ಯೋಗಿ ಆದಿತ್ಯನಾಥ್ ರನ್ನು ಭೇಟಿಯಾದ ನಟ ಅಕ್ಷಯ್ ಕುಮಾರ್! ; ಸಂಚಲನ ಸೃಷ್ಟಿಸಿದೆ ಈ ಹೊಸ ನಡೆ.ಲಕ್ನೋ : ಬಾಲಿವುಡ್ ನಟ ಅಕ್ಷಯ್ ಕುಮಾರ್ ನಿನ್ನೆ ಮಂಗಳವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ. ಅವರ ಈ ನಡೆ ಇದೀಗ ಕುತೂಹಲ ಮೂಡಿಸಿದೆ. ಸದ್ಯ ಇಬ್ಬರು ಒಟ್ಟಿಗೆ ಕುಳಿತು ಚರ್ಚೆ ಮಾಡುತ್ತಿರುವ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ. ಸ್ವತಃ ಯೋಗಿ ಆದಿತ್ಯನಾಥ್ ಕೂಡ ಅಕ್ಷಯ್ ಜೊತೆಗೆ ಇರುವ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಧಿಕೃತ ಕಾರ್ಯದ ನಿಮಿತ್ತ ಮುಂಬೈಗೆ ಬಂದಿರುವ ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್, ಮಂಗಳವಾರ ಮುಂಬೈನ ಖಾಸಗಿ ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದಾರೆ. ಅಲ್ಲಿಗೆ ನಟ ಅಕ್ಷಯ್ ಕುಮಾರ್ ಆಗಮಿಸಿ, ಅವರ ಜೊತೆ ಒಂದಷ್ಟು ಹೊತ್ತು ಸಮಯ ಕಳೆದಿದ್ದಾರೆ. ಈ ವೇಳೆ ಚಿತ್ರರಂಗದ ಅನೇಕ ವಿಚಾರಗಳ ಕುರಿತು ಯೋಗಿ ಆದಿತ್ಯನಾಥ್‌ ಜೊತೆ ಅಕ್ಷಯ್ ಚರ್ಚೆ ನಡೆಸಿದ್ದಾರೆ. ಬುಧವಾರ ಕೂಡ ಮುಂಬೈನಲ್ಲೇ ಇರುವ ಸಿಎಂ, ಮತ್ತೊಂದಿಷ್ಟು ಬಾಲಿವುಡ್‌ ಸೆಲೆಬ್ರಿಟಿಗಳನ್ನು ಭೇಟಿಯಾಗುವ ಸಾಧ್ಯತೆಗಳಿವೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/