ಸಿಎಂ ಬದಲಾವಣೆ ಖಚಿತಾನಾ? ರಾಜ್ಯದ ಉತ್ತರಾಧಿಕಾರಿ ಯಾರು ಗೊತ್ತಾ?ರಾಜ್ಯ ರಾಜಾಕಾರಣದಲ್ಲಿ ಮಹತ್ವದ ಬೆಳವಣಿಗೆ ರಾಜ್ಯದ ಉತ್ತರಾಧಿಕಾರಿ ಪಟ್ಟವೇರಲು ರೆಡಿನಾ? ಸಿಎಂ ಕುರ್ಚಿಯಿಂದ ಕೆಳಗಿಳಿಯುತ್ತಾರಾ ರಾಜಾಹುಲಿ? ಉತ್ತರ ಕರ್ನಾಟಕ,ದಕ್ಷಿಣ ಕರ್ನಾಟಕ, ಲಿಂಗಾಯತ, ಯಾರಿಗೆ ಒಲಿಯುತ್ತೆ ಮಂತ್ರಿ ಭಾಗ್ಯ? ದೆಹಲಿಗೆ ತೆರಳಿದ ಸಚಿವರಾರು? ಗುಪ್ತವಾಗಿ ತಮ್ಮ ತಮ್ಮ ಬಣಗಳ ಸಭೆಗಳು ಎಲ್ಲಿ ನಡೆಯುತ್ತಿದೆ? ಅಲ್ಲೇನೂ ಚರ್ಚೆಯಾಗಿದೆ. ಹೀಗೆ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ದಿನೇ‌ದಿನೇ ಸಿಎಂ ಬದಲಾವಣೆ ವಿಚಾರ ತಾರಕಕ್ಕೆ ಏರುತ್ತಿದೆ.

ನಾಯಕರು ಹೇಳಿದ್ದೇನು?
ಇದೇ ಸಂದರ್ಭದಲ್ಲಿ ಹಲವಾರು ನಾಯಕರು ಸಿಎಂ ಭೇಟಿ ಮಾಡಿ, ದೆಹಲಿ ಪ್ರವಾಸ ಮಾಡುತ್ತಿದ್ದು ಎಲ್ಲರ ಕಣ್ಣು ಹುಬ್ಬೇರಿವೆ. ಕೆಲವರು ಸಿಎಂ ಜೊತೆ ಚರ್ಚೆ ನಡೆಸಿದ ಬಳಿಕ ಯುಡಿಯೂರಪ್ಪನವರ ಜೊತೆ ನಾವಿದ್ದೇವೆ.ನಮ್ಮ ಇಂದಿನ ನಾಯಕ, ಮುಂದಿನ ನಾಯಕ ಯುಡಿಯೂರಪ್ಪನವರೇ ಎಂದು ಹೇಳುತ್ತಿದ್ದಾರೆ. ಕೆಲ ನಾಯಕರು ಬದಲಾವಣೆ ಸಾಧ್ಯತೆ ಬಹಳಷ್ಟಿದೆ ಎಂದು ಹೇಳುತಿದ್ದಾರೆ. ಇನ್ನೂ ಕೆಲವರು ತಟಸ್ಥವಾಗಿ ಉಳದಿದ್ದಾರೆ. ಹಾಗೂ ಬಿಎಸವೈ ಪರ ಬ್ಯಾಟ್ ಬಿಸುತ್ತಿರುವ ನಾಯಕರು ಇದೇ ನಮ್ಮ ರಾಜಾಹುಲಿ ಮುಂದಿನ ಎರಡು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನಾಯಕರು ತಮ್ಮ ನಾಯಕನನ್ನು ಸಮರ್ಥಿಸಿ ಕೊಂಡಿದ್ದಾರೆ.? ಕೆಲ ನಾಯಕರು ಸುದ್ದಿಗಾರರೊಂದಿಗೆ ತಮ್ಮ-ತಮ್ಮ ಹೇಳಿಕೆಗಳನ್ನು ವ್ಯಕ್ತಪಡಿಸಿ ಯುಡಿಯೂರಪ್ಪನವರಿಗೆ ಬೆಂಬಲ ಸೂಚಿಸಿದರು.

ಇದನ್ನೂ ಓದಿ :  ಕಾಂಗ್ರೆಸ್ ಹಳಸಿದ ಅನ್ನ ತಿನ್ನಲು ಕಾಯುತ್ತಿದೆ. ಹೆಚ್ ಡಿಕೆ ಆಕ್ರೋಶ

ರಾಜೀನಾಮೆ ಸುಳಿವು ಕೊಟ್ರಾ ಬಿಎಸವೈ ?
ವಿಜಯೇಂದ್ರ ದೆಹಲಿ ನಾಯಕರ ಭೇಟಿ ನಂತರ ಬಿಎಸವೈ ಪಕ್ಷದ ಹೈಕಮಾಂಡ್ ಸೂಚಿಸಿದ್ರೆ ರಾಜೀನಾಮೆ ಕೊಡಲು ನಾನು ಸಿದ್ದ. ಹೈಕಮಾಂಡ್ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಅವರಿಗೆ ನನ್ನ ಕಾರ್ಯ ಚಟುವಟಿಕೆಗಳ ಬಗ್ಗೆ ಹೀಗೂ ಆಡಳ್ತದ ಬಗ್ಗೆ ಭರವಸೆ ಇದೆ ಎಂದು ತಿಳಿಸಿದರು.