ಕೋಲಾರದ ಬಡವರ ಪಾಲಿನ ಅನ್ನಪೂರ್ಣೇಶ್ವರಿ ಈ ‘ಒಂದು ರೂಪಾಯಿ ಇಡ್ಲಿ ಅಜ್ಜಿ’ !



ಕೋಲಾರ: ಆ ಅಜ್ಜಿಗೆ ಈಗಾಗಲೇ 85 ವರ್ಷ ವಯಸ್ಸಾಗಿದೆ. ಆದ್ರೆ ಅವರ ನಿಸ್ವಾರ್ಥ ಸೇವೆಗೆ ಮಾತ್ರ ಯಾವುದೇ ವಯಸ್ಸಾಗಿಲ್ಲ. ಹವ್ಯಾಸಕ್ಕಾಗಿ ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡುವ ಆ ಅಜ್ಜಿ ಯಾವ ಅನ್ನಪೂರ್ಣೇಶ್ವರಿಗೇನು ಕಡಿಮೆ ಇಲ್ಲ. ಹಾಗಿದ್ರೆ ಯಾರು ಆ ಅಜ್ಜಿ. ಎಲ್ಲಿದ್ದಾರೆ ಅನ್ನೋದನ್ನ ನೋಡೋಣ ಬನ್ನಿ. ಹೂವಿನಂತಹ ಇಡ್ಲಿ ಮಾಡುತ್ತಿರುವ ಈ ಅಜ್ಜಿಯ ಹೆಸರು ಸೆಲ್ವಮ್ಮ. ವಯಸ್ಸು 85 ವರ್ಷ. ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಪಂಪೌಹೌಸ್ ಬಳಿ ಈ ಅಜ್ಜಿ ತನ್ನ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಕಳೆದ 50 ವರ್ಷಗಳಿಂದ ಇಡ್ಲಿಯನ್ನ ನಾಲ್ಕಾಣೆ, ಐವತ್ತು ಪೈಸೆಗೆ ಮಾರುತ್ತಿದ್ದ ಅಜ್ಜಿ ಇತ್ತೀಚೆಗೆ ಒಂದು ರೂಪಾಯಿಗೆ ಇಡ್ಲಿ ಮಾರುತ್ತಾ ಬಡವರ ಹಸಿವು ನೀಗಿಸಿದ್ದಾರೆ. ಬೆಳಗ್ಗೆ ಎದ್ದು ತಾವೇ ಖುದ್ದು ತಯಾರು ಮಾಡುವ ಇಡ್ಲಿಗೆ ಎಷ್ಟು ಬೇಡಿಕೆಯಿದೆ ಎಂದರೆ ಬೆಳಗ್ಗೆ ಒಂಬತ್ತು ಗಂಟೆಯೊಳಗೆ ಎಲ್ಲಾ ಇಡ್ಲಿಯು ಖಾಲಿಯಾಗುತ್ತೆ. ಬೆಳಗ್ಗೆ 7 ಗಂಟೆಯಿಂದಲೇ ಅಜ್ಜಿ ಮನೆ ಮುಂದೆ ಇಡ್ಲಿ ತಿನ್ನೋದಕ್ಕೆಂದು ಜನ ಸಾಲುಗಟ್ಟಿ ನಿಂತಿರುತ್ತಾರೆ. ವಯಸ್ಸಾಯಿತು ಅನ್ನೋದನ್ನ ಯೋಚನೆ ಮಾಡದೆ ಅಜ್ಜಿ ಪ್ರತಿ ದಿನ 300 ಇಡ್ಲಿ, ಚಟ್ನಿ ಸಾಂಬಾರು ಸಹ ತಯಾರು ಮಾಡ್ತಾರೆ.

ಇನ್ನು ಮೂಲತಃ ತಮಿಳುನಾಡಿನವರಾದ ಇವರು ಕೋಲಾರಕ್ಕೆ ಬಂದು 55 ವರ್ಷಗಳಾಗಿದೆ. ಅಜ್ಜಿ ಮನೆಯವರು ಮೊದಲಿಂದಲೂ ಮಿಕ್ಸರ್ ವ್ಯಾಪಾರ ಮಾಡುತ್ತಿದ್ದು, ಅದರಿಂದಲೇ ಜೀವನ ನಡೆಸ್ತಿದ್ದಾರೆ. ಈಗ ಸ್ವೀಟ್ ಸ್ಟಾಲ್ ಸಹ ಇದ್ದು, ಇದೆ ಮನೆಯಲ್ಲೆ ಸ್ವೀಟ್ ಕೂಡ ತಯಾರು ಮಾಡ್ತಿದ್ದಾರೆ. ಲಾಕ್ಡೌನ್ ವೇಳೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೂ ಇಡ್ಲಿ ಮಾರಾಟ ನಿಲ್ಲಿಸಿಲ್ಲ. ಇವರ ಈ ಕಾರ್ಯಕ್ಕೆ ಮನೆಯವರೆಲ್ಲಾ ಒಗ್ಗೂಡಿ ಅಗತ್ಯ ಸಹಕಾರ ನೀಡಿದ್ದಾರೆ. ಬಡವರು, ರೋಗಿಗಳು, ಗಾರ್ಮೆಂಟ್ಸ್ ನೌಕರರು, ಆಟೋ ಚಾಲಕರು ಪ್ರತಿ ನಿತ್ಯ ಇಡ್ಲಿ ಖರೀದಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಒಟ್ನಲ್ಲಿ ಅನ್ನದಾನ ಮಹಾದಾನ ಎನ್ನುವಂತೆ 85 ವರ್ಷದ ಸೆಲ್ವಮ್ಮ 1 ರೂಪಾಯಿ ಇಡ್ಲಿ ಮಾರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇವತ್ತಿಗೂ ಆರೋಗ್ಯವಾಗಿ ತನ್ನ ಮಕ್ಕಳು, ಮೊಮ್ಮಕ್ಕಳಿಗೆ ಪುಣ್ಯ ಬರಲಿ ಅಂತಾ ಅದೆಷ್ಟೋ ಜನರ ಹೊಟ್ಟೆ ತುಂಬಿಸುತ್ತಿರುವ ಈ ಅಜ್ಜಿ ಕಲಿಯುಗದ ಅನ್ನಪೂರ್ಣೆಶ್ವರಿ ಅಂದ್ರೆ ತಪ್ಪಿಲ್ಲ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ http://www.uralsayurveda.in https://www.facebook.com/DrUrals/ +91 81053 71042 , 8310191364.