ವಿಡಿಯೋ : ಶ್ರೀರಾಮ ನಮ್ಮ ದೊರೆ ಎಂದ ಜಗ್ಗೇಶ್! ನಿಧಿ ಸಮರ್ಪಣಾ ಅಭಿಯಾನದ ಬಗ್ಗೆ ಮಾತು!ರಾಮಮಂದಿರ ನಿರ್ಮಾಣಕ್ಕಾಗಿ ದೇಶದಲ್ಲಿ ನಿಧಿ ಸಂಗ್ರಹ ಕಾರ್ಯ ಶುರುವಾಗಿದೆ. ಈ ಕಾರ್ಯದಲ್ಲಿ ಶ್ರೀರಾಮನಿಗಾಗಿ ಎಷ್ಟಾಗುತ್ತೋ ಅಷ್ಟನ್ನು ನೀಡಿ ನಮ್ಮ ಅಳಿಲು ಸೇವೆ ಅರ್ಪಿಸೋಣ. ಖ್ಯಾತ ನಟಿ ಪ್ರಣಿತಾ ಸುಭಾಷ್ ರಾಮಮಂದಿರ ನಿರ್ಮಾಣಕ್ಕಾಗಿ ಒಂದು ಲಕ್ಷ ರೂ ದೇಣಿಗೆ ನೀಡಿದರು. ಇದಾದ ಬಳಿಕ ಜನತೆಗೆ ಕನ್ನಡದ ನವರಸ ನಾಯಕ ಜಗ್ಗೇಶ್ ಅವರು ಸಹ ಮಂದಿರ ನಿರ್ಮಾಣಕ್ಕೆ ನಿಮ್ಮ ಕೈಲಾದ ಸೇವೆ ಮಾಡಿ ಎಂದಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ…

ಮಾತಾಪಿತ, ಸಹೋದರ ಸಹೋದರಿಯರೇ… ನಮ್ಮ ಸನಾತನ ಧರ್ಮದ ಹೆಮ್ಮೆಯ ಸಂಕೇತ ಶ್ರೀರಾಮ! 500 ವರ್ಷದ ಹೋರಾಟ ಫಲವಾಗಿ ದೇವಾಲಯ ಕಟ್ಟುವಂತಾಯಿತು. ತಾವು ರಾಮನ ಆಲಯಕ್ಕೆ ದೇಣಿಗೆ ನೀಡಿ ಆ ಕಟ್ಟಡದ ನಿರ್ಮಾಣ ಸೇವೆಗೆ ಕೈಜೋಡಿಸಿ ಅಳಿಲು ಸೇವೆ ಮಾಡಿ ಕೃತಾರ್ಥರಾಗಿ. ನಮ್ಮ ತಲೆಮಾರಿಗೆ ಸಿಕ್ಕ ಶ್ರೇಷ್ಠ ಅವಕಾಶ ಎಂದು ವಿನಮ್ರನಾಗಿ ತಿಳಿಸಲು ಬಯಸುವೆ. ಇದು ಶ್ರೀರಾಮನಿಗೆ ಶ್ರೇಷ್ಠಧಾನ’

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ನಮ್ಮ ಮನಸ್ಸು ಹೆಮ್ಮೆ ಪಡಬೇಕು
‘ಎಲ್ಲ ಕನ್ನಡ ಮನಸ್ಸುಗಳಿಗೆ ನಮಸ್ಕಾರ. ಗುರು ರಾಯರ ನೆಚ್ಚಿನ ದೇವರು ರಾಮ. ರಾಮ-ಹನುಮಂತರೇ ನಮ್ಮ ಭಾರತದ ಪ್ರತೀಕ. ಎಲ್ಲ ನನ್ನ ಬಾಂಧವರಲ್ಲಿ ನನ್ನ ಮನವಿ ಇಷ್ಟೇ.. ತಮ್ಮ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ಹಣವನ್ನು ರಾಮ ಮಂದಿರ ಕಟ್ಟುವುದಕ್ಕೆ ದೇಣಿಗೆಯಾಗಿ ನೀಡಿ. ದೇವಸ್ಥಾನ ನಿರ್ಮಾಣ ಆದಮೇಲೆ ಇಡೀ ವಿಶ್ವವೇ ಬಂದು ನೋಡುತ್ತದೆ. ನಾವು-ನೀವು ಕೂಡ ಹೋಗುತ್ತೇವೆ. ಅಲ್ಲಿ ಹೋಗಿ ನಿಂತಾಗ ನನ್ನ ಒಂದು ಅಳಿಲು ಕಾಣಿಕೆ ಕೂಡ ಈ ಆಲಯದಲ್ಲಿ ಸೇರಿದೆ ಅಂತ ನಮ್ಮ ಮನಸ್ಸು ಹೆಮ್ಮೆ ಪಡಬೇಕು

‘ಆ ಕರ್ತವ್ಯವನ್ನು ಮಾಡೋಣ. ಈ ಪುಣ್ಯ ಭವಿಷ್ಯ ಇನ್ನೊಂದು ಜನ್ಮದಲ್ಲೂ ಯಾರಿಗೂ ಬರುವುದಿಲ್ಲ. 2024ಕ್ಕೆ ಕಟ್ಟಡ ಕಾರ್ಯ ಮುಕ್ತಾಯ ಆಗುತ್ತದೆ. ನಮ್ಮ ತಲೆಮಾರಿನಲ್ಲಿ, ನಮ್ಮ ಕಾಲದಲ್ಲಿ ಇದು ಆಗುತ್ತಿರುವುದೇ ದೊಡ್ಡ ಪುಣ್ಯ ಅಂತ ನಾವು ಭಾವಿಸೋಣ. ದಯಮಾಡಿ ತಾವು ದೇಣಿಗೆ ನೀಡಲು ತಯಾರಾಗಿ. ದೇಣಿಗೆಯನ್ನು ನೇರವಾಗಿ ತಲುಪಿಸಿ. ಎಲ್ಲರಿಗೂ ಶುಭವಾಗಲಿ. ನಮಸ್ಕಾರ.. ಜೈ ಶ್ರೀರಾಮ್‌’ ಎಂದು ಜಗ್ಗೇಶ್‌ ಹೇಳಿದ್ದಾರೆ.

ವಿಡಿಯೋ ನೋಡಿ :