VIDEO: ರನ್ವೇಯಲ್ಲಿ ನಿಂತಿದ್ದ ವಿಮಾನಕ್ಕೆ ದಾಳಿಯಿಟ್ಟ ಜೇನುನೊಣಗಳ ಹಿಂಡು!, ಮುಂದೇನಾಯ್ತು?!ಕೊಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೆ ನಿಂತಿದ್ದ ವಿಮಾನಗಳಿಗೆ ಜೇನುನೊಣಗಳು ದಾಳಿ ಮಾಡಿದ ವಿಚಿತ್ರ ಘಟನೆ ಸಂಭವಿಸಿದೆ. ಘಟನೆಯಲ್ಲಿ ವಿಸ್ತಾರಾ ಏರ್ಲೈನ್ಸ್ನ ಎರಡು ವಿಮಾನಗಳಿಗೆ ಜೆನುನೋಣಗಳು ಸುತ್ತುವರೆದಿವೆ. ಪ್ರಸ್ತುತ ಘಟನೆಯ ಕುರಿತಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆಯಿಸಿಕೊಳ್ಳಲಾಗಿದೆ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿರುವ ವಿಸ್ತಾರ ಏರ್ಲೈನ್ಸ್ ವಿಮಾನದ ಕಿಟಕಿಗೆ ಜೇನುನೊಣಗಳ ಸಮೂಹ ಮುತ್ತಿಕೊಂಡಿದೆ. ಸಾಕಷ್ಟು ಪ್ರಯತ್ನದ ಬಳಿಕವೂ ಕೂಡ ಜೇನುನೊಣಗಳು ಕದಲದ ಕಾರಣ ಅಗ್ನಿಶಾಮಕ ಸಿಬ್ಬಂದಿಗಳನ್ನು ಕರೆಯಿಸಲಾಗಿದೆ. ಅಗ್ನಿಶಾಮಕ ಇಲಾಖೆಯು ಸಿಬ್ಬಂದಿಗಳು ತೀವ್ರ ಒತ್ತಡದಿಂದ ಬರುವ ನೀರನ್ನು ಸಿಂಪಡಿಸುವ ಮೂಲಕ ನೊಣಗಳನ್ನು ಓಡಿಸಲು ಯಶಸ್ವಿಯಾಗಿದ್ದಾರೆ. ಈ ಘಟನೆಯ ಬಳಿಕವೂ ಕೂಡ ವಿಮಾನಗಳು ಸುಮಾರು ಒಂದು ಗಂಟೆಗಳ ಕಾಲ ರನ್ ವೆಯಲ್ಲಿಯೇ ನಿಂತಿವೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಟ್ವಿಟರ್ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ತಮಾಷೆ ಮಾಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಓರ್ವ ಬಳಕೆದಾರ ‘ಒಳಗೆ ಜೇನುತುಪ್ಪವು ಪ್ಯಾನ್‌ಕೇಕ್‌ಗಳಂತೆ ಕಾಣುತ್ತದೆ’ ಎಂದು ಬರೆಯುವ ಮೂಲಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು, ‘ಹನಿಬೀ ಪಂಚತಾರಾ ವಿಸ್ಟಾರಾ ತಿನ್ನಲು ಹಾತೊರೆಯುತ್ತಿವೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಕೋಲ್ಕತ್ತಾದ ಜನರು ಸಿಹಿತಿಂಡಿಗಳನ್ನು ಇಷ್ಟಪಡುತ್ತಾರೆ ಎಂಬುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.’ ಎಂದಿದ್ದಾರೆ. 2019ರಲ್ಲಿ ಇಂತಹುದೇ ಘಟನೆ ನಡೆದಿತ್ತು. ಇದಕ್ಕೂ ಮೊದಲು 2019 ರಲ್ಲಿಯೂ ಕೂಡ ಕೋಲ್ಕತ್ತಾ ಏರ್ಪೋರ್ಟ್ ನಲ್ಲಿ ಇದೆ ರೀತಿಯ ಘಟನೆ ಸಂಭವಿಸಿತ್ತು. ಈ ವೇಳೆ ಅಗರ್ತಲಾಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನದ ಮೇಲೆ ಜೇನುನೊಣಗಳ ತಂಡ ದಾಳಿ ನಡೆಸಿತ್ತು. ಈ ಕಾರಣ ವಿಮಾನ ಸಂಚಾರದಲ್ಲಿ ಸುಮಾರು ಎರಡೂವರೆ ಗಂಟೆ ವಿಳಂಬವಾಗಿತ್ತು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/