“ಮಸೀದಿಯಲ್ಲಿ ಹೋಮ ಮಾಡುತ್ತೇವೆ!” ; ತಮ್ಮ ಹೇಳಿಕೆ ಹಿಂಪಡೆದ ವಿಶ್ವ ಹಿಂದೂ ಪರಿಷತ್​ನ ನಾಯಕಿ. ಇಲ್ಲಿದೆ ಶಾಕಿಂಗ್ ಕಾರಣ!

ಲಖನೌ: ಮುಸ್ಲಿಂ ಧರ್ಮದವರು ಹಿಂದೂ ದೇವಾಲಯದಲ್ಲಿ ನಮಾಜ್ ಮಾಡಿ, ಪೊಲೀಸ್ ಪ್ರಕರಣ ದಾಖಲಾದ ಬೆನ್ನಲ್ಲೇ, ಮಸೀದಿಗಳಲ್ಲಿ ಹೋಮ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್ನ ನಾಯಕಿಯೊಬ್ಬರು ಹೇಳಿದ್ದಾರೆ. ನಾಯಕಿಯ ಈ ಹೇಳಿಕೆ ಭಾರಿ ಪ್ರಮಾಣದ ವಿವಾದಕ್ಕೆ ಕಾರಣವಾದ ನಂತರ ಅವರು ಹೇಳಿಕೆ ಹಿಂಪಡೆದಿದ್ದಾರೆ ಎನ್ನಲಾಗಿದೆ. ‘ಮುಸಲ್ಮಾನರು ಸಾಮಾಜಿಕ ಸಮನ್ವಯದ ಹೆಸರಿನಲ್ಲಿ ಹಿಂದೂ ದೇವಾಲಯಗಳಿಗೆ ಬಂದು ನಮಾಜ್ ಮಾಡುತ್ತಾರೆ. ನಾವು ಹಿಂದೂಗಳೂ ಕೂಡ ಅದೇ ರೀತಿಯಲ್ಲಿ ಮಸೀದಿಗಳಿಗೆ ತೆರಳಿ ಹೋಮ ಹವನ ಮಾಡಬೇಕು. ನಾನು ಲಖನೌನ ಪುರಾತನ ಮಸೀದಿಯಲ್ಲಿ ಹೋಮ ಮಾಡುತ್ತೇನೆ’ ಎಂದು ಪರಿಷತ್ತಿನ ನಾಯಕಿ ಸಾಧ್ವಿ ಪ್ರಾಚಿ ಶುಕ್ರವಾರ ಹೇಳಿದ್ದಾರೆ. ತಮ್ಮ ಜತೆಗೆ ಹೋಮ ನಡೆಸಲು ಬಿಜೆಪಿ ಮತ್ತು ಬೇರೆ ಸಂಘಟನೆಗಳ ನಾಯಕರಿಗೂ ಕರೆ ನೀಡಿದ್ದಾರೆ.

ಲವ್ ಜಿಹಾದ್ ಮೂಲಕ ಹಿಂದೂ ಯುವತಿರನ್ನು ಬಲಿ ತೆಗೆದುಕೊಳ್ಳುವ ಮುಸ್ಲಿಂ ಯುವಕರನ್ನು ನೇರವಾಗಿ ನೇಣಿಗೆ ಏರಿಸಬೇಕೆಂದೂ ಅವರು ಹೇಳಿದ್ದಾರೆ. ಪ್ರಾಚಿಯವರು ಈ ರೀತಿ ಹೇಳಿರುವುದಕ್ಕೆ ಅನೇಕರು ಆಕ್ರೋಶ ವ್ಯಕಪಡಿಸಿದ್ದರು. ಅದರ ಬೆನ್ನಲ್ಲೇ ಪ್ರಾಚಿ ಅವರು ಹೇಳಿಕೆಯನ್ನು ವಾಪಾಸು ಪಡೆದಿದ್ದಾರೆ ಎನ್ನಲಾಗಿದೆ. ಈ ತಿಂಗಳ ಆರಂಭದಲ್ಲಿ ಮಥುರಾದ ನಂದಗಾಂವ್ನ ನಂದ್ ಬಾಬಾ ಮಂದಿರದಲ್ಲಿ ಇಬ್ಬರು ಮುಸ್ಲಿಂ ಯುವಕರು ನಮಾಜ್ ಮಾಡಿದ್ದರು. ಆ ಸಂಬಂಧ ಫೈಜಲ್ ಖಾನ್, ಚಂದ್ ಮೊಹಮ್ಮದ್ ವಿರುದ್ಧ ಮಥುರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಿಗೆ ಸಹಕಾರ ನೀಡಿದ ಅಲೋಕ್ ರತನ್ ಮತ್ತು ನೀಲೇಶ್ ಗುಪ್ತಾ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಘಟನೆಯ ಬೆನ್ನಲ್ಲೇ ಹಿಂದೂ ಯುವಕರು, ಮಸೀದಿಯಲ್ಲಿ ಹನುಮಾನ್ ಚಾಲಿಸಾ ಪಠಿಸಿದ್ದು, ಮೂವರು ಯುವಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಇದನ್ನೂ ಓದಿ :  ಭಾರೀ ವಿವಾದಕ್ಕೀಡಾದ ಸಿದ್ದರಾಮಯ್ಯ ಲವ್ ಜಿಹಾದ್ ಬಗೆಗಿನ ಹೇಳಿಕೆ! ; ಕೆ.ಎಸ್.ಈಶ್ವರಪ್ಪ ರವರಿಂದ ಖಡಕ್ ತಿರುಗೇಟು!

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938