ಕೇದಾರನಾಥ ಹಿಮಪಾತದಲ್ಲಿ ಸಿಲುಕಿರುವ ಉತ್ತರ ಪ್ರದೇಶದ ಸಿಎಂ ಯೋಗಿ! ವೀಡಿಯೋ ಈಗ ಸಕ್ಕತ್ ವೈರಲ್.ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ನ ಹಲವೆಡೆ ಭಾರಿ ಹಿಮಪಾತವಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಹಿಮದಿಂದ ಮುಚ್ಚಿ ಹೋಗಿವೆ. ಅದನ್ನ ತೆರವು ಮಾಡುವ ಕೆಲಸ ಭರದಿಂದ ಸಾಗಿದೆ. ಜೊತೆಗೆ ನಿರಂತರ ಹಿಮಪಾತದಿಂದಾಗಿ ಅಲ್ಲಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಕೂಡ ಮುಂದುವರಿದಿದೆ. ಇದೆಲ್ಲದರ ನಡುವೆ ಉತ್ತಾರಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೇದಾರನಾಥ ದೇವಸ್ಥಾನಕ್ಕೆ ಹೋಗಿದ್ದಾರೆ. ಭಾರಿ ಹಿಮಪಾತದಿಂದಾಗಿ ಅವರಿಬ್ಬರೂ ಕೂಡ ಅಲ್ಲೇ ಸಿಲುಕಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹಾಗೂ ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಇಂದು ಕೇದಾರನಾಥ್ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಸೋಮವಾರ ಮುಂಜಾನೆ ದೇವಾಲಯದ ಪೋರ್ಟಲ್ ಸಮಾರೋಪ ಸಮಾರಂಭದಲ್ಲಿ ಇಬ್ಬರು ಸಿಎಂಗಳು ಪಾಲ್ಗೊಂಡರು. ಇಬ್ಬರೂ ಮುಖ್ಯಮಂತ್ರಿಗಳು ಕೇದಾರನಾಥನ ಸನ್ನಧಿಗೆ ಆಗಮಿಸುತ್ತಿದ್ದಂತೆ ಭಾರಿ ಹಿಮಪಾತ ಆಗುವ ಮೂಲಕ ಮಂಜಿನ ಸ್ವಾಗತ ಕೋರಿತು. ತ್ರಿವೇಂದ್ರ ಸಿಂಗ್ ರಾವತ್ ಮತ್ತು ಯೋಗಿ ಆದಿತ್ಯನಾಥ್ ಕೇದಾರನಾಥನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದು, ನಂತರ ಅವರು ಬದ್ರಿನಾಥ್ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ಕೇದಾರನಾಥ ದೇವಸ್ಥಾನವನ್ನು ನಾಳೆ ಮುಚ್ಚಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಸಿಎಂಗಳು ಇಂದೇ ಕೇದಾರನಾಥನ ದರ್ಶನ ಪಡೆದು ಪಾವನರಾದರು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.

http://www.uralsayurveda.in https://www.facebook.com/DrUrals/