ಸುವರ್ಣ ನ್ಯೂಸ್ ಯಾಕೆ ಬರಲ್ಲಾ? ಏರ್ಟೆಲ್ ಗೆ ಕರೆ ಮಾಡಿ ಹಿಗ್ಗಾಮುಗ್ಗಾ ಉಗಿದ ಯುವಕ! ಆಡಿಯೋ ಕೇಳಿ!ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಮುಸ್ಲಿಂ ಗಲಭೆಕೋರರು ನಡೆಸಿದ ಪೂರ್ವನಿಯೋಜಿಕ ಕೃತ್ಯದ ವರದಿ ಮಾಡಿದ್ದ ಸುವರ್ಣ ನ್ಯೂಸ್ ಪ್ರತಿನಿಧಿ, ಕ್ಯಾಮರಾ ಮ್ಯೆನ್ ಮೇಲೆ ಹಲ್ಲೆ ನಡೆದಿತ್ತು. ಅಲ್ಲದೇ ಸುವರ್ಣ ನ್ಯೂಸ್ ವಾಹನ ಹಾಗೂ ಕ್ಯಾಮರಾ ಕೂಡ ಲೈವ್ ನಲ್ಲೇ ಧ್ವಂಸಗೊಳಿಸಲಾಗಿತ್ತು.

ಅನೇಕ ಮಾಧ್ಯಮಗಳು ಸತ್ಯ ಮುಚ್ಚಿಟ್ಟಿದ್ದರೂ ಸುವರ್ಣ ನ್ಯೂಸ್ ಮಾತ್ರ ನೇರ ಮತ್ತು ನಿಖರ ವರದಿ ಬಿತ್ತರಿಸಿತ್ತು. ದಾಳಿ ಮಾಡಿದ್ದು ಮುಸ್ಲಿಂ ಯುವಕರೇ ಎಂಬುದನ್ನು ಸುವರ್ಣ ನ್ಯೂಸ್ ತನ್ನ ಸ್ಕ್ರೀನ್ ಮೇಲೆ ಸ್ಪಷ್ಟವಾಗಿ ದಪ್ಪ ಅಕ್ಷರದಲ್ಲಿ ಪ್ರಸಾರ ಮಾಡಿತ್ತು. ಇದರಿಂದ ಕುಪಿತರಾದ ಅನೇಕರು ಸುವರ್ಣ ನ್ಯೂಸ್ ಅನ್ನು ತಮ್ಮ ಟಿವಿ ಇಂದ ತೆಗೆಸುವುದಾಗಿ ಹೇಳಿದ್ದರು. ಆದರೆ ಒಂದೇ ದಿನದಲ್ಲಿ ಸುವರ್ಣ ನ್ಯೂಸ್ ಪರವಾಗಿ ಲಕ್ಷಾಂತರ ಮಂದಿ ಸುವರ್ಣ ನ್ಯೂಸ್ ಪರವಾಗಿ ಅಭಿಯಾನ ಕೈಗೊಂಡರು.

ಇನ್ನು ಏರ್ಟೆಲ್ ಡಿಟಿಹೆಚ್ ನಿಂದ ಸುವರ್ಣ ನ್ಯೂಸ್ ಅನ್ನು ತೆಗೆದುಹಾಕಲಾಗಿತ್ತು, ಏರ್ಟೆಲ್ ಯಾರ ಮಾತು ಕೇಳಿ ಈ ದುರ್ವರ್ತನೆ ತೋರಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಉಂಟಾದ ಬೆನ್ನಲ್ಲೇ ಅತುಲ್ ಕುಮಾರ್ ಸಬರ್ವಾಲ್ ಎಂಬ ವ್ಯಕ್ತಿ ಏರ್ಟೆಲ್ ಗೆ ಕಾಲ್ ಮಾಡಿ ಹಿಗ್ಗಾಮುಗ್ಗಾ ಉಗಿದ್ದಾರೆ ಬಳಿಕ ತಕ್ಷಣವೇ ಸುವರ್ಣ ನ್ಯೂಸ್ ಬರಲಾರಂಭಿಸಿದೆ. ಅಲ್ಲದೆ ಒಂದು ವೇಳೆ ಬರದಿದ್ದಲ್ಲಿ ನಾನು ಕೇಸ್ ದಾಖಲಿಸುತ್ತೇನೆ ಎಂಬುದಾಗಿಯೂ ಅವರು ಹೇಳಿದ್ದಾರೆ. ಆಡಿಯೋ ಕೇಳಿ.