ರೈಲಿನಲ್ಲಿ ಸೆಲ್ಫಿ ತೆಗೆಯುವ ಸಲುವಾಗಿ ಸಜೀವ ದಹನನಾದ 13 ವರ್ಷದ ಬಾಲಕ! ; ವೈರಲ್ ವೀಡಿಯೋ.ಭುವನೇಶ್ವರ: ರೈಲು ಬೋಗಿಯ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ 13 ಬಾಲಕನಿಗೆ ವಿದ್ಯುತ್‌ ತಗುಲಿ ಸಜೀವ ದಹನಗೊಂಡ ಘಟನೆ ಒಡಿಶಾದ ಗಜಪತಿ ಜಿಲ್ಲೆಯಲ್ಲಿ ನಡೆದಿದೆ. ಕೋವಿಡ್‌ ಐಸೊಲೇಷನ್‌ ಕೇಂದ್ರವಾಗಿ ಈ ರೈಲನ್ನು ಪರಿವರ್ತಿಸಲಾಗಿದೆ. ಪಿ. ಸೂರ್ಯ ಎಂಬ 13 ವರ್ಷದ ಬಾಲಕ ತನ್ನ ಇಬ್ಬರು ಸ್ನೇಹಿತರ ಜತೆಗೂಡಿ ಈ ರೈಲನ್ನು ಏರಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ವಿದ್ಯುತ್‌ ತಂತಿ ತಾಗಿ ಸೂರ್ಯ ಸ್ಥಳದಲ್ಲೇ ಸುಟ್ಟು ಮೃತಪಟ್ಟಿದ್ದಾನೆ. ಆತನ ಇಬ್ಬರು ಸ್ನೇಹಿತರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೆಲ್ಫಿ ತೆಗೆಯಲು ಕೈ ಮೇಲೆ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ಕೈತಗುಲಿದೆ. ತಂತಿಯಲ್ಲಿ ವಿದ್ಯುತ್ ಪ್ರಸರಿಸುತ್ತಿದ್ದ ಹಿನ್ನೆಲೆಯಲ್ಲಿ ಅದು ತಗುಲಿ ಬೆಂಕಿ ಹೊತ್ತಿಕೊಂಡಿದೆ.

ಬಾಲಕನ ಮೈಗೆ ಬೆಂಕಿ ತಗುಲಿ ಆತ ಅಲ್ಲಿಯೇ ಸಜೀವ ದಹನವಾಗಿದ್ದಾನೆ. ಘಟನೆಯಲ್ಲಿ ಬೋಗಿಯ ಛಾವಣಿ ಸಂಪೂರ್ಣ ಸುಟ್ಟುಹೋಗಿದ್ದು, ಅಗ್ನಿಶಾಮಕಗಳನ್ನು ಬಳಸಿ ಬೆಂಕಿ ನಂದಿಸಿದ್ದಾರೆ. ಈ ಬೋಗಿಗಳನ್ನು ಕೋವಿಡ್‌ ಕ್ವಾರಂಟೈನ್‌ ಕೇಂದ್ರಗಳಾಗಿ ಬಳಸಲಾಗುತ್ತಿತ್ತು. ನಿಲ್ದಾಣದ ಎರಡನೇ ಮಾರ್ಗದಲ್ಲಿ ಇವುಗಳನ್ನು ನಿಲ್ಲಿಸಲಾಗಿತ್ತು. ಮುಖ್ಯದ್ವಾರದಿಂದ ಸುಮಾರು 100 ಮೀಟರ್ ದೂರದಲ್ಲಿ ಅವುಗಳಿದ್ದವು. ಬಾಲಕರು ಅಲ್ಲಿಗೆ ಹೋಗಿ ಮೇಲಕ್ಕೆ ಹೋಗಿರುವುದನ್ನು ಯಾರೂ ಗಮನಿಸಿಲ್ಲ ಎನ್ನಲಾಗಿದೆ. ಘಟನೆಯ ತನಿಖೆಗಾಗಿ ವಾಲ್ಟೇರ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಂದ ಕಿರಿಯ ಆಡಳಿತ ತಂಡವನ್ನು ರೈಲ್ವೆ ಇಲಾಖೆ ರಚಿಸಿದೆ

ಇದನ್ನೂ ಓದಿ :  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ-ಎಸ್‍ಐಟಿಗೆ ಮುಖ್ಯಸ್ಥರೇ ಇಲ್ವಾ?

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/