ಜೊಮ್ಯಾಟೊ ಪ್ರಕರಣ : ಮುರಿದ ಮೂಗಿನ ಮಹಿಳೆ ಕೊಟ್ಟ ಮೊದಲ ಪ್ರತಿಕ್ರಿಯೆ ಇದು!ಜೊಮ್ಯಾಟೊ ಡೆಲಿವರಿ ಬಾಯ್ ಘಟನೆಯು ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು. ಇದಕ್ಕೆ ಯುವತಿ ಹಿತೇಶಾ ಚಂದ್ರಾನಿ ಪ್ರತಿಕ್ರಿಯೆ ನೀಡಿದ್ದಾರೆ.

ಡೆಲಿವರಿ ಬಾಯ್ ಅವರು ಹೇಳಿರುವಂತೆ ನಡೆದಿಲ್ಲ. ಅವರು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ. ಜೊಮ್ಯಾಟೋ ವಿಚಾರದಲ್ಲಿ ಅವರಿಂದ ಸಮರ್ಪಕ ಸೇವೆಯನ್ನು ಬಯಸುವುದು ಗ್ರಾಹಕರಾಗಿ ನನ್ನ ಹಕ್ಕು. ಹಣ ಕೊಡುತ್ತೀನಿ ಎಂದ ಮೇಲೆ ಅವರು ಅದನ್ನು ಸರಿಯಾಗಿ ನಿರ್ವಹಿಸಲೇಬೇಕು. ನಾನು ಆರ್ಡರ್​ ಮಾಡಿದ್ದ ಊಟ ನಿಗದಿತ ಸಮಯದಲ್ಲಿ ಕೈ ಸೇರದಿದ್ದಾಗ ಅದನ್ನು ಕ್ಯಾನ್ಸಲ್​ ಮಾಡಿ ಅಥವಾ ಉಚಿತವಾಗಿ ತಲುಪಿಸಿ ಎಂದು ಗ್ರಾಹಕ ಸೇವಾ ಸಿಬ್ಬಂದಿಗೆ ತಿಳಿಸಿದ್ದೆ.

ಹೀಗಾಗಿ​ ಆರ್ಡರ್ ತಲುಪಿಸಲು ಅವರು ಬಂದಾಗ ಜೊಮ್ಯಾಟೋ ಆಪೀಸ್ ನಿಂದ ನನ್ನ ಕೋರಿಕೆ ಬಗ್ಗೆ ಏನಾದರೂ ಮಾಹಿತಿ ಬಂದಿದೆಯಾ ಎಂದು ಸಹಜವಾಗಿ ಕೇಳಿದೆ. ಆ ಸಂದರ್ಭದಲ್ಲಿ ಆತ ನನ್ನ ಬಳಿ ತುಂಬಾ ಒರಟಾಗಿ ನಡೆದುಕೊಂಡರು ಎಂದಿದ್ದಾರೆ. ನಾನು ಪದೇ ಪದೇ ಮನವಿ ಮಾಡಿಕೊಂಡೆ. ಆದರೆ, ಆತ ನನ್ನ ಮುಖಕ್ಕೆ ಬಲವಾಗಿ ಗುದ್ದಿದಾಗ ಅಲ್ಲಿ ಏನಾಗುತ್ತಿದೆ ಎನ್ನುವುದೇ ತಿಳಿಯಲಿಲ್ಲ. ಇದೆಲ್ಲಾ ಒಂದೆರೆಡು ನಿಮಿಷದೊಳಗೆ ಆಗಿ ಹೋಗಿವೆ. ಗುದ್ದಿದ ನಂತರ ಆತ ಲಿಫ್ಟ್​ ಕಡೆಗೆ ಓಡಿದ್ದು ಗಮನಿಸಿ ನಾನು ತಕ್ಷಣ ಹಿಂಬಾಲಿಸಿದೆ.

ಆ ಕ್ಷಣದಲ್ಲಿ ನನಗೆ ಮೂಗಿನಿಂದ ರ ಕ್ತ ಇಳಿಯುತ್ತಿದೆ ಎನ್ನುವುದೂ ಗೊತ್ತಾಗಿರಲಿಲ್ಲ. ನಾನು ಹೋಗಿ ಅವರನ್ನು ತಡೆದೆ. ಲಿಫ್ಟ್​ ಇನ್ನೂ ಬಾಗಿಲು ಹಾಕಿ ಕೊಂಡಿರಲಿಲ್ಲವಾದ್ದರಿಂದ ಆತ ಮತ್ತೊಮ್ಮೆ ನನಗೆ ಗುದ್ದಿ ನನ್ನನ್ನು ತಳ್ಳಿ ಮೆಟ್ಟಿಲಿಳಿದು ಓಡಿ ಹೋಗಿದ್ದಾರೆ. ನಾನು ಹಾಕಿಕೊಂಡಿರುವ ಉಂಗುರ ಅತಿ ತೆಳುವಾಗಿದ್ದು, ಅದರಿಂದ ಇಷ್ಟು ದೊಡ್ಡ ಗಾಯ ವಾಗುವುದೂ ಸಾಧ್ಯವಿಲ್ಲ. ಅವರು ಕರ್ತವ್ಯ ನಿರ್ವಹಿಸದೆ ಉದ್ಧಟತನ ತೋರಿದ್ದಾರೆ ಎಂದು ಹಿತೇಶಾ ಹೇಳಿದ್ದಾರೆ.

ಜೊಮ್ಯಾಟೊ ಡೆಲಿವರಿ ಬಾಯ್ ರವರು ನಡೆದಿದ್ದ ಘಟನೆಯ ಕುರಿತು ಸವಿಸ್ತಾರವಾಗಿ ವಿವರಿಸಿದ್ದಾರೆ. ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ಸ್ವಲ್ಪ ತಡವಾಗಿ ನಾನು ಹೋಗಿದ್ದೆ. ಈ ಕುರಿತು ಅವರಲ್ಲಿ ಕ್ಷಮೆಯನ್ನೂ ಕೇಳಿದ್ದೆ. ಆದರೆ ಅವರು ಹಿಂದಿಯಲ್ಲಿ ಏನೇನೋ ಬಯ್ಯಲು ಶುರು ಮಾಡಿದರು. ಆ ನಂತರ ನನ್ನ ಮೇಲೆ ಚಪ್ಪಲಿ ಎ ಸೆದರು. ನಾನು ನನ್ನನ್ನು ರಕ್ಷಿಸಿಕೊಳ್ಳುವಾಗ ಅವರ ಕೈಯಲ್ಲಿದ್ದ ಉಂಗುರವೇ ಅವರ ಮೂಗಿಗೇ ತಾಗಿತ್ತು ಎಂದು ಕಾಮ್ರಾಜ್ ಹೇಳಿದ್ದರು.

ವಿಡಿಯೋ ನೋಡಿ