ತಿಥಿ ಊಟ, ಶ್ರಾದ್ಧಕ್ಕೆ ಕಾಗೆ ಬಾಡಿಗೆಗೆ ಸಿಗುತ್ತದೆ!ಉಡುಪಿ: ಸಾಮಾನ್ಯವಾಗಿ ಶ್ರಾದ್ಧ, ತಿಥಿ ಕಾರ್ಯಗಳಲ್ಲಿ ಊಟ ಮಾಡುವವರ ಸಂಖ್ಯೆ ಕಡಿಮೆ. ಹಾಗೇ ಇತ್ತೀಚೆಗೆ ಎಲ್ಲೆಡೆ ಕಾಗೆ ಅಭಾವ. ಹೀಗಾಗಿ ಸಂಪ್ರದಾಯ, ನಂಬಿಕೆಗೆ ಕುತ್ತು ಬಂದಿದೆ. ಕಾಗೆ ಅನ್ನ ತಿನ್ನದೆ ಮೃತರ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ ಎಂದು ನೊಂದುಕೊಳ್ಳುವ ಮನೆಮಂದಿ ಇವರನ್ನು ಸಂಪರ್ಕಿಸಿದರೆ ಇವರು ಸಾಕಿದ ಕಾಗೆ ತಿಥಿ ಊಟ ತಿನ್ನುವ ಸೇವೆಗೆ ಹಾಜರಾಗುತ್ತದೆ. ಹೌದು, ಕಾಪು ಸಮೀಪದ ‘ಮಲ್ಲರ್’ ಕೊಂಬಗುಡ್ಡೆಯ ಪ್ರಶಾಂತ್ ಪೂಜಾರಿ ಎಂಬುವವರು ಕಾಗೆ ಸಾಕುವ ಮೂಲಕ ಶ್ರಾದ್ಧ, ತಿಥಿ ಕಾರ್ಯಗಳಿಗೆ ಅನ್ನ ಅಗುಳು ತಿನ್ನಲು ಕಾಗೆ ಒದಗಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಕಾಪುವಿನಲ್ಲಿ ‘ಕ್ಲಾಸಿಕ್’ ಹೆಸರಿನ ಟೈಲರ್ ಅಂಗಡಿ ನಡೆಸುತ್ತಿರುವ ಪ್ರಶಾಂತ್ ರವರ ಪ್ರವೃತ್ತಿ ಹಲವು. ಇದಕ್ಕಿಂತಲೂ ಹೆಚ್ಚಾಗಿ ಪ್ರಶಾಂತ್ ಅವರಿಗೆ ಪ್ರಾಣಿ ಪಕ್ಷಿಗಳೆಂದರೆ ಬಲು ಇಷ್ಟ.

ತಮ್ಮ ಮನೆ ಸಮೀಪದಲ್ಲಿದ್ದ ತೆಂಗಿನ ಮರದಿಂದ ಮೂರು ಕಾಗೆ ಮರಿಗಳು ಕೆಳಕ್ಕೆ ಬಿದ್ದಿದ್ದವು, ಇದನ್ನು ಕಂಡ ಪಕ್ಷಿಪ್ರಿಯ ಪ್ರಶಾಂತ್ ಅದನ್ನು ಮನೆಗೆ ತಂದು ಸಾಕಿದ್ದಾರೆ. ಆದರೆ ಕೆಲವೇ ದಿನಗಳಲ್ಲಿ ಅರೋಗ್ಯ ಏರುಪೇರಿನಿಂದ ಎರಡು ಮರಿಗಳು ಸಾವನ್ನಪ್ಪಿದೆ. ಒಳಿದ ಒಂದು ಮರಿಯನದನು ಜಾಣತನದಿಂದಲೇ ಸಾಕಿ ಬೆಳೆಸಿದ್ದಾರೆ‌. ಜೊತೆಗೆ ಆ ಕಾಗೆಗೆ ‘ರಾಜ’ ಎಂದು ನಾಮಕರಣ ಮಾಡಿದ್ದಾರೆ. ವೈಕುಂಠ ಸಮಾರಧನೆ ಪಿತೃಗಳಿಗೆ ಬಡಿಸುವ ಊಟವನ್ನು ಕಾಗೆ ತಿನ್ನಲೇ ಬೇಕಾದ ಅನಿವಾರ್ಯವಾಗಿ ಈ ಕಾಗೆಯು ಆ ಕಾರ್ಯವನ್ನು ಸಲೀಸಾಗಿ ಮಾಡಿ ಮುಗಿಸುತ್ತದೆ. ಈ ವಿಚಾರವನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/