ಒಂದೇ ಹೆಲಿಕಾಪ್ಟರ್ನಲ್ಲಿ ಬಂದಿಳಿದ ರಾಜಕೀಯ ಬದ್ಧ ವೈರಿಗಳು! ; ಇದೀಗ ಪುಲ್ ವೈರಲ್!!ಶಿವಮೊಗ್ಗ: ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಭಾನುವಾರ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಂದೇ ಹೆಲಿಕಾಪ್ಟರ್ನಲ್ಲಿ ಬಂದಿಳಿದರು. ಅರೆ! ಇದೇನಿದು? ರಾಜಕೀಯ ಬದ್ಧ ವೈರಿಗಳು ಒಂದೇ ಹೆಲಿಕಾಪ್ಟರ್ನಲ್ಲಿ ಬಂದಿಳಿದರಾ? ಎಂದು ಅಚ್ಚರಿಪಡಬೇಕಿಲ್ಲ. ಹೆಲಿಕಾಪ್ಟರ್ ಒಂದೇ ಆದರೂ ಬಂದಿಳಿದ ಸಮಯ ಮಾತ್ರ ಬೇರೆ ಬೇರೆ. ಹೌದು, ತರೀಕೆರೆ ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್ ಪುತ್ರಿಯ ಮದುವೆ ಸಮಾರಂಭ ಶಿವಮೊಗ್ಗದಲ್ಲಿ ಭಾನುವಾರ ನಿಗದಿಯಾಗಿತ್ತು. ಹಾಗಾಗಿ ಸಿದ್ದರಾಮಯ್ಯ ಅವರಿಗೆ ವಿಟಿ-ಎಚ್ಕೆಬಿ ಹೆಸರಿನ ಹೆಲಿಕಾಪ್ಟರ್ಗೆ ಮೊದಲೇ ಬುಕ್ ಆಗಿತ್ತು. ಭಾನುವಾರ ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ಹೊರಡಬೇಕಿತ್ತು. ಆದರೆ ಭಾನುವಾರ ಬೆಳಗ್ಗೆ ಸಿಎಂ ಯಡಿಯೂರಪ್ಪಗೆ ಶಿವಮೊಗ್ಗಕ್ಕೆ ಬರಲು ಅದೇ ಹೆಲಿಕಾಪ್ಟರನ್ನು ದಿಢೀರ್ ಬುಕ್ ಮಾಡಿದ್ದರಿಂದ ಸಿಎಂ ಅವರನ್ನು ಬೆಳಗ್ಗೆ 8.40ಕ್ಕೆ ಕರೆತಂದ ಹೆಲಿಕಾಪ್ಟರ್ ಮತ್ತೆ ಬೆಂಗಳೂರಿಗೆ ಮರಳಿ ಸಿದ್ದರಾಮಯ್ಯ ಅವರನ್ನು ಮಧ್ಯಾಹ್ನ 12.05ಕ್ಕೆ ಕರೆತಂದಿತು.

ಬಿಎಸ್ವೈ ಭಾನುವಾರ ಶಿವಮೊಗ್ಗದಲ್ಲೇ ವಾಸ್ತವ್ಯ ಹೂಡಲಿದ್ದು, ಹೆಲಿಕಾಪ್ಟರ್ ಮಧ್ಯಾಹ್ನ 3.30ಕ್ಕೆ ಸಿದ್ದರಾಮಯ್ಯ ಅವರನ್ನು ಬದಾಮಿಗೆ ಕರೆದೊಯ್ಯಲಿದೆ. ಸೋಮವಾರ ಬೆಳಗ್ಗೆ 9ಕ್ಕೆ ಶಿವಮೊಗ್ಗಕ್ಕೆ ಅದೇ ಹೆಲಿಕಾಪ್ಟರ್ ಬಂದು ಸಿಎಂ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಿದೆ. ಹಾಗೇ ಇಂದು ಬೆಂಗಳೂರು  ‘ದಿ ಕ್ಲೀನ್ ಏರ್ ಸ್ಟ್ರೀಟ್’ ಪರಿಕಲ್ಪನೆಗೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಪ್ರತಿವರ್ಷ ವಾಹನಗಳ ಸಂಖ್ಯೆ ಶೇ.10ರಷ್ಟು ಏರಿಕೆಯಾಗ್ತಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ವಾಯುಮಾಲಿನ್ಯ ನಿಯಂತ್ರಣಕ್ಕೆ ಹೊಸ ಪ್ಲ್ಯಾನ್ ಮಾಡಲಾಗಿದೆ. ಆದಕಾರಣ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ನಲ್ಲಿ ಪ್ರತಿ ಶನಿವಾರ, ಭಾನುವಾರ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಮುಂದಿನ ಫೆಬ್ರವರಿ 25, 2021ರವರೆಗೆ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938