೆಂದು ಖಾಸಗೀ ಸಂದರ್ಶನವೊಂದರಲ್ಲಿ ಸುಧಾಮೂರ್ತಿ ಹೇಳಿದ್ದಾರೆ.

ಈ ಮೊದಲು ಇನ್ಫೋಸಿಸ್ ಸಂಸ್ಥೆ ಅಸ್ಪತ್ರೆ, ಶಿಕ್ಷಣ, ಸಂಸ್ಕೃತಿ, ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಕಾರ್ಯಗಳನ್ನು ಮಾಡಿದ್ದು ಅದರಿಂದ ಲಕ್ಷಾಂತರ ಮಂದಿಗೆ ಉಪಯೋಗವಾಗಿದೆ, ಹಾಗಾಗಿ ನಾನು ಮುಂದಿನ ದಿನಗಳಲ್ಲೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗುತ್ತೇನೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಒಂದು ಕಾಲದಲ್ಲಿ 30 ಲಕ್ಷದಿಂದ ಆರಂಭವಾದ ಇನ್ಫೋಸಿಸ್ ಸಂಸ್ಥೆ ಇಂದು 400 ಕೋಟಿಯನ್ನು ನಿರ್ವಹಿಸುವಷ್ಟು ಬೆಳೆದಿದೆ. ಕಳೆದ 25ವರ್ಷಗಳಿಂದ ಈ ಸಂಸ್ಥೆಯ ಬೆಳವಣಿಗೆಯಲ್ಲಿ ತಾನೂ ಭಾಗಿಯಾಗಿರುವುದನ್ನು ಸುಧಾಮೂರ್ತಿ ನೆನಪಿಸಿಕೊಂಡಿದ್ದಾರೆ.

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800