ವಿಡಿಯೋ ; ಬೈಕ್ ಅಡ್ಡ ಹಾಕಿ ಪೊಲೀಸ್ ಮಾಡಿದ ಕೆಲಸಕ್ಕೆ ಭಾರೀ ಮೆಚ್ಚುಗೆ!ಪೊಲೀಸರು ರಸ್ತೆ ಬದಿಯಲ್ಲಿ ಕಂಡರೆ ಸಾಕು ಜನ ಹೆದರುವುದೇ ಹೆಚ್ಚು. ಎಲ್ಲಿ ಕರೆದು ದಂಡ ಕಟ್ಟಲು ಹೇಳುತ್ತಾರೋ ಏನೋ ಎಂದು! ಇತ್ತೀಚೆಗೆ ಮಾಸ್ಕ್ ಹಾಕದ ವ್ಯಕ್ತಿಯನ್ನು ಬಂಧನಗೊಳಿಸಲು ಮೇಲಧಿಕಾರಿಗಳೂ ಸಹ ಬಂದಿದ್ದರು ಅದೂ ಅಲ್ಲದೇ ಆತನ ಕೊರಳ ಪಟ್ಟಿ ಹಿಡಿದು ಎಳೆದೊಯ್ದಿದ್ದರು. ಮತ್ತು ಬೈಕ್ ಅಡ್ಡಗಟ್ಟಿದ್ದಕ್ಕಾಗಿ ಸವಾರ ಬಿದ್ದು ಸಾವನ್ನಪ್ಪಿದ್ದರು. ಇದರಿಂದ ರೊಚ್ಚಿಗೆದ್ದು ಸಾರ್ವಜನಿಕರು ಟ್ರಾಫಿಕ್ ಪೊಲೀಸರಿಗೆ ಹೊಡೆದಿದ್ದರು.

ತಮಿಳುನಾಡಿನಲ್ಲಿ ಅಂತಹದೇ ವಿಡಿಯೋ ವೈರಲಾಗಿದೆ. ಆದರೆ ಇಲ್ಲಿ ಪೊಲೀಸ್ ಪೇದೆ ಬೈಕ್ ಅಡ್ಡಗಟ್ಟಿದ್ದು ದಂಡ ವಸೂಲಿಗಾಗಿ ಅಲ್ಲ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ಬೈಕ್ ಸವಾರನೊಬ್ಬನನ್ನು ಪೊಲೀಸ್ ಪೇದೆಯೊಬ್ಬರು ಅಡ್ಡಗಟ್ಟುತ್ತಾರೆ. ಸವಾರನಿಗೆ ಒಂದು ಔಷಧಿ ಬಾಟಲಿ ನೀಡಿ ಮುಂದೆ ಒಂದು ಬಸ್ ಹೋಗಿದೆ ಅದರಲ್ಲಿದ್ದ ಪ್ರಯಾಣಿಕರು ಯಾರೋ ಒಬ್ಬರು ಇದನ್ನು ದಾರಿಯಲ್ಲಿ ಬೀಳಿಸಿಕೊಂಡು ಹೋಗಿದ್ದಾರೆ.ಇದನ್ನು ಅವರಿಗೆ ತಲುಪಿಸಿ ಎಂದು ಹೇಳಿದ್ದಾರೆ. ಅದರಂತೆ ಬೈಕ್ ಸವಾರ ಔಷಧಿಯನ್ನು ತಲುಪಿಸುತ್ತಾನೆ. ಪೊಲೀಸರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋ ನೋಡಿ