ಸಮಾದಿಯಿಂದ ಹುಡುಗಿಯರ ಮೃತ ದೇಹ ಕದಿಯುವುದೇ ಈತನ ಕಾರ್ಯ! ; ಕಾರಣ ಕೇಳಿದ್ರೆ ಶಾಕ್ ಆಗ್ತೀರ.ಮಾಸ್ಕೋ: ಮೃತ ಹುಡುಗಿಯರ ಸಮಾಧಿಯನ್ನು ಅಗೆದು ಮಮ್ಮಿಫೈಡ್ ಶವಗಳೊಂದಿಗೆ ವಾಸಿಸಿ, ಇದೀಗ ಬಂಧನಕ್ಕೆ ಗುರಿಯಾಗಿರುವ ರಷ್ಯಾ ಇತಿಹಾಸಕಾರ ತಾನು ಮಾಡಿದ ಕೃತ್ಯಕ್ಕೆ ಮೃತರ ಸಂಬಂಧಿಕರ ಬಳಿ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ. ರಷ್ಯಾದ ನಿಝಾನಿ ನೊವ್ಗೊರೊಡ್ ಮೂಲದ ಅನಾಟೊಲಿ ಮೊಸ್ಕ್ವಿನ್ (53) ಸಮಾಧಿಯಿಂದ ತೆಗೆದ ಸುಮಾರು 29 ಹುಡುಗಿಯರ ಮೃತದೇಹವನ್ನು ಬೊಂಬೆಗಳಾಗಿ ಪರಿವರ್ತಿಸುತ್ತಿದ್ದ. ಸಂಗ್ರಹಿಸಿದ ಶವಗಳಿಗೆ ಉಡುಪು ಧರಿಸಿ, ಮಂಡಿಯವರೆಗೆ ಬೂಟ್ಸ್ ಹಾಕಿ, ಲಿಪ್ಸ್ಟಿಕ್ ಮತ್ತು ಮುಖಕ್ಕೆ ಮೇಕಪ್ ಮಾಡಿ ಚೆನ್ನಾಗಿ ಸಿಂಗರಿಸಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದ.  ಇದೀಗ ಬಂಧನವಾಗಿರುವ ಆತನನ್ನು ಮನೋವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ಸಮಾಧಿಯಿಂದ ಶವ ಕೀಳುವುದರಲ್ಲಿ ನಿಪುಣರಾಗಿರುವ ನಿಝಾನಿ, ತನ್ನ ಬೆಡ್ರೂಮಿನಲ್ಲಿ ಮೃತ ಸಂತ್ರಸ್ತೆಯರ ಹುಟ್ಟುಹಬ್ಬ ದಿನಾಂಕವನ್ನು ಬರೆದುಕೊಂಡಿದ್ದಾರೆ. ತನ್ನ ಗರ್ಲ್ಫ್ರೆಂಡ್ ಎಂದು ನಿಝಾನಿ ಹೇಳಿಕೊಳ್ಳುತ್ತಿದ್ದ ಎನ್ನಲಾಗಿದೆ. ಮೃತರ ಕುಟುಂಬದವರು ಸಹ ಆರೋಪಿ ನಿಝಾನಿ ಇರುವ ಫ್ಲ್ಯಾಟ್ನಲ್ಲೇ ವಾಸವಿದ್ದು, ಆತನ ಕೃತ್ಯದ ಬಗ್ಗೆ ಈವರೆಗೂ ಒಂದು ಸುಳಿವು ಸಹ ಸಿಕ್ಕಿರಲಿಲ್ಲ ಎಂದಿದ್ದಾರೆ.

ತನ್ನ ಕೃತ್ಯದ ಬಗ್ಗೆ ನಿಝಾನಿ ಕ್ಷಮೆ ಕೋರಲು ನಿರಾಕರಿಸಿದ್ದು, ತನ್ನ ತಾಯಿಯನ್ನು ನೋಡಿಕೊಳ್ಳಲು ಮತ್ತು ಹೊಸ ಗರ್ಲ್ಫ್ರೆಂಡ್ (ಹೊಸದಾಗಿ ಹುಡುಗಿಯ ಶವ) ಜತೆ ಇರಲು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ನನ್ನ ಬಳಿ ಇರುವ ಹುಡುಗಿಯರು ಕೇವಲ ಹುಡುಗಿಯರಷ್ಟೇ. ನನ್ನ ದೃಷ್ಟಿಯಲ್ಲಿ ಅವರ್ಯಾರಿಗೂ ಪಾಲಕರಿಲ್ಲ. ಅವರ ಬಗ್ಗೆ ನನಗೇನು ತಿಳಿದಿಲ್ಲ. ಮಕ್ಕಳ ಶವವನ್ನು ಸಂಸ್ಕಾರ ಮಾಡಿದ ಬಳಿಕ ಪಾಲಕರಿಗೆ ಅವರ ಮೇಲಿನ ಹಕ್ಕುಗಳು ಅಲ್ಲಿಗೆ ಕೊನೆಯಾಯಿತು ಎಂದು ಭಾವಿಸಿದ್ದೇನೆ. ಹೀಗಾಗಿ ನಾನು ಯಾರನ್ನೂ ಕ್ಷಮೆ ಕೋರುವುದಿಲ್ಲ ಎಂದು ನಿಝಾನಿ ತಿರಸ್ಕರಿಸಿದ್ದಾರೆ. ನಿಝಾನಿ 3 ರಿಂದ 12 ವರ್ಷ ವಯಸ್ಸಿನ ಹೆಣ್ಣು ಮಕ್ಕಳ ಮೃತದೇಹವನ್ನೇ ಸಂಗ್ರಹಿಸಿದ್ದಾರೆ. ನಿಮ್ಮ ಮಕ್ಕಳನ್ನು ನೀವು ಶೀತದಲ್ಲಿಟ್ಟು ಹೋಗಿ ನಾನು ಅವರನ್ನು ತೆಗೆದು ತಂದು ಬೆಚ್ಚಗೆ ಇಡುತ್ತೇನೆಂದು ಈ ಹಿಂದೆ ಪೋಷಕರಿಗೆ ಹೇಳಿದ್ದರಂತೆ. ಇನ್ನು ಮನೆಯಲ್ಲಿ ಬೊಂಬೆಗಳನ್ನು ನೋಡಿದ್ದ ನಿಝಾನಿ ತಾಯಿಗೆ ಅವುಗಳು ಶವಗಳಿಂದ ಮಾಡಿದ್ದ ಎಂದು ತಿಳಿದೇ ಇರಲಿಲ್ಲವಂತೆ. ಯಾವುದೋ ಮನೋವ್ಯಾಧಿ ಇರಬಹುದೆಂದು ನಿಝಾನಿಗೆ ಸದ್ಯ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938