MUST WATCH: ಬಾಲಕನನ್ನು ತನ್ನ ಜೊತೆಗೆ 30 ಅಡಿ ಮೇಲೆ ಕೊಂಡೊಯ್ದ ‘ಡ್ರ್ಯಾಗನ್’! ; ಇಲ್ಲಿದೆ ಒಂದು ಭಯಾನಕ ವೀಡಿಯೋ!ಜಕಾರ್ತ: ಸುಮಾರು 12 ವರ್ಷದ ಬಾಲಕನನ್ನು ಗಾಳಿಪಟ ಎಳೆದೊಯ್ದ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ. ಬಾಲಕ 30 ಅಡಿ ಎತ್ತರದಿಂದ ಬೀಳುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡಿಸೆಂಬರ್ 1ರಂದು ಪ್ರಿಂಗ್ಸೆವ್ಯೂ ರೆಜೆನ್ಸಿಯಲ್ಲಿ ಈ ಘಟನೆ ನಡೆದಿದೆ. ಸುಮಾರು 30 ಅಡಿ ಎತ್ತರಕ್ಕೆ ಗಾಳಿಪಟದ ಜತೆ ಹಾರಿರುವ ಈ ಬಾಲಕ ನಂತರ ಗಾಳಿಪಟದ ದಾರ ತುಂಡಾಗಿದ್ದರಿಂದ ನೆಲಕ್ಕೆ ಬಿದ್ದಿದ್ದಾನೆ.

ತನಗಿಂತ ಸುಮಾರು ಮೂರು ಪಟ್ಟು ದೊಡ್ಡದಾದ ಡ್ರ್ಯಾಗನ್ ಪತಂಗವನ್ನು ಬಾಲಕ ಹಾರಿಸುತ್ತಿದ್ದನು. ರಭಸವಾಗಿ ಗಾಳಿ ಬೀಸುತ್ತಿತ್ತು. ಬಾಲಕ ನೋಡು ನೋಡುತ್ತಿದ್ದಂತೆಯೇ ಡ್ರ್ಯಾಗನ್​ ಗಾಳಿಪಟದ ತಂತಿಗೆ ಸಿಲುಕಿಕೊಂಡಿದ್ದಾನೆ. ತನ್ನ ಜತೆಗೆ ಬಾಲಕನನ್ನೂ ಎಳೆದೊಯ್ದಿದೆ. ಬಾಲಕ ಬೀಳುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ :  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ-ಎಸ್‍ಐಟಿಗೆ ಮುಖ್ಯಸ್ಥರೇ ಇಲ್ವಾ?

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/