VIDEO: ಕಡಲ ಅಲೆಗಳಲ್ಲಿ ನೀಲಿ ಬಣ್ಣದಾಟ! ; ಅಪರೂಪದ ಪ್ರಕೃತಿ ವೈಶಿಷ್ಟ್ಯ ಕಣ್ತುಂಬಿಕೊಳ್ಳಲು ಮುಗಿಬೀಳುತ್ತಿರುವ ಜನ.



ಮಂಗಳೂರು: ಸೂಕ್ಷ್ಮಜೀವಿಯೊಂದರ ಸಂಖ್ಯೆ ವಿಪರೀತ ಹೆಚ್ಚಾಗಿರುವ ಪರಿಣಾಮ ರಾತ್ರಿ ವೇಳೆ ನೀಲಿಬಣ್ಣದ ಬೆಳಕಿನೊಂದಿಗೆ ಹೊಳೆಯುವ ಕರಾವಳಿಯ ಸಮುದ್ರ ತೀರಗಳನ್ನು ವೀಕ್ಷಿಸಲು ಜನ ತಂಡೋಪತಂಡವಾಗಿ ಬೀಚ್‌ಗಳಿಗೆ ಆಗಮಿಸುತ್ತಿದ್ದು, ಇದರಿಂದ ಮಧ್ಯರಾತ್ರಿವರೆಗೂ ಕಡಲ ಕಿನಾರೆ ಗಳಲ್ಲಿ ಜನಜಾತ್ರೆಯೇ ಕಂಡುಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ನೀಲಿಬಣ್ಣದಿಂದ ಹೊಳೆಯುವ ಸಮುದ್ರದ ಅಲೆಗಳ ವಿಡಿಯೋಗಳನ್ನು ವೀಕ್ಷಿಸಿದ ಜನ, ಅದನ್ನು ಕಣ್ಣಾರೆ ಕಾಣಲು ಸಮುದ್ರ ತೀರಕ್ಕೆ ದೌಡಾಯಿಸುತ್ತಿದ್ದಾರೆ. ಅದಕ್ಕಾಗಿ ಸಂಜೆ ಯಿಂದ ಮಧ್ಯರಾತ್ರಿ 12 ಗಂಟೆ ನಂತರವೂ ಜನ ಬೀಚ್‌ಗಳಲ್ಲಿ ಸೇರುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಮಂಗಳೂರಿನ  ಬೀಚ್ ಬಳಿ ಜನ ಜಂಗುಳಿಯಿಂದ ತುಂಬಿ ಹೋಗಿದೆ. ಎಲ್ಲೆಂದರಲ್ಲಿ ಜನ ಕಾರು, ದ್ವಿಚಕ್ರ ವಾಹನಗಳಲ್ಲಿ ಆಗಮಿಸಿ ಸಮುದ್ರವನ್ನು ವೀಕ್ಷಿಸುವ ದೃಶ್ಯ ಕಂಡು ಬರುತ್ತಿದೆ. ಕೆಲವರು ಸಮುದ್ರ ತೀರದಲ್ಲಿ ನಿಂತು ನೀಲಿಬಣ್ಣದಿಂದ ಹೊಳೆಯುವ ಅಲೆಗಳನ್ನು ತಮ್ಮ ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಸೆರೆಹಿಡಿಯುತ್ತಿದ್ದಾರೆ. (ವೀಡಿಯೋ ನೋಡಲು ಕೆಳಗೆ ಸ್ರ್ಕೋಲ್ ಮಾಡಿ)

ADVERTISEMENT

ಕೆಲವೊಂದು ಸಿಮೀತ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತಿರುವ ಈ ಅಚ್ಚರಿಯ ಬೆಳವಣಿಗೆಯನ್ನು ಕೆಲವರು ನೋಡಲು ಸಾಧ್ಯವಾಗದೆ ನಿರಾಸೆಯಿಂದ ಮರಳುತ್ತಿದ್ದಾರೆ. ವಾಹನ ದಟ್ಟಣೆ ಹೆಚ್ಚಾದ ಪರಿಣಾಮ ಬೀಚ್ ರಸ್ತೆಯಲ್ಲಿ ಪ್ರತಿದಿನ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಅದೇ ರೀತಿ ಜಿಲ್ಲೆಯ ಗಂಗೊಳ್ಳಿ, ಬೈಂದೂರು, ಪಡುಬಿದ್ರೆ ಸೇರಿದಂತೆ ಹಲವು ಬೀಚ್‌ಗಳಲ್ಲೂ ನೂರಾರು ಸಂಖ್ಯೆಯ ಜನ ನೀಲಿ ಸಮುದ್ರ ವೀಕ್ಷಣೆಗಾಗಿ ಸೇರುತ್ತಿರುವುದು ವರದಿಯಾಗಿದೆ. ಈ ಪ್ರಕೃತಿ ವಿಸ್ಮಯ ವೀಕ್ಷಿಸಲು ಜಿಲ್ಲೆಯ ಜನರು ಮಾತ್ರವಲ್ಲದೆ ಹೊರ ಜಿಲ್ಲೆಯವರು ಕೂಡ ಇದೀಗ ಉಡುಪಿಯತ್ತ ಬರುತ್ತಿದ್ದಾರೆ.(ವೀಡಿಯೋ ನೋಡಲು ಕೆಳಗೆ ಸ್ರ್ಕೋಲ್ ಮಾಡಿ)

”ನಾವು ಪ್ರತಿದಿನ ನೀಲಿ ಬೆಳಕು ವೀಕ್ಷಣೆಗಾಗಿ ಮಂಗಳೂರಿನ ಬೀಚ್‌ಗೆ ಬರುತ್ತಿದ್ದೇವೆ. ಎಲ್ಲ ಕಡೆ ಜನ ಜಾತ್ರೆಯೇ ಸೇರುತ್ತಿದ್ದಾರೆ. ನಸುಕಿನ ವೇಳೆ 2ಗಂಟೆಯವರೆಗೂ ಜನ ಕುತೂಹಲದಿಂದ ಬೀಚ್‌ಗೆ ಬರುತ್ತಿದ್ದಾರೆ. ಕೆಲವರು ರಿಕ್ಷಾ, ಕಾರುಗಳಲ್ಲಿ ಬಂದರೆ, ದೂರದ ಹಳ್ಳಿಯ ಜನ ಬಸ್ ಮಾಡಿಕೊಂಡು ಕೂಡ ಬರುತ್ತಿದ್ದಾರೆ. ನಮ್ಮ ಜಿಲ್ಲೆಯವರು ಮಾತ್ರವಲ್ಲದೆ, ಬೆಂಗಳೂರು, ಚಿಕ್ಕಮಗಳೂರು ಜಿಲ್ಲೆಯವರು ಕೂಡ ಈ ವಿಸ್ಮಯವನ್ನು ಕಾಣಲು ಮಂಗಳೂರಿಗೆ ಬರುತ್ತಿದ್ದಾರೆ. ಕೆಲವು ಕಡೆ ಈ ನೀಲಿ ಬೆಳಕಿನ ದೃಶ್ಯ ಕಡಿಮೆ ಆಗುತ್ತಿದ್ದು, ನ.25ರಂದು ಮಧ್ಯರಾತ್ರಿ ಬಳಿಕ ಕೆಲವು ಭಾಗಗಳಲ್ಲಿ ತುಂಬಾ ಹೆಚ್ಚಿನ ಬೆಳಕು ಕಂಡುಬಂದಿದೆ”. ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/