ವಿಡಿಯೋ : ಕಾರ್ ಟೈರ್ ಚೇಂಜ್ ಮಾಡಿದ ಡಿಸಿ ರೋಹಿಣಿ ಸಿಂಧೂರಿ! ಸಖತ್ ವೈರಲ್ ವಿಡಿಯೋ!ಮೈಸೂರು: ತಮ್ಮ ಆಡಳಿತ ವೈಖರಿ, ಸರಳ ವ್ಯಕ್ತಿತ್ವದ ಮೂಲಕ ಹಲವರ ಮೆಚ್ಚುಗೆ ಪಡೆದಿರುವ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಇದೀಗ ಮತ್ತೊಮ್ಮೆ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಇದೀಗ ತಮ್ಮ ಕಾರಿನ ಟೈರ್ ತಾವೇ ಬದಲಾಯಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಡಿಸಿ ರೋಹಿಣಿ ಸಿಂಧೂರಿ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಹೌದು, ಕುಟುಂಬದ ಜೊತೆ ಹೊರ ಹೋಗಿದ್ದ‌ ಸಂಧರ್ಭದಲ್ಲಿ ತಾವೇ ಕಾರಿನ ಟೈರ್ ಕಳಚಿ, ಬದಲಾಯಿಸಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ‌ ಅವರು ತಮ್ಮ ಕಾರಿನ ಟೈರ್ ಕಳಚುವ ವೇಳೆ ವೀಡಿಯೋ ಮಾಡಿರುವ ಸಾರ್ವಜನಿಕರು, ತಾವು ರೋಹಿಣಿ ಸಿಂಧೂರಿ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಈ ವೇಳೆ ಯಾವುದೇ ಪ್ರತಿಕ್ರಿಯೆ ನೀಡದ ಅವರು, ನಕ್ಕು ಸುಮ್ಮನಾಗಿದ್ದಾರೆ. ಆದರೆ, ಡಿಸಿ ರೋಹಿಣಿ‌ ಸಿಂಧೂರಿ, ಅವರು ಕಾರಿನ ಟೈಯರ್ ಬದಲಿಸುತ್ತಿರುವ ವಿಡಿಯೋ ಮಾತ್ರ ಎಲ್ಲೆಡೆ ವೈರಲ್ ಆಗಿದೆ. ಡಿಸಿ ರೋಹಿಣಿ ಸಿಂಧೂರಿ ದಕ್ಷ ಆಡಳಿತಕ್ಕೆ ಹೆಸರಾಗಿದ್ದಾರೆ . ಅನೇಕ ಕಡೆ ಕೆಲಸ ನಿರ್ವಹಿಸಿದ ಅನುಭವವಿದ್ದು, ಹಾಸನದಲ್ಲಿ ಮರಳು ಮಾಫಿಯಾಗೆ ಕಡಿವಾಣ ಹಾಕುವಲ್ಲಿ ರೋಹಿಣಿ ಯಶಸ್ವಿಯಾಗಿದ್ದರು. ಈ ವಿಚಾರದಲ್ಲಿಯೇ ಎಲ್ಲೆಡೆ ಫೇಮಸ್ ಆಗಿದ್ದರು.