ವೀಡಿಯೋ ನೋಡಿ ; ತನ್ನ ಕೊಂದು ತಿನ್ನಲು ಬಂದವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ ನಂದಿ!ರಾಜ್ಯಾದ್ಯಂತ ಅಕ್ರಮ ಗೋಸಾಗಾಟ ಹೆಚ್ಚಾಗುತ್ತಿರುವ ಬೆನ್ನಲ್ಲೇ ತನ್ನನ್ನು ಕೊಂದು ತಿನ್ನಲು ಬಂದವರನ್ನು ನಂದಿಯೊಂದು ಅಟ್ಟಾಡಿಸಿ ಅಪ್ಪಚ್ಚಿ ಮಾಡಿರುವ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ರಾಜ್ಯದಲ್ಲಿ ದಿನೇ ದಿನೇ ಅಕ್ರಮ ಗೋಸಾಗಾಟ ಹೆಚ್ಚಾಗುತ್ತಿದೆ, ಚಿಕ್ಕಮಗಳೂರು, ಮಂಗಳೂರು ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅವ್ಯಾಹತವಾಗಿ ಗೋಕಳ್ಳತನ ನಡೆಯುತ್ತಲೇ ಇದೆ. ಇತ್ತ ಪೊಲೀಸರೂ ನಿರ್ಲಕ್ಷ್ಯ ತೋರುತ್ತಿದ್ದಾರೆಂಬ ಗಂಭೀರ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಇದಕ್ಕೆ ಸಂಬಂಧಿಸಿದ್ದನ್ನೂ ಓದಿ : ಗೋಕಳ್ಳತನ : ತನ್ನ ಅಮ್ಮನನ್ನು ಕದ್ದು ಸಾಗಿಸಿದ ವಾಹನದ ಹಿಂದೆ ಓಡಿದ ಕರು, ವೀಡಿಯೋ ನೋಡಿ

ಇತ್ತೀಚಿಗೆ ಚಿಕ್ಕಮಗಳೂರಿನಲ್ಲಿ ತಾಯಿ ಹಸುವೊಂದನ್ನು ಸ್ಕಾರ್ಪಿಯೋ ಕಾರಿನಲ್ಲಿ ತುಂಬಿಸಿ ಸಾಗಿಸುವಾಗ ಪುಟ್ಟ ಕರು ತನ್ನ ತಾಯಿಯನ್ನು ಕದ್ದೊಯ್ದ ಕಾರಿನ್ನು ಹಿಂಬಾಲಿಸಿದ ಮನಕುಲುಕುವ ವೀಡಿಯೋ ವೈರಲ್ ಆಗಿತ್ತು. ಸದ್ಯ ಈ ವೀಡಿಯೋ ಕೂಡ ವೈರಲ್ ಆಗಿದ್ದು ನೆಟ್ಟಿಗರು ನಂದಿನ್ನು ಕೊಂಡಾಡಿದ್ದಾರೆ. ವೀಡಿಯೋ ನೋಡಿ.