ಬ್ರೇಕಿಂಗ್ ನ್ಯೂಸ್ ; ದತ್ತಪೀಠದ ಮಸೀದಿ ಮೈಕ್ ಕಿತ್ತೆಸೆದ ಜಿಲ್ಲಾಡಳಿತ, ಒಂದೇ ದಿನದಲ್ಲಿ ದೂಳೆಬ್ಬಿಸಿದ ವೀಡಿಯೋ!ದತ್ತಪೀಠದಲ್ಲಿನ ಮಸೀದಿಯ ಮೈಕ್ ತೆರವು ಕಾರ್ಯ ಇಂದು ಶ್ರೀರಾಮಸೇನೆಯ ಕಾರ್ಯಕರ್ತರ ಕಡೆಯಿಂದ ಜರುಗಿದ್ದು, ಇದೀಗ ಇದರ ವೀಡಿಯೋ ಎಲ್ಲೆಡೆ ಬಾರಿ ಸಂಚಲನ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗುತ್ತಿರುವ ವೀಡಿಯೋ ನೋಡಿ ಜಿಲ್ಲೆಯ ಜಿಲ್ಲಾಡಳಿತ ಅಧಿಕಾರಿಗಳ ಈ ದಿಟ್ಟ ನಿಲುವಿಗೆ ಎಲ್ಲಾ ಹಿಂದೂ ಬಾಂಧವರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. (ಮಸೀದಿ ಮೈಕ್ ತೆರವು ಕಾರ್ಯದ ವೀಡಿಯೋ ನೋಡಲು ಕೆಳಗೆ ಸ್ಕ್ರೋಲ್ ಮಾಡಿ)

ಶ್ರೀರಾಮಸೇನೆ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನ ಇಂದಿನಿಂದ ಐದು ದಿನಗಳ ಕಾಲ ನಡೆಯಲಿದೆ. ಇದೇ ನವೆಂಬರ್ 26 ರಂದು ದತ್ತಪೀಠದಲ್ಲಿ ಜಿಲ್ಲಾಡಳಿತ ನಿರ್ಮಿಸಿರುವ ಶೆಡ್ಗಳಲ್ಲಿ ಹೋಮ, ಹವನ ನಡೆಯಲಿದ್ದು, ದತ್ತಭಕ್ತರು ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಕೊರೊನಾವಿರುವ ಕಾರಣ ಶೋಭಾಯಾತ್ರೆಗೆ ಬ್ರೇಕ್ ಹಾಕಲಾಗಿದ್ದು, ಕಡಿಮೆ ಸಂಖ್ಯೆಯಲ್ಲಿ ದತ್ತಭಕ್ತರು ಭಾಗವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ, ಜಿಲ್ಲಾಡಳಿತ ಸೂಚನೆಯಂತೆ ಕಡಿಮೆ ಸಂಖ್ಯೆಯಲ್ಲಿ ದತ್ತಭಕ್ತರು 26 ರಂದು ದತ್ತಪೀಠಕ್ಕೆ ತೆರೆಳಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ.

ADVERTISEMENT

ಪ್ರತಿಬಾರಿ ನವೆಂಬರ್, ಡಿಸೆಂಬರ್ ನಲ್ಲಿ ದತ್ತಮಾಲಾ ಆಚರಣೆ ಕಾಫಿನಾಡಿನಲ್ಲಿ ನಡೆದುಕೊಂಡು ಬರುತ್ತಿದ್ದು, ದತ್ತಪೀಠಕ್ಕಾಗಿ ಹೋರಾಟ ನಡೆಯುತ್ತಲೇ ಇದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ದತ್ತಪೀಠ ಹಿಂದೂಗಳಿಗೆ ಬರುತ್ತೆ ಅಂತಾ ಲೆಕ್ಕ ಹಾಕಿದ್ದ ಹೋರಾಟಗಾರರಿಗೆ ನಿರಾಸೆಯಾಗಿದೆ. ಪೂರ್ಣ ಪ್ರಮಾಣದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ದತ್ತಪೀಠ ವಿವಾದ ಬಗೆಹರಿಸುವ ಮನಸ್ಸು ಮಾಡಿಲ್ಲ. ಇದೀಗ ಮತ್ತೇ ಶ್ರೀರಾಮ ಸೇನೆ ಹೋರಾಟ ಶುರುಮಾಡಿದ್ದು, ಕಳೆದ ಹಲವು ವರ್ಷಗಳಿಂದ ವಿವಾದಿತ ಸ್ಥಳವಾಗಿರುವ ದತ್ತಪೀಠದಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.ದಶಕಗಳ ಹಿಂದೆ ಆರಂಭವಾದ ಸಮಸ್ಯೆಯನ್ನು ಎರಡು ಸಮುದಾಯಗಳ ನಡುವೆ ಯಾವುದೇ ಗಲಾಟೆ ಇಲ್ಲದ ಹಾಗೆ ಶಾಂತ ರೀತಿಯಲ್ಲಿ ಸರ್ಕಾರ ಬಗೆಹರಿಸಬೇಕಿದೆ.

ಇದನ್ನೂ ಓದಿ :  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ-ಎಸ್‍ಐಟಿಗೆ ಮುಖ್ಯಸ್ಥರೇ ಇಲ್ವಾ?


ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/