ವಿಡಿಯೋ ; ಆರು ಬಾಲ್ ಆರು ಸಿಕ್ಸರ್! ಪೊಲಾರ್ಡ್ ಅಬ್ಬರದ ವಿಡಿಯೋ!ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಮತ್ತೊಂದು ಮಹತ್ವದ ದಾಖಲೆ ನಿರ್ಮಾಣವಾಗಿದೆ. ಭಾರತದ ಖ್ಯಾತ ಆಟಗಾರ ಯುವರಾಜ್ ಸಿಂಗ್ ರವರು ಸೃಷ್ಟಿಸಿದ್ದ ಅಪರೂಪದ
ದಾಖಲೆಯನ್ನು ಕಿರಣ್ ಅಪರೂಪದ ದಾಖಲೆಯನ್ನು ಕಿರಣ್ ಪೋಲಾರ್ಡ್ ಸರಿಗಟ್ಟಿದ್ದಾರೆ. ವೆಸ್ಟ್‌ಇಂಡೀಸ್‌ ನ ನಾಯಕ ಹಾಗೂ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್,
ಓವರ್‌ ವೊಂದರ ಎಲ್ಲಾ ಆರು ಎಸೆತಗಳನ್ನು ಸಿಕ್ಸರ್ ಗೆ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಟ್ವೆಂಟಿ-20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಸಾಧನೆಯನ್ನು ಸರಿಗಟ್ಟಿದ್ದಾರೆ.

ಅಂತರ ರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಈ ದಾಖಲೆ ಬರೆದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಕೀರನ್ ಪೊಲಾರ್ಡ್ ಪಾತ್ರವಾದರು. ಹಾಗೆಯೇ ಟಿ20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವೆಸ್ಟ್‌ ಇಂಡೀಸ್‌ನ ಮೊದಲ ಬ್ಯಾಟ್ಸ್‌ಮನ್ ಎಂದ ಹಿರಿಮೆಗೆ ಭಾಜನವಾದರು. ಶ್ರೀಲಂಕಾದ ಸ್ಪಿನ್ನರ್ ಅಕಿಲ ಧನಂಜಯ ಎಸೆದ ಓವರ್‌ನ ಎಲ್ಲ ಆರು ಎಸೆತಗಳನ್ನು ಪೊಲಾರ್ಡ್ ಸಿಕ್ಸರ್‌ ಗಟ್ಟಿದರು. ಇಲ್ಲಿ ಗಮನಾರ್ಹ ಅಂಶವೆಂದರೆ ಇದೇ ಪಂದ್ಯದಲ್ಲಿ ಧನಂಜಯ ಹ್ಯಾಟ್ರಿಕ್ ಸಾಧನೆಯನ್ನು ಮಾಡಿದ್ದರು.

ಅಕಿಲ ಧನಂಜಯ ಎಸೆದ ಇನ್ನಿಂಗ್ಸ್‌ನ ಆರನೇ ಓವರ್‌ ನಲ್ಲಿ ಎಲ್ಲಾ ಆರು ಎಸೆತಗಳನ್ನು ಪೊಲಾರ್ಡ್ ಸಿಕ್ಸರ್‌ ಗಟ್ಟಿದ್ದಾರೆ. ಅಲ್ಲದೆ 11 ಎಸೆತಗಳಲ್ಲಿ 38 ರನ್ ಗಳಿಸಿ ವಿಂಡೀಸ್ ಸುಲಭವಾಗಿ ಗುರಿ ಬೆನ್ನಟ್ಟುವಂತೆ ಮಾಡಿದ್ದಾರೆ. ಈ ಹಿಂದೆ ಟ್ವೆಂಟಿ-20 ವಿಶ್ವಕಪ್ ನಲ್ಲಿ ಭಾರತದ ಯುವರಾಜ್ ಸಿಂಗ್ ಈ ದಾಖಲೆಯನ್ನು ನಿರ್ಮಾಣ ಮಾಡಿದ್ದರು. ಇಂಗ್ಲೆಂಡ್ ತಂಡದ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ರವರ ಒಂದೇ ಓವರಿನ ಎಲ್ಲಾ ಎಸೆತಗಳನ್ನು ಸಿಕ್ಸರ್ ಬಾರಿಸಿದ್ದರು. 2007ನೇ ಇಸವಿಯಲ್ಲೇ ದಕ್ಷಿಣ ಆಫ್ರಿಕಾದ ಮಾಜಿ ಹೊಡೆಬಡಿಯ ದಾಂಡಿಗ ಹರ್ಷಲ್ ಗಿಬ್ಸ್ ಏಕದಿನ ಕ್ರಿಕೆಟ್‌ನಲ್ಲಿ ಹಾಲೆಂಡ್ ವಿರುದ್ದ ಇದೇ ಸಾಧನೆ ಮಾಡಿದ್ದರು.