ಎನಿದು ವಾಟ್ಸಾಪ್ ಬ್ಯಾನ್? ವಾಟ್ಸಾಪ್‌ – ಕೇಂದ್ರ ನಿಲ್ಲದ ಶೀತಲ ಸಮರನವದೆಹಲಿ : ವಾಟ್ಸಾಪ್‌ ಮತ್ತು ಕೇಂದ್ರ ಸರ್ಕಾರದ ನಡುವೆ ಶೀತಲಸಮರಮುಂದುವರಿದಿದೆ. ಇಬ್ಬರೂ ಜನಸಾಮಾನ್ಯರ ವಯುಕ್ತಿಕ ಮಾಹಿತಿಯನ್ನು ರಕ್ಷಿಸುವುದಾಗಿ ಹೇಳುತ್ತ ಹೊಸ ನಿಯಮಗಳನ್ನು ಜಾರಿಗೆ ತಂದಿವೆ. ವಾಟ್ಸಾಪ್ ಕಂಪನಿ ಭಾರತದಲ್ಲಿ 53 ಕೋಟಿ ಬಳಕೆದಾರರನ್ನು ಹೊಂದಿದ್ದು ಹೊಸ ನಿಯಮದಂತೆ ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್ ಕಂಪನಿಗೆ ವಾಣಿಜ್ಯ ದೃಷ್ಟಿಯಿಂದ ನೀಡಲು ಮತ್ತೆ ಮತ್ತೆ ಬಳಕೆದಾರರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಇದನ್ನು ವಾಟ್ಸಾಪ್ ಕಂಪನಿ ಅಲ್ಲಗಳೆದಿದೆ. ಹೊಸ ನೀತಿಯ ಬಗ್ಗೆ ಬಳಕೆದಾರರಿಗೆ ಮನವರಿಕೆ ಮಾಡಿಕೊಡಲು ಸಂದೇಶಗಳನ್ನು ರವಾನಿಸಲಾಗುತ್ತಿದೆ. ಬಳಕೆದಾರರ ಮಾಹಿತಿ ಹೇಗೆ ವಾಣಿಜ್ಯ ದೃಷ್ಟಿಯಿಂದ ಉಪಯೋಗವಾಗುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ.

ಬಳಕೆದಾರರಿಗೆ ಇದರ ಉಪಯೋಗ ಹೇಗೆ ಎಂಬುದನ್ನು ವಿವರಿಸಲಾಗುವುದು ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರ ಹೊಸ ಕಾಯ್ದೆಯಂತೆ ವಾಟ್ಸಾಪ್‌ ಕಂಪನಿ ಭಾರತದಲ್ಲಿನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ನಿವಾರಣೆ ಮುಖ್ಯ ಅಧಿಕಾರಿಯನ್ನು ನೇಮಿಸಬೇಕು. ಒಂದು ವೇಳೆ ಆಕ್ಷೇಪಾರ್ಹ ಮಾಹಿತಿ ರವಾನೆಯಾದಲ್ಲಿ ಸಂದೇಶದ ಮೂಲವನ್ನು ಪತ್ತೆ ಮಾಡಿ ಸರ್ಕಾರಕ್ಕೆ ತಿಳಿಸಬೇಕು . ಅಶ್ಲೀಲ ಮತ್ತು ನಗ್ನ ಚಿತ್ರಗಳು ಇದ್ದಲ್ಲಿ ಅವುಗಳನ್ನು 36 ಗಂಟೆಗಳಲ್ಲಿ ಗುರುತಿಸಿ 48 ಗಂಟೆಗಳಲ್ಲಿ ತೆಗೆದುಹಾಕಬೇಕು. ಇಲ್ಲದೆ ಇದ್ದಲ್ಲಿ ಕಂಪನಿ ಅದರ ಹೊಣೆ ಹೊರಬೇಕು. ಒಂದು ವೇಳೆ ಕಂಪನಿ ನಿರಾಕರಿಸಿದರೆ ಕ್ರಿಮಿನಲ್‌ ಕ್ರಮ ಎದುರಿಸಬೇಕು ಎಂದು ಕೇಂದ್ರ ಎಚ್ಚರಿಸಿದೆ. ಬಳಕೆದಾರರ ವಯುಕ್ತಿಕ ಮಾಹಿತಿಯಲ್ಲಿ ಕಂಪನಿ ಹಸ್ತಕ್ಷೇಪ ಮಾಡಲು ಬರುವುದಿಲ್ಲ ಎಂಬುದು ವಾಟ್ಸಾಪ್ ಕಂಪನಿ ವಾದ. ಇದನ್ನು ಕೇಂದ್ರ ಒಪ್ಪಿಲ್ಲ.

ಇದನ್ನೂ ಓದಿ :  ಬಂಗಾಳದಲ್ಲಿ ಮಮತಾ ಘರ್‌ವಾಪಸಿ?

ಭಾರತದಲ್ಲಿ ವ್ಯವಹಾರ ನಡೆಸಬೇಕು ಎಂದರೆ ಈ ನೆಲದ ಕಾನೂನು ಪಾಲಿಸಲೇಬೇಕು ಎಂದು ಸ್ಪಷ್ಟಪಡಿಸಿದೆ. ಇದು ಈಗ ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿದೆ. ವಾಟ್ಸಾಪ್ ಹೊರತುಪಡಿಸಿ ಇತರ ಕಂಪನಿಗಳು ಕೇಂದ್ರದ ಹೊಸ ಕಾಯ್ದೆಗೆ ಅನುಗುಣವಾಗಿ ಕೆಲಸ ಮಾಡುವುದಾಗಿ ಹೇಳಿದೆ. ಸಾಮಾಜಿಕ ಜಾಲತಾಣಗಳು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು ಎಂಬುದು ಕೇಂದ್ರದ ನಿಲುವು.