MUST WATCH: ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಈ ವ್ಯಕ್ತಿಗೆ ಇನ್ನು ಸಾವಿಲ್ಲ!!ಕೇರಳ: ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಿಂದ ಪಾರಾಗುವ ಭಯಾನಕ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೆಕೆಂಡ್ಗಳ ಅಂತರದಲ್ಲಿ ನಡೆದ ಈ ದೃಶ್ಯ ನೋಡಿದ ಅನೇಕರು ವ್ಯಕ್ತಿಗೆ ಸಾವೇ ಇಲ್ಲ ಎಂದು ಕಾಮೆಂಟ್ ಬರೆಯುತ್ತಿದ್ದಾರೆ. ಕೇರಳದ ಕೊಲ್ಲಂ ಜಿಲ್ಲೆಯ ಚವಾರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುತ್ತಾರೆ. ಆ ಸಮಯದಲ್ಲಿ ವಾಹನವೊಂದು ನಿಯಂತ್ರಣ ತಪ್ಪಿ ವ್ಯಕ್ತಿಯ ಬದಿಯಿಂದಲೇ ಹಾದು ಹೋಗಿದೆ. ವೇಗದಲ್ಲಿದ್ದ ವಾಹನವು ಎದುರಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದು ಮುಂದೆ ಹೋಗಿದೆ.

ಆದರೆ ಆ ವ್ಯಕ್ತಿಗೆ ವಾಹನ ತನ್ನ ಬದಿಯಿಂದ ಹೋಗಿದ್ದ ವಿಚಾರವು ಗೊತ್ತಾಗಲಿಲ್ಲ. ನಂತರ ವಾಹನವು ಎದುರಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ವ್ಯಕ್ತಿಗೆ ನೈಜ ಘಟನೆ ಗೊತ್ತಾಗಿದೆ. ತಕ್ಷಣವೇ ಭಯಗೊಂಡ ಆತ ಓಡುತ್ತಿರುವ ದೃಶ್ಯ ಸಿಟಿಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಅನೇಕರು ಕಾಮೆಂಟ್ ಬರೆದಿದ್ದಾರೆ. ಅದರಲ್ಲಿ ಒಬ್ಬರು ಈ ವ್ಯಕ್ತಿಗೇ ಸಾವೇ ಇಲ್ಲ ಎಂದು ಕಾಮೆಂಟ್ ಬರೆದಿದ್ದಾರೆ.

ಇದನ್ನೂ ಓದಿ :  ಅಪ್ಪನಿಗೆ ಹುಟ್ಟಿದ ಮಗ ನಾನು ; ವಿಡಿಯೋದಲ್ಲಿ ಕೆಂಡಾಮಂಡಲರಾದ ಜಗ್ಗೇಶ್!

 

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/