ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ-ಎಸ್‍ಐಟಿಗೆ ಮುಖ್ಯಸ್ಥರೇ ಇಲ್ವಾ?ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿಕುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಇದೀಗ ಮತ್ತೊಂದು ಊಹಿಸಲಾಗದ ಹೊಸ ತಿರುವು ಸಿಕ್ಕಿದೆ.

ಎಸ್ ಐಟಿ ಮುಖ್ಯಸ್ಥರಾದ ಸೌಮೆಂದು ಮುಖರ್ಜಿ ವೈದ್ಯಕೀಯ ರಜೆಯ ಮೇಲೆ ಹೊರಗೆ ಉಳಿದಿದ್ದರು. ಈ ಮೂಲಕ ಎಸ್‍ಐಟಿಗೆ ಮುಖ್ಯಸ್ಥರೇ ಇಲ್ಲದಂತಾಗಿದೆ. ಪ್ರಕರಣ ವಿಚಾರಣೆ ಮಾಡುವವರು ಯಾರು ಅಂತಾ ಗೊತ್ತಾಗುತ್ತಿಲ್ಲ ಪ್ರಕರಣ ಆರಕ್ಕೆ ಎರಲಿಲ್ಲ ಮೂರಕ್ಕೆ ಇಳಿಯಲ್ಲಿಲ ಎಂಬಂತಾಗಿದೆ. ಎಸ್‍ಐಟಿಯಿಂದ ತನಿಖೆ ನಡೆಯುತ್ತಾ ಇದ್ದರೂ. ಎಸ್‍ಐಟಿ ಮುಖ್ಯಸ್ಥರೇ ಇಲ್ಲವಾಗಿದೆ ಪ್ರಕರಣ ತನಿಖೆಯನ್ನು ಗಮನಿಸಿದಾಗ ತಟಸ್ಥವಾಗಿಯೇ ಉಳಿದಿದೆ ಎನ್ನಬಹುದು.

ಅನಾರೋಗ್ಯ ಕಾರಣದ‌ ಬೆನ್ನಲ್ಲೇ ಎಸ್‍ಐಟಿ ಮುಖ್ಯಸ್ಥರು ಸುದೀರ್ಘ ರಜೆಗೆ ಹೋಗಿದ್ದಾರೆ. ಆದರೆ ಈಗ ಈ ರಜೆಯ ಹಿಂದೆಯೇ ಸಾಕಷ್ಟು ಅನುಮಾನಗಳು ಸುತ್ತು ಒರೆದಿವೆ. ಪ್ರಬಲ ನಾಯಕ ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಒತ್ತಡ ಸಹಿಲಾರದೇ ತೆಗೆದುಕೊಂಡ್ರಾ..? ಎಂಬ ಅನುಮಾನಗಳು ಕೂಡ ಕಾಡುತ್ತಿವೆ.

ಇದನ್ನೂ ಓದಿ :  ದಿವಂಗತ ಉದಾಸಿಯವರ ಬಗ್ಗೆ ನಿಮಗೆಷ್ಟು ಗೊತ್ತು? ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ನೋಡಲೇಬೇಕು?

ಇಡೀ ಪ್ರಕರಣ ಬೇರೆ ರೀತಿಯಲ್ಲೇ ಸಾಗುತ್ತಾ ಇದೆ. ಅದೇ ವಿಚಾರಕ್ಕೆ ಹೊರನಡೆದ್ರಾ? ಈ ಅನುಮಾನಗಳು ಈಗ ಪ್ರಾರಂಭವಾಗಿದ್ದು, ಯಾವುದೇ ಮಾಹಿತಿಯನ್ನು ಹೊರಗೆ ಹಾಕಿಲ್ಲ. ಸೌಮೆಂದು ಮುಖರ್ಜಿ ಅವರ ಅನುಪಸ್ಥಿತಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತನಿಖೆಯ ಜವಬ್ದಾರಿ ಹೊಯಿಸಿಕೊಂಡಿದ್ದಾರೆ.