ನೀರಿನಲ್ಲಿ ಕೊಚ್ಚಿಹೋಗ್ತಿದ್ದ ವೃದ್ದೆಯ ರಕ್ಷಿಸಿದ ಯುವಕನ ವೀಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ!ಆಯತಪ್ಪಿ ತುಂಗಭದ್ರಾ ಹೆಚ್ ಎಲ್ ಸಿ ಕಾಲುವೆಯಲ್ಲಿ ಬಿದ್ದು ನೀರಿನಲ್ಲಿ ಕೊಚ್ಚಿಹೋಗುತ್ತಿದ್ದಾಗ ಸ್ಥಳೀಯ ಯುವಕನೊಬ್ಬ ಧೈರ್ಯದಿಂದ ತನ್ನ ಪ್ರಾಣದ ಹಂಗನ್ನು ತೊರೆದು ನೀರಿಗೆ ಧುಮುಕಿ ವೃದ್ದೆಯನ್ನು ರಕ್ಷಿಸಿದ ಘಟನೆಯೊಂದು ಬಳ್ಳಾರಿ ಜಿಲ್ಲೆಯ ಆರ್ ಟಿ ಓ ಕಛೇರಿ ಬಳಿ ನಡೆದಿದೆ.

ನಿನ್ನೆ ಮುಖ ತೊಳೆಯಲೆಂದು ಕಾಲುವೆಗೆ ಇಳಿಯುವಾಗ ಆಯ ತಪ್ಪಿ ಬಿದ್ದ ವೃದ್ಧೆ ನೀರಿನಲ್ಲಿಯೇ ಸುಮಾರು ಮುನ್ನೂರು ಮೀ. ದೂರದಷ್ಟು ಕೊಚ್ಚಿಹೋಗುತ್ತಿದ್ದರು. ವೃದ್ಧೆಯ ಚೀರಾಟ ಕೇಳಿದರೂ ಯಾರೂ ರಕ್ಷಿಸುವ ಕಾರ್ಯಕ್ಕೆ ಮುಂದಾಗಿರಲಿಲ್ಲ ಆದರೆ ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ಸ್ಥಳೀಯ ನಿವಾಸಿ ಅಜಯ್ ಎಂಬ ಯುವಕ ತಕ್ಷಣವೇ ನೀರಿಗೆ ಧುಮುಕಿ ವರದ್ದೆಯನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ :  ಐಎಂಎ ಹಗರಣ ; ಕುಮಾರಸ್ವಾಮಿಗೆ ಕಂಟಕ

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಯುವಕ ಅಜಯ್ ಸಾಹಸ, ಧೈರ್ಯಕ್ಕೆ ಮೆಚ್ಚುಗೆಯ ಮಾತು ಕೇಳಿಬರುತ್ತಿದೆ. ವೀಡಿಯೋ ಇಲ್ಲಿದೆ ನೋಡಿ.