ಮುಂದಿನ ಸಿಎಂ? ಸಕ್ಕರೆ ಒಡೆಯ ನಿರಾಣಿ ಹೇಳಿದ್ದೇನು.!ಈಗಾಗಲೇ ಮುಖ್ಯಮಂತ್ರಿಗಳ ರಾಜೀನಾಮೆಯ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಸ್ವಪಕ್ಷದ ಕೆಲ ನಾಯಕರೇ ಬಿ.ಎಸ್.ಯಡಿಯೂರಪ್ಪನವರ ಕಾಲು ಎಳೆಯುತ್ತಿದ್ದಾರೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಆದರೆ ರಾಜಾಹುಲಿ ಪರವಾಗಿ ನಾನಾ ನಾಯಕರು ನಮ್ಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಅವರೇ ಕುರ್ಚಿಲಿ ಮುಂದುವರೆಯುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ನಾಯಕರು,ಸಕ್ಕರೆ ಒಡೆಯ ಎಂದೇ ಖ್ಯಾತರಾದ ಮುರುಗೇಶ್ ನೀರಾಣಿಯವರು ಸಿಎಂ ಕುರ್ಚಿ ಬಗ್ಗೆ ಕೆಲ ಕುತೂಹಲಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ಬಗ್ಗೆ ಕಳೆದ ಒಂದು ವರ್ಷದಿಂದ ಭವಿಷ್ಯ ನುಡಿಯುತ್ತಿರುವವರ ಕನಸು, ಕನಸಾಗಿಯೇ ಉಳಿಯಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ವ್ಯಂಗ್ಯವಾಡಿದ್ದಾರೆ. ‘ರಾಜ್ಯದ ಅಭಿವೃದ್ಧಿಗೆ ಪಣ ತೊಟ್ಟಿರುವ ಯಡಿಯೂರಪ್ಪ ಅವರ ಕೈ ಬಲಪಡಿಸುವುದು ಪ್ರತಿಯೊಬ್ಬ ಶಾಸಕರ ಕರ್ತವ್ಯ. ಅವರ ಹೇಳಿಕೆಗೆ ವಿಶೇಷ ಅರ್ಥವನ್ನು ಕಲ್ಪಿಸುವುದು ಬೇಡ. ಈ ಇಳಿ ವಯಸ್ಸಿನಲ್ಲೂ ಹಗಲು-ರಾತ್ರಿ ಎನ್ನದೆ ಯುವಕರು ನಾಚಿಸುವಂತೆ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಅಗ್ರನಾಯಕರು ಅವರು. ಹೀಗಾಗಿ ನಾಯಕತ್ವ ವಿಷಯವೇ ಈಗ ಅಪ್ರಸ್ತುತ ಹಾಗೂ ಅನಪೇಕ್ಷಿತ. ಕೆಲವರು ಕಳೆದ ಒಂದು ವರ್ಷದಿಂದಲೂ ಈ ಬಗ್ಗೆ ಭವಿಷ್ಯವಾಣಿ ನುಡಿಯುತ್ತಿದ್ದಾರೆ. ಅದು ಅವರ ಕನಸಾಗಿಯೇ ಉಳಿಯಲಿದೆ ಎಂದಿದ್ದಾರೆ.

ಇದನ್ನೂ ಓದಿ :  ಘರ್ಜಿಸಿದ ಯಡಿಯೂರಪ್ಪ

ನಾಯಕರ ದೆಹಲಿ ಪ್ರವಾಸ, ಸಿಎಂ ಪರ,ವಿರೋಧ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಹೈಕಮಾಂಡ್ ನಿರ್ಧಾರವೇ ಅಂತಿಮ ನಿರ್ಧಾರವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದಾರೆಆದರೂ ರಾಜ್ಯ ನಾಯಕರ ಕಸರತ್ತು ಎಲ್ಲಿಗೆ ಹೋಗಿ ತಲುಪಲಿದೆ ಎಂದು ಕಾದು ನೋಡಬೇಕಿದೆ.