ಪೂಜೆ ಮಾಡುತ್ತಲೇ ಪ್ರಾಣ ಬಿಟ್ಟ ಕಾಂಗ್ರೆಸ್ ಮಾಜಿ ಶಾಸಕ! ; ವಿಡಿಯೋ ವೈರಲ್!ಬೆತುಲ್: ಪೂಜೆ ಮಾಡುತ್ತಿರುವಾಗಲೇ ಹೃದಯಾಘಾತಕ್ಕೀಡಾಗಿ ಮಧ್ಯಪ್ರದೇಶದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ವಿನೋದ್ ದಗಾ ಮೃತಪಟ್ಟಿದ್ದಾರೆ. ನವೆಂಬರ್ 12ರಂದು ಘಟನೆ ನಡೆದಿದ್ದು, ಹೃದಯಾಘಾತದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ವಿನೋದ್ ದಗಾ ಮಧ್ಯಪ್ರದೇಶದ ಬೆತುಲ್ ಕ್ಷೇತ್ರದ ಮಾಜಿ ಶಾಸಕರು. ಕಳೆದ ಗುರುವಾರ ಬೆಳಗ್ಗೆ ಪ್ರತಿನಿತ್ಯದಂತೆ ಬೆತುಲ್ನಲ್ಲಿರುವ ಜೈನ್ ದದಾವಡಿ (ಜೈನರ ದೇವಸ್ಥಾನ)ಗೆ ಪೂಜೆಗೆಂದು ತೆರಳಿದ್ದರು. ದಗಾ ಅವರನ್ನು ಇತ್ತೀಚೆಗಷ್ಟೇ ಮೆಘಾನ್ ಉಪಚುನಾವಣೆಯ ಉಸ್ತುವಾರಿಯನ್ನಾಗಿ ಕಾಂಗ್ರೆಸ್ ನೇಮಿಸಿತ್ತು. ಘಟನೆ ನಡೆದ ಹಿಂದಿನ ದಿನ ದಗಾ ಅವರು ಭೋಪಾಲ್ನಲ್ಲಿ ಸಭೆ ಮುಗಿಸಿಕೊಂಡು ಬೆತುಲ್ಗೆ ಮರಳಿದ್ದರು.

ರಾಜ್ಯ ಕಾಂಗ್ರೆಸ್ನಲ್ಲಿ ದಗಾ ಅವರು ಅನೇಕ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ಕೇಂದ್ರ ಸಹಕಾರ ಬ್ಯಾಂಕ್ನ ಅಧ್ಯಕ್ಷರು ಆಗಿದ್ದರು. ಸದಾ ಇನ್ನಬ್ಬರೊಂದಿಗೆ ಬೆರೆಯುವ, ಸರಳ ಮತ್ತು ಹರ್ಷಚಿತ್ತದ ನಾಯಕನಾಗಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದರು. ಇಂತಹ ನಾಯಕನ ಸಾವು ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದಾರೆ. ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/