‘ಕುರ್ತಾ ಏಳೆದು ವರನಿಗೆ ದಾರಿ ತೋರಿಸಿದ ವಧು!’ ; ಸಕ್ಕತ್ ವೈರಲ್ ಆಗುತ್ತಿದೆ ಫನ್ನಿ ವೀಡಿಯೋ.ಮದುವೆ ಮನೆಗಳಲ್ಲಿ ಹಲವಾರು ಬಾರಿ ಹಾಸ್ಯದ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಅದು ಮದುಮಕ್ಕಳ ಮನೆಯವರಿಗಷ್ಟೇ ತಿಳಿದರೆ, ಎಷ್ಟೋ ಬಾರಿ ವಧು-ವರರಿಗೆ ಮಾತ್ರ ಅದು ಅರಿವಾಗಿರುತ್ತದೆ, ಬಹಿರಂಗವಾಗುವುದೇ ಇಲ್ಲ. ಆದರೆ ಮದುಮಕ್ಕಳ ಅದೃಷ್ಟ ಸರಿಯಿಲ್ಲದಿದ್ದರೆ ಅದು ವೈರಲ್​ ಆಗುವುದು ಈಗಿನ ಟ್ರೆಂಡ್​. ಅಂಥದ್ದೇ ಒಂದು ಫನ್ನಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಇದೇನು ದೊಡ್ಡ ವಿಷಯವೂ ಅಲ್ಲ, ಅಥವಾ ಮದುಮಕ್ಕಳು ಮುಜುಗರ ಪಡುವ ಸಂಗತಿಯೂ ಅಲ್ಲ. ಸಾಮಾನ್ಯವಾಗಿ ಮದುವೆ ಮನೆಗಳಲ್ಲಿ ಇದು ಆಗುತ್ತಲೇ ಇರುತ್ತದೆ. ಆದರೆ ಇಲ್ಲಿ ನಡೆದಿರುವುದನ್ನು ಮಾತ್ರ ಯಾರೋ ಶೇರ್​ ಮಾಡಿಕೊಂಡಿರುವ ಕಾರಣ, ಫನ್ನಿ ಎನಿಸಿದೆ.

ಅಷ್ಟಕ್ಕೂ ಇಲ್ಲಿ ಆಗಿದ್ದೇನೆಂದರೆ ಗುರುದ್ವಾರದಲ್ಲಿ ಮದುವೆ ನಡೆಯುತ್ತಿದೆ. ಧಾರ್ಮಿಕ ವಿಧಿವಿಧಾನಗಳು ನಡೆದ ನಂತರ ಮದುಮಕ್ಕಳಿಗೆ ಸುತ್ತುವರಿಯಲು ಹೇಳಲಾಗುತ್ತದೆ. ಆಗ ಇಬ್ಬರೂ ಏಳುತ್ತಾರೆ. ಆಗ ವರ ಉಲ್ಟಾ ಸುತ್ತುಹೊಡೆಯಲು ರೆಡಿಯಾಗುತ್ತಾನೆ. ಆಗ ತತ್​ಕ್ಷಣ ಎಚ್ಚರಿಸಿದ ವಧು ಆತನ ಕುರ್ತಾ ಎಳೆಯುತ್ತಾಳೆ. ತತ್​ಕ್ಷಣ ಎಚ್ಚೆತ್ತುಕೊಂಡ ವರ, ವಧುವಿನ ಹಿಂದೆ ಬರುತ್ತಾನೆ. ನಂತರ ವಧು ಆತನಿಗೆ ಮುಂದೆ ಹೋಗಲು ಅನುವು ಮಾಡಿಕೊಟ್ಟು, ತಾನು ಹಿಂದೆ ಹೋಗುತ್ತಾಳೆ. ಯಾರಿಗೂ ತಿಳಿಯದಂತೆ ವಧು ಆ ಕ್ಷಣದಲ್ಲಿ ವರನನ್ನು ರಕ್ಷಿಸುತ್ತಾಳೆ, ತಾನು ಮಾತ್ರ ಏನೂ ಗೊತ್ತಿಲ್ಲದಂತೆ ತಲೆ ತಗ್ಗಿಸಿಕೊಂಡೇ ಇದ್ದಾಳೆ. ವರನಿಗೆ ಮಾತ್ರ ತಾನು ಮಾಡಿದ್ದು ತಪ್ಪಾಗಿದ್ದು ಗೊತ್ತಾಗಿ ಸದ್ದಿಲ್ಲದೇ ವಧುವಿನ ಹಿಂದೆ ಬರುತ್ತಾನೆ. ಆದರೆ ಯಾರೋ ಕಿಲಾಡಿಗಳು ಈ ವಿಡಿಯೋವನ್ನು ಶೇರ್​ ಮಾಡಿದ್ದು, ಅದೀಗ ಭಾರಿ ವೈರಲ್​ ಆಗಿದೆ. ನಿಜವಾದ ಸಂಗಾತಿ ಸದಾ ಸರಿಯಾದ ಮಾರ್ಗವನ್ನೇ ತೋರುತ್ತಾಳೆ ಎಂಬ ಕ್ಯಾಪ್ಷನ್​ ಹಾಕಲಾಗಿದ್ದು, ಇದಕ್ಕೆ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದಾರೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/