ಸಖತ್ ಟ್ರೋಲ್‌ಗೆ ಒಳಗಾಗಿದೆ ಈ ವೈರಲ್ ವಿಡಿಯೋ, ಕಾರಣ ತಿಳಿಯಲು ಇಲ್ಲಿ ಕ್ಲಿಕ್ ಮಾಡಿಈಗ ಸಾಮಾಜಿಕ ಜಾಲತಾಣಗಳು ಸಾಕಷ್ಟು ಸಕ್ರಿಯವಾಗಿವೆ. ಒಬ್ಬ ವ್ಯಕ್ತಿಯನ್ನು ರಾತ್ರೋರಾತ್ರಿ ಜಗತ್ ಪ್ರಸಿದ್ಧಿ ಮಾಡುವ ತಾಕತ್ತೂ ಅದಕ್ಕಿದೆ ಹಾಗೆಯೇ ಫೇಮಸ್ ಆದ ಡ್ರೋಣ್ ಪ್ರತಾಪನಂತ ಕಾಗೆ ಪ್ರತಾಪನ್ನು ಒಂದೇ ದಿನದಲ್ಲಿ ಕೆಳಗೆ ಹಾಕುವ ತಾಕತ್ತೂ ಸಾಮಾಜಿಕ ಜಾಲತಾಣಕ್ಕಿವೆ.

ಇತ್ತೀಚಿಗೆ ಮುಸ್ಲಿಂ ಯುವತಿಯೊಬ್ಬರು ತಮ್ಮಣ್ಣ ಮುಗ್ಧ ಅಮಾಯಕ ಎನ್ನುವಂತೆ ಬಿಂಬಿಸುವ ಭರದಲ್ಲಿ ‘ನಮ್ಮಣ್ಣ ರಾತ್ರಿ ಕೊತ್ತೀಮರಿ ತರೋಕೆ ಹೋಗಿದ್ದ’ ಎನ್ನು ವೀಡಿಯೋ ಈಗ ಬಹಳ ಟ್ರೆಂಡಿಂಗ್ ನಲ್ಲಿವೆ. ಅದರೊಂದಿಗೆ ಈಗ ಇನ್ನೊಂದು ವೀಡಿಯೋ ವೈರಲ್ ಆಗಿದೆ.

ಧೂಳಿನಂತಿರುವ ಸಿಮೆಂಟ್‌ ಕಲ್ಲಿನಂತಾಗಲು ಮುಖ್ಯ ಕಾರಣ ಅದರ ಹರಳುವಿಕೆಯ ಗುಣ. ಅಂದರೆ, ಅದು ಹರಳಿನಂತೆ ಒಂದು ಕಣಕ್ಕೆ ಮತ್ತೂಂದು ಕಣ ಅಂಟಿಕೊಂಡು ವಜ್ರಕಾಯ ಆಗಿಬಿಡುತ್ತದೆ. ಈ ರಾಸಾಯನಿಕ ಕ್ರಿಯೆಗೆ ನೀರು ಅತ್ಯವಶ್ಯಕ. ಒಂದೇ ದಿನಕ್ಕೆ ಇಪ್ಪತ್ತು ದಿನದ ನೀರನ್ನು ಕೊಟ್ಟರೆ ಕೆಲಸ ಕೆಡುತ್ತದೆ. ಕಾಂಕ್ರಿಟಿನ ಹದ, ಸಮಯ ನೋಡಿಕೊಂಡು ಅದಕ್ಕೆ ನೀರು ಉಣಿಸಬೇಕಾಗುತ್ತದೆ. ಅಂತಹದರಲ್ಲಿ ಇಲ್ಲೋರ್ವ ವ್ಯಕ್ತಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಮಳೆ ಬರುವಾಗಲೂ ಕ್ಯೂರಿಂಗ್ ಮಾಡುತ್ತಿದ್ದಾರೆ. ಈ ವೀಡಿಯೋ ಈಗ ಸಾಕಷ್ಟು ಸದ್ದು ಮಾಡುತ್ತಿದೆ.