ವಿಡಿಯೋ ; ಹೀರೋ ಚಿತ್ರೀಕರಣದ ವೇಳೆ ಅಗ್ನಿ ಅವಘಡ! ಹೊತ್ತಿತು ರಿಷಬ್ ಶೆಟ್ಟಿ ಮೈಗೆ ಬೆಂಕಿ!ಹೀರೋ’ ಚಿತ್ರದಲ್ಲಿ ಬಾಂಬ್‌ ಸ್ಫೋಟದ ದೃಶ್ಯವನ್ನು ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲಿ ನಟ ರಿಷಬ್‌ ಶೆಟ್ಟಿ ಅವರ ಬೆನ್ನಿಗೆ ಬೆಂಕಿ ತಗುಲಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆಯು ಕಳೆದ ವರ್ಷ ಜುಲೈನಲ್ಲಿ ಹಾಸನ ಎಸ್ಟೇಟ್ ಒಂದರಲ್ಲಿ ಚಿತ್ರೀಕರಣ ನಡೆಯುತ್ತಿರುವಾಗ ಸಂಭವಿಸಿದೆ.

ಮಾ.5ರಂದು ಚಿತ್ರವು ಬಿಡುಗಡೆಯಾಗುತ್ತಿದ್ದು, ಇದೇ ಸಂದರ್ಭದಲ್ಲಿ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯದ ತುಣುಕು ಚಿತ್ರದ ಟ್ರೇಲರ್‌ನಲ್ಲೂ ಇದೆ. ಘಟನೆ ಕುರಿತು ಮಾತನಾಡಿರುವ ರಿಷಬ್‌, ‌‘ಕಳೆದ ವರ್ಷ ಜುಲೈ ತಿಂಗಳ ಕೊನೆಯಲ್ಲಿ ಈ ಘಟನೆ ನಡೆದಿದೆ. ದೊಡ್ಡ ಅನಾಹುತ ಆಗಿಲ್ಲ. ಸ್ಫೋಟದಿಂದಾಗಿ ಬೆನ್ನಿಗೆ ಬೆಂಕಿ ಹತ್ತಿತ್ತು. ಕೂದಲೂ ಸುಟ್ಟು ಹೋಗಿತ್ತು. ಚಿತ್ರೀಕರಣದ ಸಂದರ್ಭದಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಂಡಿದ್ದ ಕಾರಣ ಹೆಚ್ಚಿನ ಅನಾಹುತವೇನೂ ಆಗಿಲ್ಲ. ಬೆನ್ನ ಹಿಂದೆ ಸ್ಫೋಟವಾಗುವ ಕಾರಣ, ಅನಾಹುತವೇನಾದ್ರೂ ಆದರೆ ನಾಯಕಿ ಗಾನವಿಗೆ ತೊಂದರೆಯಾಗಬಾರದು ಎಂದು ಅವರನ್ನು ನನ್ನ ಮುಂದೆ ನಿಲ್ಲಿಸಿದ್ದೆ. ಜೊತೆಗೆ ಚಿತ್ರೀಕರಣದ ಜಾಗದಲ್ಲಿ ನೀರು ಕೆಸರು ಇದ್ದ ಕಾರಣ ಅದನ್ನು ಬೇಗ ನಂದಿಸಿಕೊಳ್ಳಲು ಸಾಧ್ಯವಾಯಿತು’ ಎಂದಿದ್ದಾರೆ.

ವಿಡಿಯೋ ನೋಡಿ