104 ವರ್ಷದ ಈ ವೈದ್ಯ 9 ಸಾವಿರ ಮಕ್ಕಳ ತಂದೆ! ; ಇಲ್ಲಿದೆ ಒಂದು ರೋಚಕ ಕಹಾನಿ?!ಮಿಚಿಗನ್: ಈ ಚಿತ್ರದಲ್ಲಿ ಕಾಣಿಸುತ್ತಿರುವವರು 104 ವರ್ಷದ ವ್ಯಕ್ತಿಯ ಹೆಸರು ಡಾ. ಫಿಲಿಪ್ ಪೇವೆನ್‌. ಅಮೆರಿಕಾದ ಮಿಚಿಗನ್ನ ಪ್ರಸಿದ್ಧ ಪ್ರಸೂತಿ ತಜ್ಞ ಹಾಗೂ ಸ್ತ್ರೀರೋಗತಜ್ಞ. ಇದೇ ಕ್ಷೇತ್ರದಲ್ಲಿ 40 ವರ್ಷಗಳ ಅಪಾರ ಅನುಭವ ಇವರಿಗಿದೆ. ಅವರ ಪಕ್ಕದಲ್ಲಿ ಇರುವವರು ಅವರ ಒಬ್ಬ ಪೇಷೆಂಟ್ ಆಗಿದ್ದವರ ಮಗಳು ಜೇಮ್ ಹಾಲ್. ಈ ವೈದ್ಯರೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾರೆ. ಹಿಂದೆಲ್ಲಾ ಪ್ರಖ್ಯಾತ ವೈದ್ಯ ಎಂದು ತಮ್ಮ ದೇಶದಲ್ಲಿ ಅದರಲ್ಲಿಯೂ ಮಿಚಿಗನ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದ ಈ ವೈದ್ಯ ಇದೀಗ ತಮ್ಮ 40 ವರ್ಷಗಳ ಸುದೀರ್ಘ ಅನುಭವದ ನಂತರ ಇಡೀ ವಿಶ್ವದಲ್ಲಿಯೇ ಫೇಮಸ್ ಆಗಿಬಿಟ್ಟಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣ ಎಂದರೆ, ಡಾ. ಫಿಲಿಪ್ ಪೇವೆನ್‌ ಅವರ ನಾಲ್ಕು ದಶಕಗಳ ರಹಸ್ಯವೊಂದು ಇದೀಗ ಬಯಲಾಗಿದೆ. ಅದೇನೆಂದರೆ ಇವರು ಸುಮಾರು ಒಂಬತ್ತು ಸಾವಿರ ಮಕ್ಕಳ ತಂದೆಯೆಂಬ ರಹಸ್ಯವದು! ತಮ್ಮ 40 ವರ್ಷಗಳ ವೈದ್ಯಕೀಯ ವೃತ್ತಿಯಲ್ಲಿ 9 ಸಾವಿರ ಮಕ್ಕಳಿಗೆ ಇವರು ತಂದೆಯಾಗಿದ್ದಾರೆ ಎಂಬ ಸುದ್ದಿ ಎಲ್ಲರ ಹುಬ್ಬೇರುವಂತೆ ಮಾಡುತ್ತಿದೆ. ಎಷ್ಟೋ ಮಂದಿ ಇದು ಅಸಾಧ್ಯ, ಸುಳ್ಳು ಸುದ್ದಿ, ಕಟ್ಟುಕಥೆ ಎಂದೆಲ್ಲಾ ಹೇಳುತ್ತಿದ್ದಾರೆ.

ಅಷ್ಟಕ್ಕೂ ಇಂಥ ಅಸಾಧ್ಯ ಎನ್ನುವಂಥ ‘ಸಾಧನೆ’ ಮಾಡಿದ್ದು ಹೇಗೆ ಎಂದು ನಿಮಗೂ ಪ್ರಶ್ನೆ ಬಂದಿರಲಿಕ್ಕೆ ಸಾಕು. ಇವರು ಇಲ್ಲಿಯವರೆಗೆ ಇಷ್ಟು ಪ್ರಸಿದ್ಧಿಗೆ ಬರಲು ಕಾರಣವಾಗಿದ್ದು, ಸಂತಾನ ಭಾಗ್ಯ ಇಲ್ಲದವರು ಯಾರೇ ಬಂದರೂ ಇವರ ಬಳಿ ಚಿಕಿತ್ಸೆ ಪಡೆದರೆ ಮಕ್ಕಳಾಗುತ್ತಿತ್ತು ಎನ್ನುವ ಕಾರಣಕ್ಕೆ. ಇದೀಗ ಇದೇ ರಹಸ್ಯ ಬಯಲಾಗಿದೆ. ದಂಪತಿ ಚಿಕಿತ್ಸೆಗೆಂದು ಇವರ ಬಳಿ ಬಂದಾಗ, ಪುರುಷರಲ್ಲಿ ವೀರ್ಯದ ಕೊರತೆ ಅಥವಾ ಸಮಸ್ಯೆಗಳಿಂದ ಮಕ್ಕಳಾಗುವುದಿಲ್ಲ ಎಂದು ತಿಳಿದಾಗ, ಅವರ ಅರಿವಿಗೆ ಬಾರದೇ ತಮ್ಮದೇ ವೀರ್ಯವನ್ನು ದಾನ ಮಾಡುವ ಮೂಲಕ ದಂಪತಿಗೆ ಮಕ್ಕಳಾಗುವ ಹಾಗೆ ಮಾಡುತ್ತಿದ್ದುದು ಈಗ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಮಕ್ಕಳಾಗುವುದಿಲ್ಲ ಎಂದಾಗ ಮಹಿಳೆಯರನ್ನೇ ದೂಷಿಸುವುದು ಸಾಮಾನ್ಯ ಆಗಿರುವುದನ್ನು ಅರಿತಿದ್ದ ಡಾ. ಫಿಲಿಪ್ ಪೇವೆನ್‌, ದಂಪತಿಗೆ ತಿಳಿಯದಂತೆ ತಮ್ಮದೇ ವೀರ್ಯದಾನ ಮಾಡುತ್ತಿದ್ದರು.

ಇದೇ ರೀತಿ ಈ 40 ವರ್ಷಗಳಲ್ಲಿ ಸುಮಾರು 9 ಸಾವಿರ ಬಾರಿ ವೀರ್ಯದಾನ ಮಾಡಿದ್ದು, ಅವರಿಗೆ ಮಕ್ಕಳಾಗಿವೆ. ಆದ್ದರಿಂದ ಈ ಎಲ್ಲಾ ಮಕ್ಕಳಿಗೆ ಇವರೇ ತಂದೆ. ಅಷ್ಟಕ್ಕೂ ಈ ವಿಷಯ ಬೆಳಕಿಗೆ ಬರುತ್ತಲೇ ಇರಲಿಲ್ಲ. ಏಕೆಂದರೆ ಅಪ್ಪ ಇನ್ಯಾರೋ ಎಂದಾಗ ಅದನ್ನು ಕುಟುಂಬಸ್ಥರು ಸಹಿಸುವುದಿಲ್ಲ ಎನ್ನುವುದು ಈ ವೈದ್ಯರಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಜೇಮ್​ ಹಾಲ್​ (ಚಿತ್ರದಲ್ಲಿ ಇರುವವರು) ಅವರ ಡಿಎನ್​ಎಯನ್ನು ಪರೀಕ್ಷೆ ಮಾಡಬೇಕಾಗಿ ಬಂದ ಅನಿವಾರ್ಯತೆ ಉಂಟಾಗಿತ್ತು. ಆಗ ಅವರ ಡಿಎನ್​ಎ ಪರೀಕ್ಷೆ ಮಾಡಿದಾಗ ತಂದೆ-ತಾಯಿಯ ಡಿಎನ್​ಎಗೆ ಮ್ಯಾಚ್​ ಆಗಿರಲಿಲ್ಲ. ಕುಟುಂಬದಲ್ಲಿ ಯಾರ ಡಿಎನ್​ಎಯೂ ಮ್ಯಾಚ್​ ಆಗಲಿಲ್ಲ. ಇದರಿಂದ ಸಂದೇಹಗೊಂಡ ಜೇಮ್​ಹಾಲ್​, ಈ ಗುಟ್ಟು ತಿಳಿಯಲೇಬೇಕೆಂದು ಪಣತೊಟ್ಟು ಸಾಕಷ್ಟು ಅಧ್ಯಯನ ಮಾಡಿದಾಗ ಅವರಿಗೆ ಇದೇ ವೈದ್ಯ ತನ್ನ ತಂದೆ ಎಂದು ತಿಳಿದಿದೆ. ಇದರ ಬೆನ್ನುಹತ್ತಿ ಹೋದ ಅವರಿಗೆ ಈ ವೈದ್ಯರು ಎಷ್ಟೋ ದಂಪತಿಗೆ ಮಕ್ಕಳು ನೀಡಿರುವುದು ತಿಳಿದಿದೆ. ಸದ್ಯ ಜೇಮ್​ಹಾಲ್​ ಅವರ ಅಪ್ಪ-ಅಮ್ಮ ಇಬ್ಬರೂ ಬದುಕಿಲ್ಲ. ಇದೀಗ 104 ವರ್ಷದ ಡಾ.ಫಿಲಿಪ್ ಪೆವೆನ್ ಅವರನ್ನು ತಂದೆಯನ್ನಾಗಿ ಸ್ವೀಕರಿಸಿದ್ದಾರೆ ಜೇಮ್​.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/