ಕ್ಲಾಸ್ ರೂಮ್‌ ಅಲ್ಲೆ ತನ್ನ ಗೆಳತಿಗೆ ತಾಳಿ ಕಟ್ಟಿದ ಹೈಸ್ಕೂಲ್ ವಿದ್ಯಾರ್ಥಿ! ; ವೀಡಿಯೋ ಈಗ ಸಕ್ಕತ್ ವೈರಲ್!

ರಾಜಮಂಡ್ರಿ (ಆಂಧ್ರಪ್ರದೇಶ): ಅತ್ಯಂತ ಅಚ್ಚರಿ ಹಾಗೂ ಪಾಲಕರಿಗೆ ಗಾಬರಿ ಹುಟ್ಟಿಸುವಂಥ ಘಟನೆಯೊಂದು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದಿದೆ. ಅದೇನೆಂದರೆ ಶಾಲೆಯ ಒಳಗೇ ವಿದ್ಯಾರ್ಥಿಯೊಬ್ಬ, ತನ್ನ ಕ್ಲಾಸ್ಮೇಟ್ ವಿದ್ಯಾರ್ಥಿನಿಗೆ ತಾಳಿ ಕಟ್ಟಿ ಮದುವೆ ಮಾಡಿಕೊಂಡಿದ್ದಾನೆ.! ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ರಾಜಮಂಡ್ರಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಳೆದ ತಿಂಗಳು 17 ರಂದು ಈ ವಿವಾಹ ನಡೆದಿದ್ದು, ಅದರ ಫೋಟೋ ಇದೀಗ ವೈರಲ್ ಆಗಿದೆ. ತಮ್ಮ ಮಕ್ಕಳು ಈ ರೀತಿ ಮಾಡಿದ್ದಾರೆ ಎಂದು ಪಾಲಕರಿಗೆ ಅರಿವೇ ಇರಲಿಲ್ಲ.

ಯಾವಾಗ ಈ ಫೋಟೋ ವೈರಲ್ ಆಗಿ ಅವರ ಕಣ್ಣಿಗೂ ಬಿತ್ತೋ, ವಿದ್ಯಾರ್ಥಿಗಳ ಪಾಲಕರು ದಂಗಾಗಿಹೋಗಿದ್ದಾರೆ. ವಿವಾಹವು ವಿನೋದಕ್ಕಾಗಿ ನಡೆದಿದೆಯೆ, ಯಾರಿಗಾದರೂ ಚಾಲೆಂಜ್ ಮಾಡಿರುವುದಕ್ಕೆ ನಡೆದಿದೆಯೇ ಅಥವಾ ನಿಜವಾಗಿಯೂ ಇವರಿಬ್ಬರು ಪ್ರೇಮಿಗಳಾಗಿದ್ದು, ನಿಜವಾಗಿಯೂ ಮದುವೆ ಮಾಡಿಕೊಂಡಿದ್ದಾರೆಯ? ಈ ಫೋಟೋದ ಅಸಲಿಯತ್ತೇನು ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ವಿಷಯ ಕಾಲೇಜು ಪ್ರಾಂಶುಪಾಲರಿಗೆ ತಿಳಿದಿದ್ದು, ಇಬ್ಬರನ್ನೂ ಶಾಲೆಯಿಂದ ಹೊರಹಾಕಲಾಗಿದೆ. ಟಿ.ಸಿ ಕೊಟ್ಟು ಕಳುಹಿಸಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ :  ಬ್ರೇಕಿಂಗ್ ನ್ಯೂಸ್ :ರಿಲೀಸ್ ಆಯ್ತು ಫೌಜಿ ಗೇಮ್ ; ಡೌನ್ ಲೋಡ್ ಮಾಡಲು ಇಲ್ಲಿದೆ ಲಿಂಕ್!

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/