ವಧುವನ್ನು ಡ್ಯಾನ್ಸ್ ಮಾಡಲು ಎಳೆದ ವರನ ಸ್ನೇಹಿತರು! ; ಮುಂದೆ ಆದದ್ದು ಮಾತ್ರ ವಿಷಾದಕರ ಸಂಗತಿ?!ಬರೇಲಿ(ಉತ್ತರ ಪ್ರದೇಶ): ಕೆಲವು ಸಂಪ್ರದಾಯಗಳ ಮದುವೆಗಳಲ್ಲಿ ನೃತ್ಯ, ಹಾಡು ಎಲ್ಲವೂ ಕಾಮನ್. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಉತ್ತರ ಪ್ರದೇಶದ ಬರೇಲಿಯಲ್ಲಿ ಘಟನೆಯೊಂದು ನಡೆದಿದೆ. ಮದುವೆ ಮನೆಯಲ್ಲಿ ಚಲನಚಿತ್ರಗೀತೆಗಳನ್ನು ಹಾಕಿದ್ದಾರೆ. ವರ- ವಧು ಇಬ್ಬರೂ ನೃತ್ಯ ಮಾಡುತ್ತಲೇ ಇದ್ದರು. ಅಷ್ಟೊತ್ತಿಗಾಗಲೇ ವರನ ಸ್ನೇಹಿತರು ಮದುವೆಯನ್ನು ಇನ್ನಷ್ಟು ಸುಂದರಗೊಳಿಸಲು ತಾವೂ ಕುಣಿದು ಕುಪ್ಪಳಿಸಲು ಶುರು ಮಾಡಿದರು. ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಮದುವೆಗೆ ಬಂದವರೂ ಖುಷಿಯಿಂದ ಮದುವೆಯ ಸಂಭ್ರಮ ಸವಿಯುತ್ತಿದ್ದರು. ಆದರೆ ವರನ ಸ್ನೇಹಿತರು ಇಷ್ಟಕ್ಕೇ ಸುಮ್ಮನಾಗಲಿಲ್ಲ. ವರನನ್ನು ಕರೆದುಕೊಂಡು ನೃತ್ಯ ಮಾಡುತ್ತಿದ್ದವರು ಕೂಡಲೇ ವಧುವಿನತ್ತ ಹೋದರು. ವಧುವನ್ನು ನೃತ್ಯಕ್ಕೆ ಆಹ್ವಾನಿಸಿದರು. ಆದರೆ ವರನ ಸ್ನೇಹಿತರ ಜತೆಗೆ ಡಾನ್ಸ್ ಮಾಡಲು ವಧು ಒಪ್ಪಲಿಲ್ಲ. ತಾನು ಬರುವುದಿಲ್ಲ ಎಂದಿದ್ದಾಳೆ. ಆದರೆ ಈ ಸ್ನೇಹಿತರು ಬಿಡದೇ ಮದುಮಗಳನ್ನು ಬಲವಂತದಿಂದ ಹಿಡಿದು ಎಳೆದಾಡಿದ್ದಾರೆ. ಅಲ್ಲಿಯವರೆಗೆ ತಾಳ್ಮೆಯಿಂದ ಇದ್ದ ಮದುಮಗಳಿಗೆ ಈ ಅತಿರೇಕ ನೋಡಿ ವಿಪರೀತ ಕೋಪ ಬಂತು.

ಗಂಡನಾಗುವವ ಕೂಡ ಏನೂ ಹೇಳದಿದ್ದುದನ್ನು ಕಂಡು ಇನ್ನಷ್ಟು ಕೋಪ ಉಕ್ಕಿತು. ಅಷ್ಟೇ… ವರ ಹಾಕಿದ್ದ ಮಾಲೆಯನ್ನು ಕಿತ್ತು, ತನಗೆ ಮದುವೆಯೇ ಬೇಡ ಎಂದು ಕೂಗಿದಳು. ಅಲ್ಲಿದ್ದವರೆಲ್ಲಾ ಒಂದು ಕ್ಷಣ ಕಂಗಾಲಾಗಿ ಹೋದರು. ಅವಳ ಮನವೊಲಿಸಲು ಬಂದರು. ಆದರೆ ಜಪ್ಪಯ್ಯ ಎಂದರೂ ವಧು ಕೇಳಲಿಲ್ಲ. ಮದುವೆಯನ್ನು ಅಲ್ಲಿಯೇ ನಿಲ್ಲಿಸಿ ಹೊರಟೇ ಹೋದಳು. ಎರಡೂ ಕುಟುಂಬದವರ ನಡುವೆ ವಾಗ್ವಿವಾದಕ್ಕೆ ಇದು ಕಾರಣವಾಯಿತು. ವಧುವಿನ ಮನೆಯವರು ಮದುವೆಯನ್ನು ನಿಲ್ಲಿಸಿದ್ದು ಮಾತ್ರವಲ್ಲದೇ, ಅವರು ಮದುಮಗ ವರದಕ್ಷಿಣೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ವರದಕ್ಷಿಣೆ ಕೇಸ್ ಕೂಡ ಹಾಕಿಬಿಟ್ಟರು. ನಂತರ ಎರಡೂ ಕುಟುಂಬವನ್ನು ಒಟ್ಟಿಗೇ ಕುಳ್ಳರಿಸಿ ಮಾತುಕತೆ ಮಾಡಲಾಯಿತು. ವರನ ಕಡೆಯವರು ಮದುವೆಯ ಖರ್ಚಿಗೆಂದು ಪಡೆದುಕೊಂಡಿದ್ದ ಆರೂವರೆ ಲಕ್ಷ ರೂಪಾಯಿಗಳನ್ನು ಹಿಂದಿರುಗಿಸಿದರು. ಅಲ್ಲಿಯೇ ಮದುವೆ ಮುರಿದುಬಿತ್ತು

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/