MUST WATCH: ಲೈವ್ ರಿಪೋರ್ಟಿಂಗ್ ವೇಳೆಯಲ್ಲೇ ಕುಸಿದ ಸೇತುವೆ! ; ಮೈ ಝಲ್ ಎನ್ನಿಸುವ ವೀಡಿಯೋ.ವಾಷಿಂಗ್ಟನ್: ಪ್ರತಿಕೋದ್ಯಮದಲ್ಲಿ ವರದಿಗಾರಿಕೆ ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ ನೈಸರ್ಗಿಕ ವಿಕೋಪಗಳದಾಂತದ ಸಂದರ್ಭದಲ್ಲಿ ವರದಿಗಾರಿಕೆ ಮಾಡುವುದಕ್ಕೆ ಹೆಚ್ಚಿನ ಧೈರ್ಯ ಇರಬೇಕಾಗುತ್ತದೆ. ಅದೇ ರೀತಿಯ ಧೈರ್ಯದಿಂದ ವರದಿಗಾರಿಕೆ ಮಾಡಲು ಹೋದ ಪತ್ರಕರ್ತೆಯೊಬ್ಬಳು, ಕೊಚ್ಚಿ ಹೋಗುತ್ತಿದ್ದ ಸೇತುವೆಯಿಂದ ಸ್ವಲ್ಪದರಲ್ಲಿ ಬಚಾವಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.ಅಮೆರಿಕದ ಫಾಕ್ಸ್ 46 ವಾಹಿನಿಯ ಅಂಬಾರ ರಾಬರ್ಟ್ ಹೆಸರಿನ ಪತ್ರಕರ್ತೆ ಸೇತುವೆಯೊಂದರ ಬಳಿಯಿಂದ ಲೈವ್ ವರದಿಗಾರಿಕೆ ಮಾಡುತ್ತಿದ್ದರು.

ಅಪಾರ ಪ್ರಮಾಣದ ಮಳೆಯಾಗಿದ್ದರಿಂದ ಸೇತುವೆಯ ಕೆಳಗೆ ಅತಿ ಹೆಚ್ಚು ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ಸೇತುವೆ ಕೊಚ್ಚಿ ಹೋಗುವ ರೀತಿಯಲ್ಲಿದ್ದದ್ದನ್ನು ಪತ್ರಕರ್ತೆ ಕೇವಲ 1 ಮೀಟರ್ ದೂರದಲ್ಲಿ ನಿಂತು ವರದಿ ಮಾಡಿದ್ದಾರೆ. ಅದೇ ಸಮದಯಲ್ಲಿ ಸೇತುವೆಯ ಮಧ್ಯಭಾಗ ಕುಸಿದು ಬಿದ್ದಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಅದೃಷ್ಟವಶಾತ್ ಪತ್ರಕರ್ತೆಗೆ ಯಾವುದೇ ಹಾನಿಯಾಗಿಲ್ಲ. ಅಮೆರಿಕದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಅಲ್ಲಿನ ರಾಷ್ಟ್ರೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ ಕ್ಯಾಟವ್ಬಾ ಕೌಂಟಿಯ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುತ್ತಿತ್ತು ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ. ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.

http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ಸಹೋದರನ ಸಿಡಿ ರಿಲೀಸ್! ಸತೀಶ್ ಜಾರಕಿಹೊಳಿ ಎಲ್ಲಿದ್ದಾರೆ ಗೊತ್ತಾ?!