ಗೋಕಳ್ಳತನ : ತನ್ನ ಅಮ್ಮನನ್ನು ಕದ್ದು ಸಾಗಿಸಿದ ವಾಹನದ ಹಿಂದೆ ಓಡಿದ ಕರು, ವೀಡಿಯೋ ನೋಡಿಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಸುಮಾರು ಒಂದು ತಿಂಗಳಿನಿಂದ ನಿರಂತರವಾಗಿ ಗೋಕಳ್ಳತನ ನಡೆಯುತ್ತಲೇ ಇದ್ದರು ಇದರ ಬಗ್ಗೆ ಇನ್ನೂ ಪೊಲೀಸ್ ಇಲಾಖೆ ಗಂಭೀರವಾಗಿ ಯಾವ ಕ್ರಮವೂ ಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಒಂದು ತಿಂಗಳಿನಿಂದ ರಾತ್ರಿ 12, 1 ಗಂಟೆ ಸುಮಾರಿಗೆ ಸ್ಕಾರ್ಪಿಯೋ, ರಿಟ್ಸ್ ಮುಂತಾದ ಐಷಾರಾಮಿ ಕಾರಿನಲ್ಲೇ ಬೀದಿಬದಿ ಮಲಗಿರುವ ಗೋವುಗಳನ್ನು ಕಳ್ಳತನ ಮಾಡಲಾಗುತ್ತಿದೆ, ಈ ಕುರಿತು ಮಾಧ್ಯಮಗಳು ವರದಿ ಮಾಡಿದ್ದಷ್ಟೇ ಅಲ್ಲದೆ ಅನೇಕ ಕಡೆಗಳಲ್ಲಿ ಹಿಂದೂಪರ ಸಂಘಟನೆಗಳು ಇಲಾಖೆಗೆ ಮನವಿ ಮಾಡಿದೆ ಆದರೆ ಇಲಾಖೆ ಮಾತ್ರ ನಿರ್ಲಕ್ಷ್ಯ ತೋರುತ್ತಿರುವುದು ಸ್ಪಷ್ಟವಾಗುತ್ತದೆ.

ಇನ್ನು ಇದಕ್ಕೆ ಸಂಬಂಧಿಸಿದಂತೆ ಗೋಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ ಸ್ಕಾರ್ಪಿಯೋ ಕಾರ್ ನಲ್ಲಿ ಬಂದು ತಾಯಿ ಗೋವನ್ನು ಕಾರಿಗೆ ತುಂಬಿ ಸಾಗಿಸುವಾಗ ತನ್ನ ಅಮ್ಮನನ್ನು ಕದ್ದೊಯ್ದ ವಾಹನವನ್ನು ಕರು ಹಿಂಬಾಲಿಸಿದ ಮನಕುಲುಕುವ ದೃಷ್ಯ ಸೆರೆಯಾಗಿದೆ. ವೀಡಿಯೋ ನೋಡಿ.