ವೀಡಿಯೋ ವೈರಲ್ ಆದ ನಂತರ ಮೊದಲ ಬಾರಿಗೆ ಬಾರೀ ಸ್ಫೋಟಕ ಬಿಚ್ಚಿಟ್ಟ ರಮೇಶ್ ಜಾರಕಿಹೊಳಿಬೆಂಗಳೂರು: ಅದು ಫೇಕ್ ವಿಡಿಯೋವಾಗಿದ್ದು ನಾನೂ ತಪ್ಪೇ ಮಾಡಿಲ್ಲ, ಯಾಕೆ ರಾಜೀನಾಮೆ ನೀಡಬೇಕು? ಹೀಗೆಲ್ಲ ವಿಚಾರ ಮಾಡಿದರೆ ದಿನಕ್ಕೊಂದು ವಿಕೆಟ್ ಬೀಳುತ್ತವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. (ವೀಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿ)

ಈ ಬಗ್ಗೆ ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿದ ಅವರು, ನಾನು ಈಗಾಗಲೇ ಮುಖ್ಯಮಂತ್ರಿ, ಹೈ ಕಮಾಂಡ್ ಜೊತೆ ಮಾತನಾಡಿದ್ದೇನೆ. ನಾನು ತಪ್ಪು ಮಾಡಿಲ್ಲ, ಆ ಯುವತಿ ಯಾರೆಂದು ಗೊತ್ತಿಲ್ಲ. ರಾಜೀನಾಮೆ ನೀಡುವುದಿಲ್ಲ. ಮೊದಲ ಬಾರಿಗೆ ರಾಜಕೀಯ ಷಡ್ಯಂತ್ರದಲ್ಲಿ ಸಿಲುಕಿದ್ದೇನೆ. ದಯವಿಟ್ಟು ಸಹಕರಿಸಿ, ತನಿಖೆ ನಡೆಯಲಿ, ಸತ್ಯ ಬೆಳಕಿಗೆ ಬರುತ್ತೆ ಎಂದರು.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ನಾನು ತಪ್ಪು ಮಾಡಿದಂತಾಗುತ್ತದೆ. ಹೀಗಾಗಿ ರಾಜೀನಾಮೆ ಕೊಡಲ್ಲ. ನಾನು ತಪ್ಪು ಮಾಡಿಲ್ಲ, ಆ ಯುವತಿಯನ್ನೇ ನೋಡಿಲ್ಲ. ವಿಧಾನಸಭೆ ಉಪಚುನಾವಣೆಯಲ್ಲಿ ಸಹ ಇದೇ ರೀತಿ ಷಡ್ಯಂತ್ರ ನಡೆಯಿತು. ಇದನ್ನು ಊಹಿಸಲು ಸಹ ಸಾಧ್ಯವಿಲ್ಲ. ಸೂಕ್ತ ತನಿಖೆ ನಡೆಯಲಿ, ತಪ್ಪಿತಸ್ಥನೆಂದು ತಿಳಿದರೆ ಯಾವುದೇ ಶಿಕ್ಷೆಗೆ ಸಿದ್ಧನಿದ್ದೇನೆ ಎಂದು ಹೇಳಿದರು.